ಅಲ್ಲು ಅರ್ಜುನ್ ಸಪೋರ್ಟ್​​ಗೆ ನಿಂತ ಟಾಲಿವುಡ್ ಸ್ಟಾರ್ಸ್; ಎಲ್ಲಿಗೆ ಹೋಗಿ ತಲುಪಲಿದೆ ಪುಷ್ಪ vs ಸಿಎಂ ಫೈಟು?

ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದಾರೆ. ಟಾಲಿವುಡ್ ತಾರೆಯರು ಅಲ್ಲು ಅರ್ಜುನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಮತ್ತು ಸುಕುಮಾರ್ ಸೇರಿದಂತೆ ಹಲವರು ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

First Published Dec 17, 2024, 12:09 AM IST | Last Updated Dec 17, 2024, 12:24 AM IST

‘ತಗ್ಗೋದೇ ಇಲ್ಲ ಅನ್ನೋದು’ ಪುಷ್ಪನ ಐಕಾನಿಕ್ ಡೈಲಾಗ್. ಆದ್ರೆ ರಿಯಲ್ ಲೈಫ್​ನಲ್ಲಿ ಅಲ್ಲು ಅರ್ಜುನ್​ನ ತಗ್ಗುವಂತೆ ಮಾಡಿದ್ದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ. ಕಾಲ್ತುಳಿತಕ್ಕೆ ಮಹಿಳೆ ಬಲಿಯಾದ ಕೇಸ್​ನಲ್ಲಿ ಅಲ್ಲು ಅರ್ಜುನ್​ನ ಒಂದು ದಿನ ಬಂಧಿಸಿ ರಿಲೀಸ್ ಮಾಡಲಾಗಿದೆ. ಜೈಲಿಗೆ ಹೋಗಿಬಂದ ಐಕಾನ್​ ಸ್ಟಾರ್​ ಬೆಂಬಲಕ್ಕೀಗ ಇಡೀ ಟಾಲಿವುಡ್ ನಿಂತಿದೆ. ಅನೇಕ ಸ್ಟಾರ್ಸ್ ಅಲ್ಲು ಅರ್ಜುನ್​ನ ಭೇಟಿ ಮಾಡಿ, ಧೈರ್ಯ ಹೇಳಿದ್ದಾರೆ. ಈ ನಡುವೆ ಮುಂದೇನ್ ಮಾಡ್ತಾನೆ ಪುಷ್ಪ ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ.

ನಿನ್ನೆ ಚಂಚಲಗುಡ್ಡ ಜೈಲಿನಿಂದ ಬಿಡುಗಡೆಯಾಗಿ ಬಂದ ಅಲ್ಲು ಅರ್ಜುನ್​ಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಮನೆಗ ಮರಳಿರೋ ಪುಷ್ಪನನ್ನ ಟಾಲಿವುಡ್ ತಾರೆಯರೆಲ್ಲಾ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಈ ಕಾನೂನು ಹೋರಾಟದಲ್ಲಿ ನಾವು ನಿಮ್ಮ ಜೊತೆಗಿರ್ತೀವಿ ಅನ್ನೋ ಮಾತು ಹೇಳಿದ್ದಾರೆ.

ನಿನ್ನೆ UI ಸಿನಿಮಾದ ಪ್ರಚಾರಕ್ಕಾಗಿ ಹೈದ್ರಾಬಾದ್​​ಗೆ ಹೋಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಅಲ್ಲು ಅರ್ಜುನ್​ನ ಭೇಟಿ ಮಾಡಿದ್ರು. ಇನ್ನೂ ಪುಷ್ಪ ಡೈರೆಕ್ಟರ್ ಸುಕುಮಾರ್ ತಮ್ಮ ಹೀರೋನನ್ನ ಭೇಟಿ ಮಾಡಿ ಜೊತೆಗೆ ನಿಂತುಕೊಂಡಿದ್ದಾರೆ.