Asianet Suvarna News Asianet Suvarna News

ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಕೆಟ್ಟದಾಗಿ ಡ್ರೆಸ್‌ ಮಾಡಿದ್ದ ಸ್ಟಾರ್ಸ್ ಟ್ರೋಲ್‌!

ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬವನ್ನು ಇತ್ತೀಚಿಗಷ್ಟೇ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಕರಣ್ ಜೋಹರ್ ಯಾವುದೇ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ.

ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬವನ್ನು ಇತ್ತೀಚಿಗಷ್ಟೇ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಕರಣ್ ಜೋಹರ್ ಯಾವುದೇ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಈ ಸಮಯದಲ್ಲಿ, ಸಲ್ಮಾನ್ ಖಾನ್,ಕರೀನಾ ಮತ್ತು ಸೈಫ್ ಆಲಿಖಾನ್, ವಿಕ್ಕಿ ಮತ್ತು ಕತ್ರಿನಾ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ, ಟೈಗರ್ ಶ್ರಾಫ್, ಸಿದ್ಧಾರ್ಥ್ ಮತ್ತು ಪ್ರಿಯಾಂಕಾ ಚೋಪ್ರಾ, ವರುಣ್ ಧವನ್, ಕಿಯಾರಾ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್, ತಮನ್ನಾ, ಮಲೈಕಾ ಅರೋರಾ, ರಣ್‌ಬೀರ್ ಕಪೂರ್ ಮತ್ತು ನೀತು ಕಪೂರ್ ಸೇರಿ ಇನ್ನೂ ಅನೇಕ ಸೆಲೆಬ್ರಿಟಿಗಳು ಕರಣ್‌ಗೆ ಶುಭ ಹಾರೈಸಲು ಬಂದಿದ್ದರು. ಈ ವೇಳೆ ರಶ್ಮಿಕಾ ಮಂದಣ್ಣ,  ಐಶ್ವರ್ಯ ರೈ ಮತ್ತು ತಮನ್ನಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು! ಕರಣ್ ಜೋಹರ್ ಬರ್ಥಡೇ ಪಾರ್ಟಿಯಲ್ಲಿ ಇವರು ಧರಿಸಿದ್ದ ಉಡುಪನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies