Amala Paul: ಮದುವೆಯಾದ ಎರಡೇ ತಿಂಗಳಿಗೆ ಅಮ್ಮನಾದ ನಟಿ..! ಬೇಬಿ ಬಂಪ್ ಫೋಟೋಸ್‌ ವೈರಲ್‌

ಮದುವೆಯಾಗಿ ಎರಡೇ ತಿಂಗಳಿಗೆ ಈ ಜೋಡಿ ಶುಭ ಸುದ್ದಿಯೊಂದನ್ನು ನೀಡಿದೆ. ಅಮಲಾ ತಾವು ಗರ್ಭಿಣಿ ಎಂಬುದನ್ನು ಹೇಳಿಕೊಂಡು ಸಂಭ್ರಮಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಕಳೆದ ವರ್ಷ ನವೆಂಬರ್‌ನಲ್ಲಿ ಉದ್ಯಮಿ ಜಗತ್‌ ದೇಸಾಯಿ ಅವರನ್ನು ಮದುವೆಯಾಗಿರುವ ನಟಿ ಅಮಲಾ ಪೌಲ್‌(Amala Paul), ಗರ್ಭಿಣಿಯಾಗಿದ್ದಾರೆ(Pregnant). ಈ ಖುಷಿಯ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 'ನಾವೀಗ 1+1=3' ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ(Instagram) ಬರೆದುಕೊಂಡು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ ಫ್ಯಾನ್ಸ್‌ ಮಾತ್ರ ನಿನ್ನೆ ಮೊನ್ನೆಯಷ್ಟೇ ಮದ್ವೆಯಾಗಿತ್ತಲ್ಲ ಅಂತ ಕಾಲೆಳೆದಿದ್ದಾರೆ. ನವೆಂಬರ್‌ನಲ್ಲಿ ಅಮಲಾ ಪೌಲ್‌ ಜಗತ್ ದೇಸಾಯಿ ಜೊತೆ ಎರಡನೇ ವಿವಾಹವಾಗಿದ್ದರು. ಪಾರ್ಟಿಯೊಂದರಲ್ಲಿ ಜಗತ್‌ ಪ್ರಪೋಸ್ ಮಾಡುವ ವಿಡಿಯೋವನ್ನು ಅಮಲಾ ಹಂಚಿಕೊಂಡಿದ್ದರು. ಇದಾಗಿ ನವೆಂಬರ್‌ 5ರಂದು ದಿಢೀರ್‌ ಆಗಿ ಈ ಜೋಡಿಯ ಮದುವೆಯೂ ನಡೆದಿತ್ತು. 

ಇದನ್ನೂ ವೀಕ್ಷಿಸಿ: Nayanthara: ನಯನತಾರಾ ಮೆಚ್ಚಿಕೊಂಡ ಕನ್ನಡದ ನಟ ಯಾರು ಗೊತ್ತಾ?

Related Video