Asianet Suvarna News Asianet Suvarna News

'ಕಬ್ಜ' ಆಡಿಯೋ ಹಕ್ಕು ಮಾರಾಟ ಎಷ್ಟು ಕೋಟಿಗೆ ಗೊತ್ತಾ?: ನಿರೀಕ್ಷೆ ಹುಟ್ಟಿಸಿದೆ 'ರವಿ ಬಸ್ರೂರು' ಸಂಗೀತ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಮೇಲೆ ಇಡೀ ದೇಶದ ಸಿನಿ ಪ್ರೇಕ್ಷಕರು ಕಣ್ಣಿಟ್ಟಿದ್ದಾರೆ. ಇದೀಗ ಕಬ್ಜ ಆಡಿಯೋ ಹಕ್ಕು ಸೇಲ್ ಆಗಿದ್ದು, ಇಲ್ಲಿದೆ ಡಿಟೇಲ್ಸ್.

ಕಬ್ಜ ಸಿನಿಮಾದ ಹಾಡುಗಳ ಮೇಲೆ ಭಾರೀ ನಿರೀಕ್ಷೆ ಇದೆ. ಯಾಕೆಂದ್ರೆ ಕೆಜಿಎಫ್ ಮ್ಯೂಸಿಕ್ ಮಾಸ್ಟರ್ ರವಿ ಬಸ್ರೂರು ಕಬ್ಜ ಸಿನಿಮಾಗೂ ಸಂಗೀತ ಸಂಯೋಜಿಸಿದ್ದಾರೆ. ಹೀಗಾಗೆ ಕಬ್ಜ ಸಿನಿಮಾದ ಹಾಡುಗಳಿಗೆ ಚಿನ್ನದ ಬೆಲೆ ಸಿಕ್ಕಿದೆ. ಕೆಜಿಎಫ್ ಚಾಪ್ಟರ್ ಒನ್ ಸಿನಿಮಾದ ಹಾಡುಗಳಿಗಿಂತಲೂ ಅತಿ ಹೆಚ್ಚು ಬೆಲೆಗೆ ಕಬ್ಜ ಸಿನಿಮಾದ ಹಾಡುಗಳ ರೈಟ್ಸ್ ಮಾರಾಟ ಆಗಿದೆ. ಪ್ರತಿಷ್ಠಿತ ಆನಂದ್ ಆಡಿಯೋ ಮ್ಯೂಸಿಕ್ ಕಂಪನಿ ಮೂರು ಕೋಟಿಗೂ ಅಧಿಕ ಹಣ ಕೊಟ್ಟು ಕಬ್ಜ ಹಾಡುಗಳ ಹಕ್ಕನ್ನು ಖರೀದಿಸಿದೆಯಂತೆ. ಒಂದು ಮಾಹಿತಿ ಪ್ರಕಾರ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಳಿಕ ಅತಿ ಹೆಚ್ಚು ಹಣಕ್ಕೆ ಆಡಿಯೋ ಹಕ್ಕು ಮಾರಾಟವಾದ ಕನ್ನಡದ ಎರಡನೇ ಸಿನಿಮಾ ಕಬ್ಜ ಅಂತ ಹೇಳಲಾಗ್ತಿದೆ. ಫೆಬ್ರವರಿ 4ರಂದು ಕಬ್ಜ ಮೊದಲ ಹಾಡು ಹೈದರಾಬಾದ್'ನಲ್ಲಿ ಐದು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಈ ಮೂಲಕ ಉಪ್ಪಿ-ಕಿಚ್ಚನ ಜೋಡಿ ಪ್ಯಾನ್ ಇಂಡಿಯಾ ಬಾಕ್ಸಾಫೀಸ್ ಬೇಟೆಗೆ ಹೊರಡಲಿದ್ದಾರೆ. 

ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಪಠಾಣ್': ಐದೇ ದಿನದಲ್ಲಿ 500 ಕೋಟಿ ಕಲೆಕ್ಷನ್

Video Top Stories