
ರಾಜ್ಯದಲ್ಲಿ KRG ಸ್ಟುಡಿಯೋಗೆ ಸಿಕ್ತು ಆದಿಪುರುಷ್ ವಿತರಣೆ ಹಕ್ಕು
‘ಆದಿಪುರುಷ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಜೂನ್ 16ರಂದು 5 ಬಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿ ಈ ಸಿನಿಮಾದ ವಿತರಣೆ ಹಕ್ಕುಗಳನ್ನು ‘ಕೆ.ಆರ್.ಜಿ ಸ್ಟುಡಿಯೋಸ್’ ಸಂಸ್ಥೆ ಪಡೆದುಕೊಂಡಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಆದಿಪುರುಷ್ ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜೂನ್ 16ರಂದು ಸಿನಿಮಾವನ್ನು ವಿಶ್ವಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರವು ಕನ್ನಡದಲ್ಲಿಯೂ ರಿಲೀಸ್ ಆಗಲಿದ್ದು, ಕರ್ನಾಟಕದಲ್ಲಿ ‘ಆದಿಪುರುಷ್ ’ ಸಿನಿಮಾದ ವಿತರಣೆ ಹಕ್ಕುಗಳು ‘ಕೆಆರ್ ಜಿ ಸ್ಟುಡಿಯೋಸ್ ’ ಸಂಸ್ಥೆಯ ಪಾಲಾಗಿದೆ. ಈ ವಿಚಾರವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರಾದ ಕಾರ್ತಿಕ್ ಗೌಡ ಹಂಚಿಕೊಂಡಿದ್ದಾರೆ. ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸಿದರೆ ಸನ್ನಿ ಸಿಂಗ್ ಲಕ್ಷಣನಾಗಿ, ಕೃತಿ ಸನೂನ್ ಸೀತೆಯಾಗಿ, ಸೈಫ್ ಅಲಿಖಾನ್ ರಾವಣನಾಗಿ, ದೇವದತ್ತ ಹನುಮಂತನ ಪಾತ್ರದಲ್ಲಿ ಮಿಂಚಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