ಅಲ್ಲು ಅರ್ಜುನ್​ಗೆ ಜ್ವರ, ಟಾಲಿವುಡ್​ಗೆ ಬರೆ! ಪುಷ್ಪಾ 2 ಟೀಮ್‌ಗೆ ಸಕ್ಸಸ್‌ ಸಿಕ್ಕರೂ ಖುಷಿ ಇಲ್ವಾ?

ಡಿಸೆಂಬರ್ 4ನೇ ತಾರೀಖು ಹೈದ್ರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆದ  ಪ್ರೀಮಿಯರ್ ಶೋಗೆ ಅಲ್ಲು ಅರ್ಜುನ್ ಎಂಟ್ರಿ ಕೊಡ್ತಾರೆ. ಮೊದಲೇ ಕಿಕ್ಕಿರಿದು ಸೇರಿದ್ದ ಫ್ಯಾನ್ಸ್ ಅಲ್ಲು ಅರ್ಜುನ್​ನ  ನೋಡೋದಕ್ಕೆ ಮುಗಿಬೀಳ್ತಾರೆ. ಆ ತಳ್ಳಾಟದಲ್ಲಿ ರೇವತಿ ಅನ್ನೋ ಮಹಿಳೆ ಸಾವನ್ನಪ್ಪಿದ್ರೆ, ಆಕೆಯ 9 ವರ್ಷದ ಮಗುವಿನ ಬ್ರೈನ್ ಡೆಡ್ ಆಗಿದ್ದು ಸಾವು ಬದುಕಿನ ನಡುವೆ ಹೋರಾಡ್ತಾ ಇದೆ...

First Published Dec 23, 2024, 4:36 PM IST | Last Updated Dec 23, 2024, 4:35 PM IST

ಪುಷ್ಪ-2 ಸಿನಿಮಾ ದಾಖಲೆ ಕಲೆಕ್ಷನ್ ಮಾಡಿದೆ. ಆದ್ರೆ ಇದನ್ನ ಸೆಲೆಬ್ರೇಟ್ ಮಾಡೋ ಸ್ಥಿತಿಯಲ್ಲಿ ಪುಷ್ಪ ಟೀಮ್ ಇಲ್ಲ. ಸಂಧ್ಯಾ ಥಿಯೇಟರ್​ನಲ್ಲಾದ ಕಾಲ್ತುಳಿತ ಕೇಸ್​ನಲ್ಲಿ ಜೈಲು ಸೇರಿ ಬಂದಿರೋ ಅಲ್ಲು ಅರ್ಜುನ್, ನಾನೇನು ತಪ್ಪು ಮಾಡಿಲ್ಲ ಅಂತಿದ್ದಾರೆ. ಆದ್ರೆ ಅಲ್ಲು ಅರ್ಜುನ್ ವಿರುದ್ದ ಗರಂ ಆಗಿರೋ ಸಿಎಂ ರೇವಂತ್ ರೆಡ್ಡಿ ಇಡೀ ಟಾಲಿವುಡ್​ಗೆ ಕೊಡ್ತಿದ್ದ ಸವಲತ್ತುಗಳನ್ನ ಬಂದ್ ಮಾಡಿದ್ದಾರೆ. ಪುಷ್ಪನ ಜ್ವರಕ್ಕೆ ಇಡೀ ಟಾಲಿವುಡ್​ಗೆ ಬರೆ ಬಿದ್ದಿದೆ.

ಪುಷ್ಪ-2 ಸಿನಿಮಾ 1500 ಕೋಟಿ ಗಳಿಕೆ ಮಾಡಿದೆ. ಇದು ತೆಲಗು ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ. ವರ್ಷಾಂತ್ಯದಲ್ಲಿ ಸಿಕ್ಕಿರೋ ಈ ಸಕ್ಸಸ್​ನ ಭರ್ಜರಿ ಪಾರ್ಟಿ ಮೂಲಕ ಸೆಲೆಬ್ರೇಟ್ ಮಾಡಬೇಕಿತ್ತು ಪುಷ್ಪ-2 ಟೀಂ. ಆದ್ರೆ ಸಂಭ್ರಮ, ಸೆಲೆಬ್ರೇಷನ್​ಗೆಲ್ಲಾ ಬ್ರೇಕ್ ಹಾಕಿದ್ದು ಅದೊಂದು ಘಟನೆ.

