ರಾಶಿ ರಾಶಿ ಸೌಂದರ್ಯದ ಗಣಿ ನಟಿ ರಾಶಿ ಖನ್ನಾ ಬ್ಯೂಟಿ ಸೀಕ್ರೆಟ್

ದಕ್ಷಿಣ ಭಾರತ ಚಿತ್ರರಂಗದ ನಟಿ ರಾಶಿ ಖನ್ನಾ ಅವರ ಸೌಂದರ್ಯದ ಗುಟ್ಟು ಮತ್ತು ಜಿಮ್ ವರ್ಕೌಟ್‌ ವೀಡಿಯೋ ವೈರಲ್ ಆಗಿದೆ. 

Share this Video
  • FB
  • Linkdin
  • Whatsapp

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ.. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಎಲ್ಲಾ ಸ್ಟಾರ್ ಗಳ ಜೊತೆ ನಟಿಸಿ ಲಕ್ಕಿ ಬ್ಯೂಟಿ ಅಂತ ಕರೆಸಿಕೊಂಡಿರೋದು ನಟಿ ರಾಶಿ ಖನ್ನಾ. ದೆಹಲಿ ಮೂಲದ ಈ ಚೆಲುವೆ ಬಾಲಿವುಡ್ ನಿಂದ ಕರೀಯರ್ ಶುರು ಮಾಡಿದ್ರೂ ಹೆಚ್ಚಾಗಿ ಮಿಂಚಿದ್ದು ತಮಿಳು, ತೆಲಗು ಸಿನಿಮಾಗಳಲ್ಲಿ. ರಾಶಿ ಅಂದ್ರೆ ಪಕ್ಕಾ ಸೌಂದರ್ಯದ ರಾಶಿ. ಹಾಗಂತ ರಾಶಿ ತೀರಾ ಸಫೂರವಾಗೇನೂ ಇಲ್ಲ. ತೀರಾ ಸಣ್ಣಗಿದ್ರೆ ಏನು ಚೆಂದ.. ಒಂಚೂರು ಛಬ್ಬಿ ಛಬ್ಬಿಯಾಗಿ ಮುದ್ದುಗೊಂಬೆಯಂತಿರೋ ಈ ಚೆಲುವೆ ತನ್ನ ಮಾದಕ ಮೈಮಾಟದಿಂದ ಪಡ್ಡೆ ಹೈಕಳಿಗೆ ಮತ್ತೇರಿಸ್ತಾಳೆ. ಸೋಷಿಯಲ್ ಮಿಡಿಯಾದಲ್ಲಿ ಸಖತ್ ಅಕ್ಟಿವ್ ಆಗಿರೋ ರಾಶಿ, ತನ್ನ ಮಸ್ತ್ ಪೋಟೋಸ್ ಹಾಕಿ ಹುಡುಗ್ರನ್ನ ಸುಸ್ತು ಮಾಡ್ತಾ ಇರ್ತಾಳೆ. ಒಂಚೂರು ಹೆಚ್ಚೂ ಆಗದ ಕಡಿಮೆಯೂ ಅಗದ ತನ್ನ ಸಮತೂಕದ ಗುಟ್ಟು, ವರ್ಕೌಟ್ ಅನ್ನೋ ಈ ಚೆಲುವೆ, ತನ್ನ ಜಿಮ್ ವಿಡಿಯೋಸ್ ಕೂಡ ಶೇರ್ ಮಾಡ್ತಾಳೆ. ರಾಶಿಯ ರಾಶಿ ರಾಶಿ ವರ್ಕೌಟ್ ವಿಡಿಯೋಸ್​ ಸೋಷಿಯಲ್ ಮಿಡಿಯಾದಲ್ಲಿ ಕಾಡ್ಗಿಚ್ಚು ಹಚ್ತಾ ಇವೆ.

Related Video