
ಒಂದು ಹೆಣ್ಣು ಗಂಡನ್ನು ಮಾತ್ರ ಬಯಸಬೇಕು ಅನ್ನೋದು ತಪ್ಪು: Actress Swara Bhasker ಹೇಳಿಕೆ
ಬಾಲಿವುಡ್ ಬೆಡಗಿ ಸ್ವರಾ ಭಾಸ್ಕರ್ ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಲ್ಲಿರ್ತಾರೆ. ಸದ್ಯ ಸ್ವರಾ ನೀಡಿರೋ ಒಂದು ಹೇಳಿಕೆ ಸಿನಿಲೋಕದಲ್ಲಷ್ಟೇ ಅಲ್ಲ, ರಾಜಕೀಯ ರಂಗದಲ್ಲೂ ಕಿಚ್ಚು ಹಚ್ಚಿದೆ.
ಸ್ವರಾ ಭಾಸ್ಕರ್.. ಕೇವಲ ನಟಿ ಮಾತ್ರವಲ್ಲ, ಒಂಥರಾ ವಿವಾದಿತ ನಟಿಮಣಿ. 'ತನು ವೆಡ್ಸ್ ಮನು', 'ರಾಂಝನಾ', 'ಪ್ರೇಮ್ ರತನ್ ಧನ್ ಪಾಯೋ', ', 'ವೀರೆ ದಿ ವೆಡ್ಡಿಂಗ್' ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರೋ ಸ್ವರಾ ಸಾಮಾಜಿಕ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸ್ವರಾ ಭಾಸ್ಕರ್ ಅಂದ್ರೇನೆ ಕಾಂಟ್ರವರ್ಸಿ.. ತನ್ನ ಹಸಿ ಬಿಸಿ ರೋಲ್ನಿಂದಷ್ಟೇ ಅಲ್ಲ ಬೋಲ್ಡ್ ಹೇಳಿಕೆಗಳಿಂದಲೂ ಸ್ವರಾ ಆಗಾಗ ಜ್ವರ ಏರಿಸ್ತಾ ಇರ್ತಾರೆ. ಸದ್ಯ ಇದೇ ರೀತಿ ಸ್ವರಾ ಒಂದು ಸಂದರ್ಶನದಲ್ಲಿ ಆಡಿಯೋ ಮಾತುಗಳು ಅಕ್ಷರಶಃ ಕಿಚ್ಚು ಹಚ್ಚಿವೆ.