ವಿಶೇಷ ಅಭಿಮಾನಿ ಜೊತೆ ಅಕ್ಷಯ್ ಕುಮಾರ್ ಮಸ್ತ್ ಡಾನ್ಸ್; ವಿಡಿಯೋ ವೈರಲ್

ರಕ್ಷಾಬಂಧನ್ ಸಿನಿಮಾ ಪ್ರಚಾರ ವೇಳೆ ಅಕ್ಷಯ್ ಕುಮಾರ್ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ. ಎರಡು ಕಾಲು ಇಲ್ಲದ ಅಭಿಮಾನಿ ವಿನೋದ್ ಠಾಕೂರ್ ಜೊತೆ ಡಾನ್ಸ್ ಮಾಡಿರುವ ವಿಡಿಯೋ 
ಅಭಿಮಾನಿಗಳ ಹೃದಯ ಗೆದ್ದಿದೆ. ಅಭಿಮಾನಿಯ ಜೊತೆ ತಾವು ಕೂಡ ಕೆಳಗೆ ಕುಳಿತು ಡಾನ್ಸ್ ಮಾಡಿದ್ದಾರೆ ಅಕ್ಷಯ್. ಈ ವಿಡಿಯೋವನ್ನು ಸ್ವತಃ ಅಕ್ಷಯ್ ಕುಮಾರ್ ಶೇರ್ ಮಾಡಿದ್ದಾರೆ.

First Published Aug 10, 2022, 5:08 PM IST | Last Updated Aug 10, 2022, 5:08 PM IST

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸದ್ಯ ರಕ್ಷಾಬಂಧನ್ ಸಿನಿಮಾದ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಆಗಸ್ಟ್ 11ರಂದು ರಕ್ಷಾಬಂಧನ್ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ರಿಲೀಸ್ ಗೆ ಇನ್ನೇನು ಒಂದೇ ದಿನ ಬಾಕಿ ಇದೆ. ಅಕ್ಷಯ್ ಕುಮಾರ್ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಮಾತ್ರ ತೆರೆಗೆ ಬರುತ್ತಿರುವ ರಕ್ಷಾಬಂಧನ್ ಚಿತ್ರದ ಪ್ರಚಾರಾ ಕಾರ್ಯ ಉತ್ತರ ಭಾರತದಲ್ಲಿ ಜೋರಾಗಿ ನಡೆಯುತ್ತಿದೆ. ಈ ವೇಳೆ ಅಕ್ಷಯ್ ಕುಮಾರ್ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ. ಎರಡು ಕಾಲು ಇಲ್ಲದ ಅಭಿಮಾನಿ ವಿನೋದ್ ಠಾಕೂರ್ ಜೊತೆ ಡಾನ್ಸ್ ಮಾಡಿರುವ ವಿಡಿಯೋ ಅಭಿಮಾನಿಗಳ ಹೃದಯ ಗೆದ್ದಿದೆ. ಅಭಿಮಾನಿಯ ಜೊತೆ ತಾವು ಕೂಡ ಕೆಳಗೆ ಕುಳಿತು ಡಾನ್ಸ್ ಮಾಡಿದ್ದಾರೆ.  ಈ ವಿಡಿಯೋವನ್ನು ಸ್ವತಃ ಅಕ್ಷಯ್ ಕುಮಾರ್ ಶೇರ್ ಮಾಡಿದ್ದಾರೆ. 'ಒಬ್ಬ ನಟನಾಗಿ, ನಾನು ಪ್ರತಿದಿನ ಅನೇಕ ಜನರನ್ನು ಭೇಟಿಯಾಗುತ್ತೇನೆ ಆದರೆ ಕೆಲವರು ಮತಾರ್ ಪ್ರಭಾವ ಬೀರುತ್ತಾರೆ. ದೆಹಲಿಯಲ್ಲಿ ರಕ್ಷಾಬಂಧನ ಪ್ರಚಾರದ ಸಂದರ್ಭದಲ್ಲಿ ವಿನೋದ್ ಠಾಕೂರ್ ಅಂತಹ ವ್ಯಕ್ತಿಯನ್ನು ಭೇಟಿಯಾದೆ. ನಿಮ್ಮ ಆತ್ಮ ತುಂಬಾ ಶುದ್ಧವಾಗಿದೆ ಮತ್ತು ಸ್ಫೂರ್ತಿದಾಯಕ' ಎಂದು ಹೇಳಿದರು.