ವೈರಾಗ್ಯಕ್ಕೆ ಒಳಗಾದ್ರಾ ನಿತ್ಯಾ ಮೆನನ್, ಸನ್ಯಾಸಿನಿ ಆಗೋದು ಪಕ್ಕಾ ಆಗೋಯ್ತಾ?

ರಾಷ್ಟ್ರಪ್ರಶಸ್ತಿ ಬಂದ ಮೇಲೆ ಮತ್ತೆ ನಿತ್ಯಾಗೆ ಬೇಡಿಕೆ ಹೆಚ್ಚಾಗಿದೆ. ತಮಿಳು, ಮಲಯಾಳಂ ಇಂಡಸ್ಟ್ರಿಯಿಂದ ಒಳ್ಳೋಳ್ಳೆ ಆಫರ್ಸ್ ಬರ್ತಾ ಇವೆ. ಆದ್ರೆ ನಿತ್ಯಾ ಮಾತ್ರ ಸಿನಿಮಾ ಸಹವಾಸ ಸಾಕು ಅಂತಿದ್ದಾರೆ...

First Published Jan 11, 2025, 12:08 PM IST | Last Updated Jan 11, 2025, 12:09 PM IST

ತನ್ನ ಸಹಜ ಸೌಂದರ್ಯ, ಅದ್ಭುತ ನಟನೆಯಿಂದ ಸೌತ್ ದುನಿಯಾದಲ್ಲಿ ತನ್ನದೇ ಸ್ಥಾನ ಪಡೆದಿರೋದು ನಟಿ ನಿತ್ಯಾ ಮೆನನ್ (Nithya Menon). ಬಾಲನಟಿಯಾಗಿ ಬಂದು ಸ್ಟಾರ್ ನಟಿಯಾಗಿ ಮಿಂಚಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನೇ ಮುಡಿಗೇರಿಸಿಕೊಂಡಿರೋ ಈ ಚೆಲುವೆ, ಈಗ ಸಿನಿಇಂಡಸ್ಟ್ರಿಗೆ ಗುಡ್ ಬೈ ಹೇಳಲಿದ್ದಾರಂತೆ. ಚಿತ್ರರಂಗಕ್ಕೆ ವಿದಾಯ ಹೇಳುವ ಬಗ್ಗೆ ಮಾತನಾಡಿರೋ ನಿತ್ಯಾ , ಎಲ್ಲದರಿಂದ ದೂರವಾಗುವ ಸೂಚನೆ ನೀಡಿದ್ದಾರೆ. ಹಾಗಾದ್ರೆ ಏನಾಯ್ತು ನಿತ್ಯಾಗೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಹೌದು, ಸೌತ್ ಸಿನಿರಂಗದ ಸಹಜ ಸುಂದರಿ, ಕರ್ಲಿ ಹೇರ್ ಬ್ಯೂಟಿ ನಿತ್ಯಾ ಮೆನನ್ ಸುದ್ದಿಯಲ್ಲಿದ್ದಾರೆ. ಸದ್ಯ ನಿತ್ಯಾ ಮೆನನ್ ಅಭಿನಯದ 'ಕಾದಲಿಕ್ಕ ನೇರಮಿಲ್ಲೈ' ಸಿನಿಮಾ ರಿಲೀಸ್​​ಗೆ ಸಜ್ಜಾಗಿದೆ. ಇದೇ ಸಿನಿಮಾದ ಪ್ರಮೋಷನ್​ನಲ್ಲಿ ತೊಡಗಿರೋ ನಿತ್ಯಾ ಸಂದರ್ಶನವೊಂದರಲ್ಲಿ, ಸದ್ಯದಲ್ಲೇ ನಾನು ಚಿತ್ರರಂಗದಿಂದ ದೂರವಾಗ್ತಿನಿ ಅಂತ ಮಾತು ಹೇಳಿದ್ದಾರೆ.

ಅರೇ ಇದೇನಿದು ನಿತ್ಯಾ ವಿದಾಯದ ಮಾತನಾಡ್ತಾ ಇದ್ದಾರೆ, ಅಂಥದ್ದೇನಾಯ್ತು ಈ ಸಹಜ ಸುಂದರಿಗೆ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. 2022 ರಲ್ಲಿ ನಿತ್ಯಾ ನಟಿಸಿದ ತಿರುಚಿತ್ರಂಬಲಂ ಸಿನಿಮಾಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಕಳೆದ ವರ್ಷ ವಷ್ಟೇ ನಿತ್ಯಾ ನ್ಯಾಷನಲ್ ಅವಾರ್ಡ್ ಸ್ವೀಕಾರ ಮಾಡಿದ್ರು.

