
ನೆಲಕಚ್ಚಿದ ಘಾಟಿ.. ಗುಡ್ ಬೈ ಎಂದ ಸ್ವೀಟಿ: ಅನುಷ್ಕಾ ಶೆಟ್ಟಿಗೆ ಕಾಡ್ತಿದೆಯಾ ವಿಚಿತ್ರ ಕಾಯಿಲೆ?
ಇತ್ತೀಚಿಗೆ ಅನುಷ್ಕಾ ಎಲ್ಲೂ ಬಹಿರಂಗವಾಗಿ ಕಾಣಿಸ್ತಾ ಇಲ್ಲ. ಈ ನಡುವೆ ಸೋಷಿಯಲ್ ಮಿಡಿಯಾದಿಂದಲೂ ದೂರವಾಗ್ತಿನಿ ಅಂದಿರೋದನ್ನ ನೋಡಿದ ಫ್ಯಾನ್ಸ್ ಯಾಕೆ ಹೀಗೆ ಮಾಡ್ತಿದ್ದೀರಿ ಅಂತ ಸ್ವೀಟಿಯನ್ನ ಪ್ರಶ್ನೆ ಮಾಡ್ತಾ ಇದ್ದಾರೆ.
ಕಳೆದ ವಾರ ಅನುಷ್ಕಾ ಶೆಟ್ಟಿ ನಟನೆಯ ಘಾಟಿ ತೆರೆಗೆ ಬಂದಾಗ, ಇದು ಸ್ವೀಟಿಯ ಕಂಬ್ಯಾಕ್ ಅಂತಲೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಘಾಟಿ ಬಾಕ್ಸಾಫೀಸ್ನಲ್ಲಿ ಹೀನಾಯವಾಗಿ ಸೋತಿದೆ. ಈ ಸೋಲಿನ ಬೆನ್ನಲ್ಲೇ ಅನುಷ್ಕಾ ಸೋಷಿಯಲ್ ಮಿಡಿಯಾದಿಂದಲೂ ದೂರ ಉಳೀತಿನಿ ಅಂದಿದ್ದಾರೆ. ಅಷ್ಟಕ್ಕೂ ಅನುಷ್ಕಾಗೆ ಏನಾಗಿದೆ. ಸ್ವೀಟಿ ಯಾಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ತಾ ಇಲ್ಲ. ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. ಸ್ವೀಟಿ ಅನುಷ್ಕಾ ಶೆಟ್ಟಿ ನಟನೆಯ ಘಾಟಿ ಸಿನಿಮಾ ಕಳೆದ ವಾರವಷ್ಟೇ ತೆರೆಗೆ ಬಂದಿತ್ತು. ಒಂದು ಕಾಲದಲ್ಲಿ ಟಾಲಿವುಡ್ನ ಘಟಾನುಘಟಿ ನಾಯಕರುಗಳ ಮೀರಿಸುವಂತೆ ಕಲೆಕ್ಷನ್ ಮಾಡ್ತಾ ಇದ್ವು, ಅನುಷ್ಕಾ ನಟನೆಯ ನಾಯಕಿ ಪ್ರಧಾನ ಚಿತ್ರಗಳು. ಇತ್ತೀಚಿಗೆ ಸ್ವೀಟಿ ಡಲ್ ಆಗಿದ್ದಾರೆ. ಆದ್ರೆ ಘಾಟಿ ಮೂಲಕ ಅನುಷ್ಕಾ ಕಂಬ್ಯಾಕ್ ಮಾಡ್ತಾರೆ ಅಂತ ಎಲ್ಲರೂ ಭಾವಿಸಿದ್ರು.
ಆ ನಿರೀಕ್ಷೆ ಹುಸಿಯಾಗಿದೆ. ಹೌದು ಘಾಟಿ ಸಿನಿಮಾದ ಸೋಲಿನ ಬೆನ್ನಲ್ಲೇ ಅನುಷ್ಕಾ ನಾನು ಕೆಲ ಕಾಲ ಸೋಷಿಯಲ್ ಮಿಡಿಯಾದಿಂದ ದೂರ ಇರ್ತಿನಿ ಅಂತ ಘೋಷಿಸಿದ್ದು ಫ್ಯಾನ್ಸ್ಗೆ ಶಾಕ್ ಕೊಟ್ಟಿದ್ದಾರೆ. ಇತ್ತೀಚಿಗೆ ಅನುಷ್ಕಾ ಎಲ್ಲೂ ಬಹಿರಂಗವಾಗಿ ಕಾಣಿಸ್ತಾ ಇಲ್ಲ. ಈ ನಡುವೆ ಸೋಷಿಯಲ್ ಮಿಡಿಯಾದಿಂದಲೂ ದೂರವಾಗ್ತಿನಿ ಅಂದಿರೋದನ್ನ ನೋಡಿದ ಫ್ಯಾನ್ಸ್ ಯಾಕೆ ಹೀಗೆ ಮಾಡ್ತಿದ್ದೀರಿ ಅಂತ ಸ್ವೀಟಿಯನ್ನ ಪ್ರಶ್ನೆ ಮಾಡ್ತಾ ಇದ್ದಾರೆ. ಅಚ್ಚರಿ ಅಂದ್ರೆ ಅನುಷ್ಕಾ, ಘಾಟಿ ಸಿನಿಮಾದ ಪಬ್ಲಿಸಿಟಿಯಿಂದಲೂ ದೂರ ಉಳಿದಿದ್ರು. ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟರ್ಸ್ ಹಾಕಿದ್ದನ್ನ ಬಿಟ್ರೆ ಎಲ್ಲಯೂ ಸಿನಿಮಾ ಇವೆಂಟ್ಗೆ ಬರಲಿಲ್ಲ.
