ಸಲ್ಮಾನ್ ಖಾನ್ ನನಗೆ ಸಿಗರೇಟ್‌ನಿಂದ ಸುಟ್ಟಿದ್ದಾನೆ: ಸೋಮಿ ಆಲಿ ಆರೋಪ

ಕಳೆದೊಂದು ದಶಕದಿಂದ ಸಲ್ಮಾನ್ ಖಾನ್ ವಿರುದ್ಧ ಮೇಲಿಂದ ಮೇಲೆ ಸರಣಿ ಆರೋಪ ಮಾಡ್ತಿದ್ದ ಸೋಮಿ ಆಲಿ ಮತ್ತೆ ಗುಡುಗಿದ್ದಾರೆ.
 

Share this Video
  • FB
  • Linkdin
  • Whatsapp

ಸಲ್ಮಾನ್ ಖಾನ್ ಮೇಲೆ ನಟಿ ಸೋಮಿ ಅಲಿ ದೊಡ್ಡ ಆರೋಪ ಮಾಡಿದ್ದು, ಸಿಗರೇಟ್'ನಿಂದ ಸುಟ್ಟಿದ್ದಾನೆ ಎಂದು ಇನ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ನೀನು ನನ್ನ ಶೋಗಳನ್ನ ನಿಲ್ಲಿಸಿದರೂ, ನನ್ನ ಮೇಲೆ ಕೇಸ್ ಹಾಕಿದರೂ ನಾನು ಹೆದರೋದಿಲ್ಲ. ನನ್ನನ್ನ ಬಿಡಿಸಲು 50 ವಕೀಲರಿದ್ದಾರೆ. ನೀನು ನನ್ನನ್ನು ಸಿಗರೇಟ್'ನಿಂದ ಸುಟ್ಟಿದ್ದಕ್ಕೆ, ದೈಹಿಕವಾಗಿ ಕಿರುಕುಳ ಕೊಟ್ಟಿದ್ದಕ್ಕೆ, ಇಷ್ಟು ವರ್ಷಗಳ ಕಾಲ ನನ್ನನ್ನು ನರಳಾಡಿಸಿದ್ದಕ್ಕೆ ಶಿಕ್ಷೆ ಕೊಡಿಸಲು ಹಲವು ವಕೀಲರು ಇದ್ದಾರೆ. ನಿನಗೆ ಬೆಂಬಲವಾಗಿ ನಿಂತ ನಟ- ನಟಿಯರಿಗೆ ನಾಚಿಕೆ ಆಗಬೇಕು. ಈಗ ಹೋರಾಟ ನಡೆಸುವ ಕಾಲ ಬಂದಿದೆ ಎಂದು ಸೋಮಿ ಅಲಿ ಸೋಶಿಯಲ್ ಮೀಡಿಯಾ ಮೂಲಕ ಸಲ್ಲು ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

Related Video