ಡಿಸೆಂಬರ್ 4ನೇ ತಾರೀಖು ಹೈದ್ರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆದ  ಪ್ರೀಮಿಯರ್ ಶೋಗೆ ಅಲ್ಲು ಅರ್ಜುನ್ ಎಂಟ್ರಿ ಕೊಡ್ತಾರೆ. ಮೊದಲೇ ಕಿಕ್ಕಿರಿದು ಸೇರಿದ್ದ ಫ್ಯಾನ್ಸ್ ಅಲ್ಲು ಅರ್ಜುನ್​ನ  ನೋಡೋದಕ್ಕೆ ಮುಗಿಬೀಳ್ತಾರೆ. ಆ ತಳ್ಳಾಟದಲ್ಲಿ ರೇವತಿ ಅನ್ನೋ ಮಹಿಳೆ ಸಾವನ್ನಪ್ಪಿದ್ರೆ, ಆಕೆಯ 9 ವರ್ಷದ ಮಗುವಿನ ಬ್ರೈನ್ ಡೆಡ್ ಆಗಿದ್ದು ಸಾವು ಬದುಕಿನ ನಡುವೆ ಹೋರಾಡ್ತಾ ಇದೆ.

ಈ ಘಟನೆಗೆ ಸಂಬಂಧಿಸಿದಂತೆ ಡಿಸೆಂಬರ್ 13ಕ್ಕೆ ಅಲ್ಲು ಅರ್ಜುನ್​ನ ಅರೆಸ್ಟ್ ಮಾಡಲಾಯ್ತು. ಡಿಸೆಂಬರ್ 14ರ ಬೆಳಿಗ್ಗೆ ರಿಲೀಸ್ ಆದ್ರು. ಒಂದು ದಿನ ಚಂಚಲಗುಡ್ಡ ಜೈಲಿನಲ್ಲಿ ಕಳೆದುಬಂದಿದ್ದಾನೆ ಪುಷ್ಪ.

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಉದ್ದೇಶಪೂರ್ವಕವಾಗಿ ಅಲ್ಲು ಅರ್ಜುನ್​ನ ಅರೆಸ್ಟ್ ಮಾಡಿಸಿದ್ರು. ಅನ್ನೋದು ಬನ್ನಿ ಫ್ಯಾನ್ಸ್ ವಾದ. ಆದ್ರೆ ಇದಕ್ಕೆ ಖಡಕ್ ಕೌಂಟರ್ ಕೊಟ್ಟಿದ್ದ ರೇವಂತ್ ರೆಡ್ಡಿ ನಮ್ಮ ರಾಜ್ಯದಲ್ಲಿ ಸೆಲೆಬ್ರಿಟಿಗಳಿಗೂ ಸಾಮಾನ್ಯರಿಗೂ ಒಂದೇ ನ್ಯಾಯ ಅಂತ ಅಬ್ಬರಿಸಿದ್ರು. ಇನ್ನೂ ನಿನ್ನೆ ತೆಲಂಗಾಣ ಸದನದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ರೇವಂತ್ ರೆಡ್ಡಿ , ಒಬ್ಬ ಮಹಿಳೆ ಬಲಿಯಾದ ಮೇಲೂ ಅಲ್ಲು ಅರ್ಜುನ್ ರೋಡ್ ಶೋ ಮಾಡಿದ್ದಾನೆ. ಅವನು ಮನುಷ್ಯನೇ ಅಲ್ಲ ಅಂತ ವಾಗ್ದಾಳಿ ಮಾಡಿದ್ದಾರೆ.

