Asianet Suvarna News Asianet Suvarna News

Oscar ಪ್ರಶಸ್ತಿಗೆ ತಮಿಳಿನ 'ಜೈ ಭೀಮ್' ಹಾಗೂ ಮಲಯಾಳಂನ 'ಮರಕ್ಕರ್' ಆಯ್ಕೆ

ತಮಿಳು ನಟ ಸೂರ್ಯ ಅಭಿನಯದ 'ಜೈ ಭೀಮ್' ಹಾಗೂ ಮಲಯಾಳಂ ನಟ ಮೋಹನ್‌ಲಾಲ್‌ ನಟನೆಯ 'ಮರಕ್ಕರ್' 2022ರ ಆಸ್ಕರ್‌ ಅತ್ಯುತ್ತಮ ಚಲನಚಿತ್ರಕ್ಕೆ ಆಯ್ಕೆಯಾಗಿದೆ. ಆಸ್ಕರ್ ನಾಮನಿರ್ದೇಶನ ಮತದಾನವು ಜನವರಿ 27ರಂದು ಪ್ರಾರಂಭವಾಗಲಿದೆ. 

ತಮಿಳು ನಟ ಸೂರ್ಯ (Suriya) ಅಭಿನಯದ 'ಜೈ ಭೀಮ್' (Jai Bhim) ಹಾಗೂ ಮಲಯಾಳಂ ನಟ ಮೋಹನ್‌ಲಾಲ್‌ (Mohanlal) ನಟನೆಯ 'ಮರಕ್ಕರ್' (Marakkar) 2022ರ ಆಸ್ಕರ್‌ (Oscar) ಅತ್ಯುತ್ತಮ ಚಲನಚಿತ್ರಕ್ಕೆ ಆಯ್ಕೆಯಾಗಿದೆ. ವಿಶ್ವದಾದ್ಯಂತ ಆಯ್ಕೆಯಾಗಿರುವ 276 ಚಿತ್ರಗಳ ಪೈಕಿ 'ಜೈ ಭೀಮ್' ಮತ್ತು ಮಲಯಾಳಂ ಚಿತ್ರ 'ಮರಕ್ಕರ್' ಭಾರತದಿಂದ ಆಯ್ಕೆಯಾಗಿವೆ. ಅಂತಿಮ ನಾಮನಿರ್ದೇಶನ ಪಟ್ಟಿಯು ಫೆಬ್ರವರಿ 8, 2022 ರಂದು ಪ್ರಕಟವಾಗಲಿದೆ. ಆಸ್ಕರ್ ನಾಮನಿರ್ದೇಶನ ಮತದಾನವು ಜನವರಿ 27ರಂದು ಪ್ರಾರಂಭವಾಗಲಿದೆ. ಅದಾದ ಬಳಿಕ ಅಂತಿಮ ನಾಮನಿರ್ದೇಶನದ ಪಟ್ಟಿಯನ್ನು ಫೆಬ್ರವರಿ 8ರಂದು ಪ್ರಕಟವಾಗಲಿದೆ. 

ರಿಯಾಲಿಟಿ ಶೋನಲ್ಲಿ ಬಿಕ್ಕಿಬಿಕ್ಕಿ ಅತ್ತ Parineeti Chopra!

ನಂತರ ಪ್ರಶಸ್ತಿ ಪ್ರಧಾನ ಸಮಾರಂಭವು ಮಾರ್ಚ್ 27ರಂದು ಅಮೆರಿಕಾದಲ್ಲಿ ನಡೆಯಲಿದೆ. ಇರುಲರ್ ಬುಡಕಟ್ಟಿನ ಜನರಿಗಾಗುವ ಅನ್ಯಾಯ ಮತ್ತು ಪೊಲೀಸ್ ದೌರ್ಜನ್ಯದ ಬಗ್ಗೆ ಮಾತನಾಡುವ ಸೂರ್ಯ ಅಭಿನಯದ ಜೈ ಭೀಮ್, 2021 ರ ಅತ್ಯುತ್ತಮ ತಮಿಳು ಚಲನಚಿತ್ರ. ಟಿಜೆ ಜ್ಞಾನವೇಲ್ (TJ Gnanavel) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಐತಿಹಾಸಿಕ ಕಥೆ ಆಧಾರಿತ 'ಮರಕ್ಕರ್' ಸಿನಿಮಾದಲ್ಲಿ ಮೋಹನ್ ಲಾಲ್ ