ಸ್ಕೂಟರ್ ಹತ್ತಿ ಮುಂಬೈ ಸುತ್ತಾಡಿದ ಅನುಷ್ಕಾ-ವಿರಾಟ್ ವಿಡಿಯೋ ವೈರಲ್


ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಶೂಟಿಂಗ್ ಇರ್ಲಿ , ಕ್ರಿಕೆಟ್ ಇರ್ಲಿ ಶಾಪಿಂಗ್ ಇರ್ಲಿ ಎಲ್ಲೇ ಹೋಗಬೇಕು ಅಂದ್ರೆ ಐಷಾರಾಮಿ ಕಾರುಗಳು ಮನೆಮುಂದೆ ನಿಂತಿರ್ತಾವೆ. ಆದ್ರೆ ಏಕಾ ಏಕಿ ಇಬ್ಬರು ಬೈಕ್ ಹತ್ತಿ ರಸ್ತೆಗಿಳಿದ್ರೆ ಏನ್ ಗತಿ. ಇಂತದ್ದೆ ಸಾಹಸವನ್ನ ಅನುಷ್ಕಾ ಮತ್ತು ಕೊಹ್ಲಿ ಮಾಡಿದ್ದಾರೆ.

First Published Aug 23, 2022, 4:10 PM IST | Last Updated Aug 23, 2022, 4:10 PM IST

ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಶೂಟಿಂಗ್ ಇರ್ಲಿ , ಕ್ರಿಕೆಟ್ ಇರ್ಲಿ ಶಾಪಿಂಗ್ ಇರ್ಲಿ ಎಲ್ಲೇ ಹೋಗಬೇಕು ಅಂದ್ರೆ ಐಷಾರಾಮಿ ಕಾರುಗಳು ಮನೆಮುಂದೆ ನಿಂತಿರ್ತಾವೆ. ಆದ್ರೆ ಏಕಾ ಏಕಿ ಇಬ್ಬರು ಬೈಕ್ ಹತ್ತಿ ರಸ್ತೆಗಿಳಿದ್ರೆ ಏನ್ ಗತಿ. ಇಂತದ್ದೆ ಸಾಹಸವನ್ನ ಅನುಷ್ಕಾ ಮತ್ತು ಕೊಹ್ಲಿ ಮಾಡಿದ್ದಾರೆ. ವೀಕೆಂಡ್ ನಲ್ಲಿ ಇಬ್ಬರು  ಜಾಹೀರಾತು ಚಿತ್ರೀಕರಣಕ್ಕಾಗಿ ಮಡ್ ಐಲ್ಯಾಂಡ್‌ಗೆ ಹೋಗಿದ್ದರು. ಅಲ್ಲಿಂದ ಮನೆ ಇಬ್ಬರೂ ಸ್ಕೂಟರ್ ನಲ್ಲಿ ವಾಪಸ್ ಆಗಿದ್ದಾರೆ. ಕಪ್ಪು ಸ್ಕೂಟರ್ ಮೇಲೆ ಹೆಲ್ಮೆಟ್ ಧರಿಸಿ ಸವಾರಿ ಹೊರಟ್ಟಿದ್ದು ಈಗ ಸಖತ್ ವೈರಲ್ ಆಗುತ್ತಿದೆ. ಇಬ್ಬರು ಕ್ಯಾಮೆರಾ ಕಣ್ಣಿಗೆ ಬೀಳಬಾರದು ಅಂತ ಎಷ್ಟೇ ಪ್ರಯತ್ನ ಪಟ್ಟರು ಮಿಡಿಯಾ ಕಣ್ಣಿಗೆ ಬಿದ್ದಿದೆ ಈ ಜೋಡಿ. ಒಟ್ಟಾರೆ ಸದಾ ಹೈಫೈ ಕಾರ್ ಗಳಲ್ಲಿ ಓಡಾಡುವ ಇವರಿಬ್ಬರು ಬೈಕ್ ಹತ್ತಿ ಮುಂಬೈನ ರಿಯಲ್ ಲೈಫ್ ಎಂಜಾಯ್ ಮಾಡಿದ್ದಾರೆ. ಅಂದ್ಹಾಗೆ ಈ ಬೈಕ್ ರೈಡ್ ಐಡಿಯಾ ಕೊಟ್ಟಿದ್ದು ಪತ್ನಿ ಅನುಷ್ಕಾ ಶರ್ಮಾ ಅಂತೆ.