ಜೊತೆಗೆ ಇನ್ನುಮುಂದೆ ತೆಲಂಗಾಣದಲ್ಲಿ ಬೆನ್ ಫಿಟ್ ಶೋ, ಟಿಕೆಟ್ ದರ ಹೆಚ್ಚಳಕ್ಕೆ ಅವಕಾಶ ಇಲ್ಲ ಅಂದಿದ್ದಾರೆ. ಆ ಮೂಲಕ ಪುಷ್ಪನ ಮೇಲಿನ ಸಿಟ್ಟಿಗೆ ಇಡೀ ತೆಲಗು ಇಂಡಸ್ಟ್ರಿಗೆ ಬರೆ ಹಾಕಿದ್ದಾರೆ. ಹೌದು ತನ್ನ ಬಗ್ಗೆ ಮಾಡಲಾಗಿರೋ ಆರೋಪಗಳ ಬಗ್ಗೆ ಸ್ಪಷ್ಟಣೆ ಕೊಟ್ಟಿರೋ ಐಕನ್ ಸ್ಟಾರ್, ಈ ವಿಚಾರದಲ್ಲಿ ನಾನು ನಿರಪರಾಧಿ. ಆ ಘಟನೆ ಆಕಸ್ಮಿಕವಾಗಿ ನಡೆದಿದ್ದು ಆದರೂ ನನ್ನ ಚಾರಿತ್ರ್ಯ ವಧೆ ಮಾಡಲಾಗ್ತಾ ಇದೆ ಅಂತ ಅಲವತ್ತುಕೊಂಡಿದ್ದಾರೆ.

ಮೃತಳ ಕುಟುಂಬಕ್ಕೆ ಸಹಾಯ ಮಾಡಿದ್ದೆನೆ. ಬ್ರೈನ್ ಡೆಡ್ ಆಗಿರೋ ಮಗುವಿನ ಆರೋಗ್ಯದ ಬಗ್ಗೆ ದಿನ ದಿನವೂ ಅಪ್​ಡೇಟ್ ತರಿಸಿಕೊಳ್ತಾ ಇದ್ದೇನೆ ಅಂತ ಹೇಳಿದ್ದಾರೆ. ಈ ಘಟನೆ ಬಗ್ಗೆ ತನಗೂ ಅತೀವ ನೋವಿದೆ. ತನಗೂ ಅದೇ ವಯಸ್ಸಿನ ಮಗ ಇದ್ದಾನೆ ಅಂತ ಎಮೋಷನಲ್ ಆಗಿದ್ದಾರೆ ಅಲ್ಲು ಅರ್ಜುನ್.

ಒಟ್ಟಾರೆ ಅಲ್ಲು ಅರ್ಜುನ್ ಮತ್ತು ಸಿಎಂ ರೇವಂತ್ ರೆಡ್ಡಿ ಜಿದ್ದಾಜಿದ್ದಿ ನಡುವೆ ಇಡೀ ತೆಲುಗು ಚಿತ್ರರಂಗಕ್ಕೆ ಏಟು ಬಿದ್ದಿರೋದು ಸುಳ್ಳಲ್ಲ. ಬೆನ್ ಫಿಟ್ ಶೋ, ಟಿಕೆಟ್ ದರ ಹೆಚ್ಚಳಕ್ಕೆ ಇದ್ದ ಅನುಮತಿ ಬಂದ್ ಮಾಡಿರೋದ್ರಿಂದ ತೆಲುಗು ಚಿತ್ರಕರ್ಮಿಗಳೆಲ್ಲಾ ಶಾಕ್ ಆಗಿದ್ದಾರೆ. ಪುಷ್ಪ-2 ಸಕ್ಸಸ್​, ಖುಷಿಗಿಂತ ಹೆಚ್ಚಾಗಿ ಟಾಲಿವುಡ್​​ಗೆ ತಲೆನೋವು ತಂದಿರೋದು ಸುಳ್ಳಲ್ಲ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..