ಅಕ್ಷಯ್ ಕುಮಾರ್ ಮನೆಯಲ್ಲಿ ದೀಪಾವಳಿ ಸಂಭ್ರಮ; ಆರತಿ ಬೆಳಗಿದ ವಿಡಿಯೋ ವೈರಲ್
ಬಾಲಿವುಡ್ ಸ್ಟಾರ್ಸ್ ಕೂಡ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ. ನಟ ಅಕ್ಷಯ್ ಕುಮಾರ್ ನಿವಾಸದಲ್ಲೂ ದೀಪಾವಳಿ ಸಂಭ್ರಮ ಜೋರಾಗಿದೆ.
ದೇಶಾದ್ಯಂತ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಆಚರಣೆಯಲ್ಲಿ ಸಿನಿಮಾ ಮಂದಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಬಾಲಿವುಡ್ ಸ್ಟಾರ್ಸ್ ಸಹ ಅದ್ದೂರಿಯಾಗಿ ಹಬ್ಬ ಆಚರಿಸುತ್ತಿದ್ದಾರೆ. ನಟ ಅಕ್ಷಯ್ ಕುಮಾರ್ ನಿವಾಸದಲ್ಲೂ ದೀಪಾವಳಿ ಸಂಭ್ರಮ ಜೋರಾಗಿದೆ. ಬಾಲಿವುಡ್ ಕಿಲಾಡಿ ತಮ್ಮ ನಿವಾಸದಲ್ಲಿ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸ್ನೇಹಿತರು ಮತ್ತು ಕುಟುಂಬದ ಜೊತೆ ಹಬ್ಬ ಆಚರಿಸಿದ ಅಕ್ಷಯ್ ಕುಮಾರ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ದೇವರಿಗೆ ಆರತಿ ಬೆಳಗುತ್ತಿರುವ ಅಕ್ಷಯ್ ಕುಮಾರ್ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನೆಚ್ಚಿನ ನಟನಿಗೆ ಅಭಿಮಾನಿಗಳು ಸಹ ಪ್ರೀತಿಯ ವಿಶ್ ಮಾಡುತ್ತಿದ್ದಾರೆ.