ಮರಾಠಿ ಚೆಲುವೆ ಜೊತೆ ಧನುಷ್ ಡೇಂಟಿಂಗ್? ಸಿಂಗಲ್ ಧನುಷ್ ಮತ್ತೆ ಪ್ರೀತಿಯಲ್ಲಿ ಬಿದ್ರಾ..?

ಕಾಲಿವುಡ್ ನಟ ಧನುಷ್ ಮತ್ತು ಮರಾಠಿ ನಟಿ ಮೃಣಾಲ್ ಠಾಕೂರ್ ನಡುವೆ ಪ್ರೇಮಾಂಕುರವಾಗಿದೆಯೇ? ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಜೋಡಿಯ ಬಗ್ಗೆ ಸಿನಿಲೋಕದಲ್ಲಿ ಹರಿದಾಡುತ್ತಿರುವ ಗಾಸಿಪ್.

Share this Video
  • FB
  • Linkdin
  • Whatsapp

 ಸದ್ಯ ಸಿನಿಲೋಕದಲ್ಲಿ ಹರಿದಾಡ್ತಾ ಇರೋ ಹಸಿ ಬಿಸಿ ಗಾಸಿಪ್ ಇದು. ಕಾಲಿವುಡ್ ಸ್ಟಾರ್ ನಟ ಧನುಷ್, ಮರಾಠಿ ಚೆಲುವೆ ಬಹುಭಾಷಾ ನಟಿ ಮೃಣಾಲ್ ಠಾಕೂರ್ ಜೊತೆಗೆ ಡೇಟ್ ಮಾಡ್ತಾ ಇದ್ದಾರೆ ಅನ್ನೋದು. ಈ ಜೋಡಿ ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ತಾ ಇದ್ದು, ಒಬ್ಬರ ನಡುವೆ ಕುಚ್ ಕುಚ್ ನಡೀತಾ ಇದೆ ಅನ್ನೋ ವದಂತಿ ಹರಿದಾಡ್ತಾ ಇದೆ. ಕಳೆದ ವರ್ಷವಷ್ಟೇ ಧನುಷ್, ಐಶ್ವರ್ಯ ರಜನಿಕಾಂತ್​ರಿಂದ ವಿಚ್ಛೇದನ ಪಡೆದಿದ್ರು. 2 ದಶಕಗಳ ದಾಂಪತ್ಯ ಜೀವನ ಮುರಿದು ಬಿದ್ದ ಮೇಲೆ ಧನುಷ್ ಸಿಂಗಲ್ ಆಗಿದ್ದಾರೆ. ಸೋ ಈ ಸಿಂಗಲ್ ಹೀರೋಗೆ ಈ ಮೃಣಾಲ್ ಮೇಲೆ ಕಣ್ಣು ಬಿದ್ದಿದೆ ಅನ್ನೋ ಸುದ್ದಿ ಸಿನಿಲೋಕದಲ್ಲಿ ಸದ್ದು ಮಾಡ್ತಾ ಇದೆ.

ಇದೇ ಆಗಸ್ಟ್ 1ನೇ ತಾರೀಖು ಮೃಣಾಲ್ ತಮ್ಮ 33ನೇ ಬರ್ತ್​ಡೇನ ಸೆಲೆಬ್ರೇಟ್ ಮಾಡಿಕೊಂಡ್ರು. ಆ ಪಾರ್ಟಿನಲ್ಲಿ ಧನುಷ್ ಹಾಜರಾಗಿದ್ರು. ಧನುಷ್ ಮತ್ತು ಮೃಣಾಲ್ ಒಟ್ಟಿಗೆ ಸಿನಿಮಾ ಮಾಡಿಲ್ಲ. ಆದ್ರೂ ಇವರಿಬ್ಬರ ದೋಸ್ತಿ ಎಲ್ಲರ ಗಮನ ಸೆಳೆಯುವಂತೆ ಮಾಡ್ತು. ಅದ್ರಲ್ಲೂ ಪಾರ್ಟಿನಲ್ಲಿ ಈ ಇಬ್ಬರೂ ಕೈ ಹಿಡಿಕೊಂಡು ಮಾತನಾಡ್ತಾ ಇರೋದನ್ನ ನೋಡಿ ಇವರಿಬ್ಬರ ನಡುವೆ ಏನೋ ನಡೀತಾ ಇದೆ ಅಂತ ಗುಸು ಗುಸು ಶುರುವಾಯ್ತು. ಇನ್ನೂ ಕಳೆದ ತಿಂಗಳು ‘ತೇರೆ ಇಷ್ಕ್ ಮೇ’ ಬಾಲಿವುಡ್ ಸಿನಿಮಾದ ಪಾರ್ಟಿನಲ್ಲೂ ಧನುಷ್ ಮತ್ತು ಮೃಣಾಲ್ ಒಟ್ಟಿಗೆ ಕಾಣಿಸಿಕೊಂಡಿದ್ರು. ಅಲ್ಲಿಗೆ ಈ ಜೋಡಿ ಪದೇ ಪದೇ ಪಾರ್ಟಿನಲ್ಲಿ ಕ್ಲೋಸ್ ಆಗಿ ಕಾಣಿಸಿಕೊಂಡಿರೋದನ್ನ ನೋಡಿ ಈ ಡೇಟಿಂಗ್ ರೂಮರ್ ಹುಟ್ಟಿಕೊಂಡಿದೆ. ಈ ವಿಷ್ಯದ ಬಗ್ಗೆ ಧನುಷ್ ಆಗಲಿ ಮೃಣಾಲ್ ಆಗಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದ್ರೆ ಗಾಸಿಪ್ ರೂಪರ್ ಸುಳ್ಳು ಅಂತಲೂ ಹೇಳಿಲ್ಲ. ಸೋ ಈ ಗಾಸಿಪ್ ಬರೀ ಗಾಸಿಪ್ ಗಲ್ಲಿಯಲ್ಲೇ ಉಳಿಯುತ್ತಾ,.? ಅಥವಾ ಇಬ್ಬರ ರಿಲೇಷನ್ ಶಿಪ್ ಮುಂದಕ್ಕೆ ಹೋಗುತ್ತಾ ಕಾದುನೋಡಬೇಕಿದೆ.

Related Video