ರಾಷ್ಟ್ರಪ್ರಶಸ್ತಿ ಬಂದ ಮೇಲೆ ಮತ್ತೆ ನಿತ್ಯಾಗೆ ಬೇಡಿಕೆ ಹೆಚ್ಚಾಗಿದೆ. ತಮಿಳು, ಮಲಯಾಳಂ ಇಂಡಸ್ಟ್ರಿಯಿಂದ ಒಳ್ಳೋಳ್ಳೆ ಆಫರ್ಸ್ ಬರ್ತಾ ಇವೆ. ಆದ್ರೆ ನಿತ್ಯಾ ಮಾತ್ರ ಸಿನಿಮಾ ಸಹವಾಸ ಸಾಕು ಅಂತಿದ್ದಾರೆ.

'ಸಿನಿಮಾವನ್ನು ಇಷ್ಟಪಡದ ವ್ಯಕ್ತಿ ನಾನು. ಈಗಲೂ ಹಾಗೆಯೇ ಇದ್ದೇನೆ. ಒಂದು ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಸಿನಿಮಾ ನಟನೆಯನ್ನು ನಿಲ್ಲಿಸುತ್ತೇನೆ. ಅದೇ ವಿಪರ್ಯಾಸ. ನಾನು ಈ ವಿಷಯ ಹೇಳಿದರೆ ನನಗೆ ಸಿನಿಮಾದ ಬಗ್ಗೆ ಕೃತಜ್ಞತೆ ಇಲ್ಲ ಎಂದು ಅನಿಸುತ್ತದೆ. ಆದ್ದರಿಂದ ಈ ಬಗ್ಗೆ ಮಾತನಾಡುವುದಿಲ್ಲ. ನನ್ನ ವ್ಯಕ್ತಿತ್ವ ಮತ್ತು ಸಿನಿಮಾ ನಡುವೆ ದೊಡ್ಡ ವ್ಯತ್ಯಾಸವಿದೆ. ನಾನು ಎಲ್ಲರಂತೆಯೂ ಸಾಮಾನ್ಯ ಜೀವನವನ್ನು ಬಯಸಿದ್ದೆ. 

ನಾಲು ಪೈಲಟ್ ಆಗಬಯಸಿದ್ದೆ. ಯಾವುದೇ ನಿರ್ಬಂಧಗಳಿಲ್ಲದೆ ಮುಕ್ತವಾಗಿರಬೇಕೆಂದು ಬಯಸಿದ್ದೆ. ಈಗ ಅದು ಸಾಧ್ಯವಿಲ್ಲ. ನಿಜವಾಗಿ ನಾನು ಹಾಗೆಯೇ ಇದ್ದೇನೆ ಕೂಡ. ನನಗೆ ಪ್ರಯಾಣವೆಂದರೆ ಇಷ್ಟ. ಉದ್ಯಾನವನಕ್ಕೆ ಹೋಗಬೇಕು, ಮರಗಳೆಂದರೆ ಇಷ್ಟ. ಆದರೆ ಈಗ ಯಾವುದನ್ನೂ ನಾನು ಮುಕ್ತವಾಗಿ ಮಾಡುವುದಕ್ಕೆ ಅವಕಾಶಗಳು ಇಲ್ಲ. ಅದಕ್ಕಾಗಿ ಕೆಲವೊಮ್ಮೆ ಸಿನಿಮಾ ಬೇಡವೇ ಬೇಡ ಎಂದು ಯೋಚಿಸಿದ್ದೇನೆ. ವೃತ್ತಿಯಿಂದ ನಿಧಾನವಾಗಿ ದೂರವಾಗಬಹುದು ಎಂದು ಭಾವಿಸಿದಾಗ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಅದು ದೇವರ ನಿರ್ಧಾರ' 

ನನ್ನ ವ್ಯಕ್ತಿತ್ವ ಬಣ್ಣದ ಲೋಕಕ್ಕೆ ಹೊಂದುವಂಥದ್ದಲ್ಲ. ಈಗ ಒಪ್ಪಿಕೊಂಡಿರೋ ಸಿನಿಮಾಗಳನ್ನ ಮುಗಿಸಿಕೊಟ್ಟು ಎಲ್ಲಾದರೂ ದೂರ ಹೋಗಿಬಿಡ್ತಿನಿ ಅನ್ನೋ ಮಾತನಾಡಿದ್ದಾರೆ ನಿತ್ಯಾ. ನಿತ್ಯಾರ ಈ ಮಾತುಗಳು ಫ್ಯಾನ್ಸ್​ಗೆ ಶಾಕ್ ತಂದಿವೆ.

