47ನೇ ವಯಸ್ಸಿನಲ್ಲಿ ಎರಡನೇ ಮದುವೆ ಆಗುತ್ತಾರಾ ಕನ್ನಡದ ನಟಿ ಮೀನಾ?

ದಕ್ಷಿಣ ಭಾರತದ ಜನಪ್ರಿಯ ನಟಿ ಮೀನಾ ಇತ್ತೀಚೆಗೆ ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ರೂ ಮೀನಾ ಬಹು ಬೇಡಿಕೆಯ ನಟಿಯಾಗಿದ್ದಾರೆ. ಆದ್ರೆ ಕಳೆದ ಕೆಲವು ತಿಂಗಳುಗಳಿಂದ ಮೀನಾ ಎರಡನೇ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ.

Share this Video
  • FB
  • Linkdin
  • Whatsapp

ದಕ್ಷಿಣ ಭಾರತದ ಜನಪ್ರಿಯ ನಟಿ ಮೀನಾ ಇತ್ತೀಚೆಗೆ ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ರೂ ಮೀನಾ ಬಹು ಬೇಡಿಕೆಯ ನಟಿಯಾಗಿದ್ದಾರೆ. ಆದ್ರೆ ಕಳೆದ ಕೆಲವು ತಿಂಗಳುಗಳಿಂದ ಮೀನಾ ಎರಡನೇ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ಮೀನಾ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರ ಪರಿಚಿತೆ. ಕನ್ನಡದಲ್ಲಿ ಪುಟ್ನಂಜ, ಗ್ರಾಮದೇವತೆ, ಸ್ವಾತಿ ಮುತ್ತು ನಂತಹ ಬಿಗ್ ಹಿಟ್ ಸಿನಿಮಾಗಳನ್ನ ಮಾಡಿದ್ದಾರೆ. ಮೀನಾಗೆ ಈಗ 47 ವರ್ಷ ವಯಸ್ಸು. ಇವರಿಗೆ ಒಬ್ಬ ಮಗಳು ಕೂಡ ಇದ್ದಾರೆ. ಆದ್ರೆ ಮೀನಾ ಪತಿ ವಿದ್ಯಾಸಾಗರ್‌ಗೆ ಶ್ವಾಸಕೋಶದ ಸಮಸ್ಯೆಯಿತ್ತು. ಪತಿ ಜೀವ ಉಳಿಸಿಕೊಳ್ಳಲು ಮೀನಾ ಹೋರಾಟ ಮಾಡಿದ್ರು. 

ಆದ್ರೆ ಅದು ಸಾಧ್ಯವಾಗಿರಲಿಲ್ಲ. ಕಳೆದ 2022ರಲ್ಲಿ ಮೀನಾ ಪತಿ ವಿಶ್ಯಾಸಾಗರ್ ನಿಧನ ಹೊಂದಿದ್ರು. ಮೀನಾ ಪತಿ ನಿಧನರಾದ ಕೆಲವು ದಿನಗಳಲ್ಲಿ ಮೀನಾ ಎರಡನೇ ಮದುವೆ ಆಗುತ್ತಾರೆ ಅಂತ ಸುದ್ದಿ ಹಬ್ಬಿತ್ತು. ನಟಿ ಮೀನಾ ತನ್ನ ಎರಡನೇ ಮದುವೆ ಬಗ್ಗೆ ಕಮೆಂಟ್ ಮಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಸಾಕಷ್ಟು ಮಂದಿ ನಟಿಯರು ಸಿಂಗಲ್ ಆಗಿದ್ದಾರೆ. ಅಷ್ಟೇ ಯಾಕೆ ನಾಯಕರು ಕೂಡ ಒಂಟಿಯಾಗಿದ್ದಾರೆ. ತನ್ನ ಬಗ್ಗೆ ಇಂತಹ ಮದುವೆ ಸುದ್ದಿಗಳು ಬಂದಾಗ ತುಂಬಾ ಬೇಸರವಾಗುತ್ತೆ ಎಂದಿದ್ದಾರೆ. ಸ್ವಾತಿ ಮುತ್ತಿನ ಬ್ಯೂಟಿ ಮೀನಾ ಮದುವೆ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವರ ಮೇಲೆ ಮೀನಾಗೆ ತುಂಬಾ ಕೋಪವಿದೆಯಂತೆ. ಹಲವು ಮಂದಿ ಒಂಟಿಯಾಗಿದ್ದಾರೆ. ನಾನು ಹಾಗೇ ಇರುತ್ತೇನೆ. ನನಗೆ ಎರಡನೇ ಮದುವೆ ಯೋಚನೆ ಇಲ್ಲ ಎಂದಿದ್ದಾರೆ ಮೀನಾ. ಸಧ್ಯ ಮೀನಾ ಹೈದರಾಬಾದ್​ನಲ್ಲಿ ನಲೆಸಿದ್ದಾರೆ.

Related Video