ಬೆಂಗಳೂರಿನಲ್ಲಿ ಕೂಡ ಘಾಟಿ ಸಿನಿಮಾದ ಪ್ರೆಸ್ ಮೀಟ್ ನಡೆದಿತ್ತು. ಯಶ್ ತಾಯಿ ಈ ಚಿತ್ರದ ವಿತರಣೆ ಹಕ್ಕು ಪಡೆದಿದ್ರು. ಅವರು ಮಾಧ್ಯಮಗೋಷ್ಟಿಯಲ್ಲಿ ಹಾಜರಿದ್ರು. ಆದ್ರೆ ಅನುಷ್ಕಾ ಮಾತ್ರ ಬರಲಿಲ್ಲ. ಯೆಸ್ ಇಂಥದ್ದೊಂದು ಗಾಸಿಪ್ ಟಾಲಿವುಡ್ ಅಂಗಳದಲ್ಲಿ ಹುಟ್ಟಿಕೊಂಡು ಬಹಳವೇ ದಿನಗಳಾಯ್ತು. ಅಸಲಿಗೆ ಬಾಹುಬಲಿ1 & 2 ನಂತಹ ಗ್ಲೋಬಲ್ ಹಿಟ್ ಚಿತ್ರಗಳ ಬಳಿಕ ಅನುಷ್ಕಾ ಭಯಂಕರ ಬ್ಯುಸಿಯಾಗಬೇಕಿತ್ತು. ಆದ್ರೆ ಬಾಹುಬಲಿ -2 ರಿಲೀಸ್ ಬಳಿಕ ಎಂಟು ವರ್ಷಗಳಲ್ಲಿ ಅನುಷ್ಕಾ ನಟಿಸಿದ್ದು ಬರೀ 5 ಸಿನಿಮಾಗಳಲ್ಲಿ. ಸೈಜ್ ಝೀರೋ ಸಿನಿಮಾಗಾಗಿ ತೂಕ ಹೆಚ್ಚಿಸಿದ ನಂತರ ಅನುಷ್ಕಾ ಆರೋಗ್ಯದಲ್ಲಿ ಏರುಪೇರು ಕಂಡು ಬಂತು ಅಂತ ಹೇಳಲಾಗುತ್ತೆ.
ತೂಕ ಇಳಿಸಲು ತೆಗೆದುಕೊಂಡ ಟ್ರೀಟ್ಮೆಂಟ್ಗಳು ಅನುಷ್ಕಾ ಆರೋಗ್ಯದ ಮೇಲೆ ಮತ್ತಷ್ಟು ವ್ಯತಿರಿಕ್ತ ಪರಿಣಾಮಗಳನ್ನ ಬೀರಿದವಂತೆ. ಈ ವದಂತಿಗಳಿಗೆ ಪೂರಕ ಅನ್ನುವಂತೆ ಅನುಷ್ಕಾ ಯಾವುದೇ ಸಿನಿಮಾ ಇವೆಂಟ್, ಪಾರ್ಟಿ , ಪ್ರೆಸ್ ಮೀಟ್ಗಳಿಗೆ ಬರ್ತಾ ಇಲ್ಲ. ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ತಾ ಇಲ್ಲ. ಘಾಟಿ ಸಿನಿಮಾದ ಪ್ರಚಾರಕ್ಕೂ ಬರಲಿಲ್ಲ. ಕಥನಾರ್ ಅನ್ನೋ ಮಲಯಾಳಂ ಚಿತ್ರವೊಂದನ್ನ ಬಿಟ್ರೆ ಇನ್ಯಾವ ಪ್ರಾಜೆಕ್ಟ್ ಅನ್ನೂ ಅನುಷ್ಕಾ ಒಪ್ಪಿಕೊಂಡಿಲ್ಲ. ಈ ನಡುವೆ ಸೋಷಿಯಲ್ ಮಿಡಿಯಾಗೂ ಗುಡ್ಬೈ ಹೇಳಿರೋದು ಫ್ಯಾನ್ಸ್ ಆತಂಕ ಹೆಚ್ಚಿಸಿದೆ. ಎಲ್ಲರೂ ಏನಾಯ್ತು ಸ್ವೀಟಿ ಅಂತ ಪ್ರಶ್ನೆ ಮಾಡ್ತಾ ಇದ್ದಾರೆ.