ನಿತ್ಯಾ ತಂದೆ ತಾಯಿ ಮಲಯಾಳಂ ಮೂಲದವರು. ಆದ್ರೆ ನಿತ್ಯಾ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. 2006ರಲ್ಲಿ ಬಂದ 7 ಓ ಕ್ಲಾಕ್ ಸಿನಿಮಾದಲ್ಲಿ ನಾಯಕಿಯ ತಂಗಿ ಪಾತ್ರ ಮಾಡಿದ್ರು ನಿತ್ಯಾ. ಅಲ್ಲಿಂದ ಮಾಲಿವುಡ್​ಗೆ ಹಾರಿದ್ರು. ಅಲ್ಲಿಂದ ಟಾಲಿವುಡ್ ಕೈ ಬೀಸಿ ಕರೆಯಿತು. ನೋಡ್ ನೋಡ್ತಾ ಕಾಲಿವುಡ್, ಟಾಲಿವುಡ್​ನ ಬಹುಬೇಡಿಕೆ ನಟಿಯಾಗಿಬಿಟ್ರು ನಿತ್ಯಾ,

ಅದೆಷ್ಟೇ ಎತ್ತರಕ್ಕೆ ಹೋದ್ರೂ ನಿತ್ಯಾ ಕನ್ನಡ ಪ್ರೀತಿ ಕಮ್ಮಿ ಆಗ್ಲಿಲ್ಲ. ಬೇರೆ ನಟಿಯರಂತೆ ನಿತ್ಯಾ ಕನ್ನಡ ಮರೆಯಲಿಲ್ಲ. ಮೈನಾ, ಕೋಟಿಗೊಬ್ಬ -2 ಸೇರಿದಂತೆ ಕನ್ನಡದಲ್ಲೂ ನಿತ್ಯಾ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ.

ಈ ನಡುವೆ ನಿತ್ಯಾ ಇದ್ದಕ್ಕಿದ್ದಂತೆ ದಪ್ಪ ಆದ್ರು. ನಿತ್ಯಾಗಿದ್ದ ಬೇಡಿಕೆಯೂ ಕಮ್ಮಿ ಆಯ್ತು. ಆದ್ರೆ ಈಕೆಯ ಪ್ರಭುದ್ದ ನಟನೆಗಾಗೇ ಹಲವು ಪಾತ್ರಗಳು ಹುಡುಕಿಕೊಂಡು ಬರ್ತಾ ಇದ್ವು. ತಿರುಚಿತ್ರಂಬಲಂ ಕೂಡ ಅದೇ ರೀತಿ ಬಂದಂಥ ಸಿನಿಮಾ. ಈ ಸಿನಿಮಾದ ನಟನೆಗೆ ನಿತ್ಯಾಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಸಸ್ತಿ ಒಲಿದುಬಂತು.

ಸದ್ಯ ನಿತ್ಯಾ ಕೈಲಿ ಮೂರು ಸಿನಿಮಾಗಳಿವೆ. ಅವುಗಳು ಕಂಪ್ಲೀಟ್ ಆಗ್ತಾ ಇದ್ದ ಹಾಗೇ ಚಿತ್ರರಂಗ ತೊರೆಯುವ ಮಾತನಾಡಿದ್ದಾರೆ ನಿತ್ಯಾ. ಆದ್ರೆ ಯಾರಿಗೂ ನಾನೆಲ್ಲಿದ್ದಿನಿ ಅನ್ನೋದೇ ತಿಳಿಯಬಾರದು ಹಾಗೆ ಉಳಿದುಬಿಡ್ತಿನಿ ಅಂದ್ದಿದ್ದಾರೆ ನಿತ್ಯಾ,,? ನಿತ್ಯಾ ಈ ಮಾತನ್ನೇಕೆ ಹೇಳಿದ್ರು..? ನಿತ್ಯಾಗೀಗ 35ರ ಹರೆಯ. ಈಗಲೂ ಈಕೆ ಸಿಂಗಲ್. ಸೋ ನಿತ್ಯಾ ಏನಾದ್ರೂ ಸನ್ಯಾಸಿನಿ ಆಗಿಬಿಡ್ತಾರಾ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ನಿತ್ಯಾ ಮಾತ್ರ ಬಣ್ಣದ ಲೋಕವೆಂದರೆ ಮಿಥ್ಯ.. ಸತ್ಯ ಹುಡುಕ್ತಿನಿ ಅಂತಿದ್ದಾರೆ..! ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...