ಕನ್ನಡದಲ್ಲೂ ರಿಲೀಸ್ ಆಗಲಿದೆ 'ಅವತಾರ್ -2': ಕನ್ನಡಿಗರ ಆಕ್ರೋಶಕ್ಕೆ ಮಣಿದ ಚಿತ್ರತಂಡ

ಹಾಲಿವುಡ್‌ನ `ಅವತಾರ್ 2′ ಸಿನಿಮಾದ ಕನ್ನಡದಲ್ಲಿ ರಿಲೀಸ್ ಆಗಿಲಿದ್ದು, ಟ್ರೈಲರ್ ಬಿಡುಗಡೆ ಮಾಡಲಾಗಿದೆ.

Share this Video
  • FB
  • Linkdin
  • Whatsapp

ಇತ್ತೀಚೆಗೆ `ಅವತಾರ್ 2′ ಟ್ರೈಲರ್ ರಿಲೀಸ್ ಆಗಿ, ಸಖತ್ ಸೌಂಡ್ ಮಾಡಿತ್ತು. ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವೀವ್ಸ್ ಆಗಿತ್ತು. ಆದರೆ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ ಕನ್ನಡಿಗರು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದರು. ಪ್ರತಿ ಬಾರಿ ಕನ್ನಡಕ್ಕೆ ಯಾಕೆ ಅನ್ಯಾಯ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಕನ್ನಡಿಗರ ಆಕ್ರೋಶಕ್ಕೆ ಮಣಿದು ಕನ್ನಡದಲ್ಲೂ ಟ್ರೈಲರ್ ರಿಲೀಸ್ ಮಾಡಿದೆ ಅವತಾರ್ 2 ಚಿತ್ರತಂಡ. ಅವತಾರ್ ಮೊದಲ ಭಾಗದಲ್ಲಿ ಪಂಡೋರಾ ಎಂಬ ನಿಗೂಢ ಗ್ರಹವನ್ನೇ ಸೃಷ್ಟಿ ಮಾಡಲಾಗಿತ್ತು. ಈ ಬಾರಿಯೂ ನಿರ್ದೇಶಕರು ಪ್ರೇಕ್ಷಕರನ್ನು ಸಮುದ್ರದ ಆಳಕ್ಕೆ ಕರೆದುಕೊಂಡು ಹೋಗಲಿದ್ದು, ಅವತಾರ್ ಎರಡನೇ ಭಾಗವನ್ನು ಆಧುನಿಕ ತಂತ್ರಜ್ಞಾನದಿಂದ ಕಟ್ಟಿಕೊಟ್ಟಿದ್ದಾರೆ. ಕಣ್ಮನ ಸೆಳೆಯುವ ಗ್ರಾಫಿಕ್ಸ್ ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅದರಲ್ಲೂ ತ್ರಿಡಿ ತಂತ್ರಜ್ಞಾನದಲ್ಲಿ ಅವತಾರ್ 2 ಕಣ್ತುಂಬಿಕೊಳ್ಳುವುದೇ ಹಬ್ಬ. ಈ ಬಾರಿ ಸಮುದ್ರ ಆಳದಲ್ಲಿ ಬಹುತೇಕ ಕಥೆ ನಡೆಯುತ್ತದೆ. ಅದನ್ನು ತೆರೆಯಲ್ಲಿ ನೋಡುವುದು ಇನ್ನೂ ರೋಚಕವಾಗಿರುತ್ತದೆ.

Raana Review: ಸಮರ ಕಲೆ ಮೈದಾನದಲ್ಲಿ ರಣ ರಣ ರಾಣ

Related Video