ಪ್ರಪೋಸ್ ಮಾಡಿದ ವಾರಕ್ಕೆ 2ನೇ ಮದುವೆಯಾದ ನಟಿ ಅಮಲಾ ಪೌಲ್!
ಮಲೆಯಾಳಂ ಹಾಗೂ ದಕ್ಷಿಣ ಭಾರತ ಸಿನಿಮಾದಲ್ಲಿ ಮಿಂಚ್ತಿರುವ ನಟಿ ಅಮಲಾ ಪೌಲ್ 2ನೇ ಬಾರಿ ಹಸೆಮಣೆ ಏರಿದ್ದು, ಉದ್ಯಮಿ ಜಗತ್ ದೇಸಾಯಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸೌತ್‌ನ ಬಹುಭಾಷಾ ನಟಿ ಅಮಲಾ ಪೌಲ್ ಇತ್ತೀಚಿನ ಮದುವೆ(Marriage) ವಿಚಾರಕ್ಕೆ ಸುದ್ದಿಯಲ್ಲಿದ್ರು. ನಟಿ ಅಮಲಾ ಪೌಲ್(Amala Paul) ಸೈಲೆಂಟ್ ಆಗಿ ಮತ್ತೆ ಮದುವೆಯಾಗಿದ್ದಾರೆ. ನಟ ಜಗತ್ ದೇಸಾಯಿ(Jagat desayi) ಜೊತೆ ಹೊಸ ಜೀವನ ಶುರು ಮಾಡಿದ್ದಾರೆ. ಹೆಬ್ಬುಲಿ ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿದ್ದರು ಅಮಲಾಪೌಲ್. ಇನ್ನು ಈ ಹಿಂದೆ ನಿರ್ದೇಶಕ ವಿಜಯ್ ಜೊತೆ ವಿವಾಹವಾಗಿ ಸಿನಿಮಾದಲ್ಲಿ ನಟಿಸುವುದು ಬೇಡ ಎಂದರೆಂಬ ಕಾರಣಕ್ಕೆ ಇಬ್ಬರೂ ವಿಚ್ಛೇಧನ ಪಡೆದಿದ್ದರೆನ್ನಲಾಗಿತ್ತು. ಇತ್ತೀಚಿಗಷ್ಟೇ ನಟಿ ಅಮಲಾ ಪೌಲ್ ಉದ್ಯಮಿ ನಟ ಜಗತ್ ಜೊತೆ ಎಂಗೇಜ್ ಆಗಿರುವ ಫೋಟೋವನ್ನು ಹಂಚಿಕೊಂಡಿದ್ರು. ಇದೀಗ ಮದುವೆ ಫೋಟೋ ಶೇರ್ ಮಾಡಿದ್ದಾರೆ. ಮದುವೆ ಫೋಟೋಗಳನ್ನು ಇಬ್ಬರೂ ಸ್ಟಾರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನವ ಜೋಡಿಗೆ ಅನೇಕ ಸೆಲೆಬ್ರೆಟಿಗಳು ಹಾಗೂ ಫ್ಯಾನ್ಸ್ ಶುಭಕೋರಿದ್ದಾರೆ.
ಇದನ್ನೂ ವೀಕ್ಷಿಸಿ: ಶಾರುಖ್ ಖಾನ್, ವಿಜಯ್ , ಯಶ್ ಅಲ್ವೇ ಅಲ್ಲ! 280 ಕೋಟಿ ಸಂಭಾವನೆ ಪಡೆದ ಮೊದಲ ಸೌತ್ ಸ್ಟಾರ್ ಯಾರು ?