ಸಾಲು ಸಾಲು ಸೋಲಿನಿಂದ ಕಂಗಾಲಾಗಿ ಕಾಪು ದೇವಸ್ಥಾನಕ್ಕೆ ಬಂದ್ರಾ ಪೂಜಾ ಹೆಗ್ಡೆ?
ಸೌತ್ ಸುಂದರಿ ಖ್ಯಾತ ನಟಿ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾಪು ಮಾರಿ ಗುಡಿ ಗೆ ಇತ್ತಿಚಿಗಷ್ಟೇ ಭೇಟಿ ನೀಡಿದರು. ಕಾಪು ಮಾರಿಯಮ್ಮನ ಅಪಾರ ಭಕ್ತೆ ಯಾದ ಪೂಜಾ ಹೆಗ್ಡೆ ಈ ಹಿಂದೆಯೂ ಹಲವು ಬಾರಿ ಬಂದು ದೇವಿಯ ದರ್ಶನ ಪಡೆದಿದ್ದಾರೆ. ಎಷ್ಟೇ ಪ್ರಖ್ಯಾತಿ ಗಳಿಸಿದ್ರು ಆಗಾಗ ತಮ್ಮ ಪೂರ್ವಜರ ಊರಿನಲ್ಲಿ ಕಾಣಿಸಿಕೊಳ್ತಾರೆ ಪೂಜಾ.
ಸೌತ್ ಸುಂದರಿ ಖ್ಯಾತ ನಟಿ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾಪು ಮಾರಿ ಗುಡಿ ಗೆ ಇತ್ತಿಚಿಗಷ್ಟೇ ಭೇಟಿ ನೀಡಿದರು. ಕಾಪು ಮಾರಿಯಮ್ಮನ ಅಪಾರ ಭಕ್ತೆ ಯಾದ ಪೂಜಾ ಹೆಗ್ಡೆ ಈ ಹಿಂದೆಯೂ ಹಲವು ಬಾರಿ ಬಂದು ದೇವಿಯ ದರ್ಶನ ಪಡೆದಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಪೂಜಾ ಹೆಗ್ಡೆಯ ಮೂಲ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು.ಎಷ್ಟೇ ಪ್ರಖ್ಯಾತಿ ಗಳಿಸಿದ್ರು ಆಗಾಗ ತಮ್ಮ ಪೂರ್ವಜರ ಊರಿನಲ್ಲಿ ಕಾಣಿಸಿಕೊಳ್ತಾರೆ ಪೂಜಾ. ಅವಕಾಶ ಸಿಕ್ಕಾಗಲೆಲ್ಲ ಕಾಪುವಿಗೆ ಆಗಮಿಸಿ ಹೊಸ ಮಾರಿಗುಡಿಗೆ ಭೇಟಿಕೊಟ್ಟು ದೇವಿಯ ದರ್ಶನ ಮಾಡುತ್ತಾ ಬಂದಿದ್ದಾರೆ. ಇಂದು ಕೂಡ ಕುಟುಂಬ ಸಹಿತರಾಗಿ ಬಂದು ಬಹಳ ಹೊತ್ತು ಮಾರಿಗುಡಿಯಲ್ಲಿ ಕಳೆದರು...ದರ್ಶನ ಪಾತ್ರಿಯ ಮುಂದೆ ತನ್ನ ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು ಪೂಜಾ ಹೆಗ್ಡೆ