ಅಲ್ಲು ಅರ್ಜುನ್ ಅರೆಸ್ಟ್: ರೇವಂತ್‌ ರೆಡ್ಡಿ ವಿರುದ್ಧ ಮುಗಿಬಿದ್ದ ವಿಪಕ್ಷಗಳು, ಸಿಎಂ ತಿರುಗೇಟು

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ ಅವರಿಗೆ ನಿನ್ನೆಯೇ (ಶುಕ್ರವಾರ) ಮಧ್ಯಂತರ ಜಾಮೀನು ಸಿಕ್ಕಿತ್ತು. ಆದರೆ ನಟನನ್ನ ತಕ್ಷಣವೇ ರಿಲೀಸ್ ಮಾಡಲಿಲ್ಲ. ತೆಲಂಗಾಣ ಪೊಲೀಸರು ತೆಗೆದುಕೊಂಡ ಈ ಕ್ರಮ ಈಗ ದೊಡ್ಡ ವಿವಾದಕ್ಕೆ ಗುರಿಯಾಗಿದೆ.

First Published Dec 14, 2024, 12:38 PM IST | Last Updated Dec 14, 2024, 12:38 PM IST

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ ಅವರಿಗೆ ನಿನ್ನೆಯೇ (ಶುಕ್ರವಾರ) ಮಧ್ಯಂತರ ಜಾಮೀನು ಸಿಕ್ಕಿತ್ತು. ಆದರೆ ನಟನನ್ನ ತಕ್ಷಣವೇ ರಿಲೀಸ್ ಮಾಡಲಿಲ್ಲ. ತೆಲಂಗಾಣ ಪೊಲೀಸರು ತೆಗೆದುಕೊಂಡ ಈ ಕ್ರಮ ಈಗ ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಜಾಮೀನು ಸಿಕ್ಕರೂ ತಕ್ಷಣ ಜೈಲಿನಿಂದ ಯಾಕೆ ಬಿಡುಗಡೆ ಮಾಡಲಿಲ್ಲ? ಅನ್ನೋ ಪ್ರಶ್ನೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಇದೀಗ ಕಾಡುತ್ತಿದೆ. ನಿನ್ನೆ ಅಲ್ಲು ಅರ್ಜುನ್ ಮನೆಗೆ ತೆರಳಿದ್ದ ಪೊಲೀಸರು ಅವರನ್ನ ಬಂಧಿಸಿ, ಮಧ್ಯಾಹ್ನವೇ ಚಂಚಲಗೂಡ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. 

ಸಂಜೆ ತೆಲಂಗಾಣ ಹೈಕೋರ್ಟ್‌ನ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಆದರೆ ಜಾಮೀನು ಆದೇಶದ ಪ್ರತಿ ನಿನ್ನೆ ರಾತ್ರಿವರೆಗೂ ಜೈಲು ಅಧಿಕಾರಿಗಳಿಗೆ ಸಿಕ್ಕಿರಲಿಲ್ಲ. ನಿನ್ನೆ ಇಡೀ ದಿನ ನಡೆದ ಬೆಳವಣಿಗೆ ಹಾಗೂ ಅಲ್ಲು ಅರ್ಜುನ್ ಬಂಧಿಸಿದ್ದರ ಹಿಂದೆ ರಾಜಕೀಯ ಇದ್ಯಾ ಅನ್ನೋ ಅನುಮಾನಗಳು ಕೇಳಿ ಬಂದಿದೆ. ನಟ ಅಲ್ಲು ಅರ್ಜುನ್ ಅವರ ಮೇಲೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಗೆ ಕೋಪ ಇತ್ತು. ಹೀಗಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಅಲ್ಲು ಅರ್ಜುನ್ ಅವರ ಮೇಲೆ ಸೇಡು ತೀರಿಸಿಕೊಂಡ್ರಾ ಅನ್ನೋ ಮಾತುಗಳು ಕೇಳಿ ಬಂದಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories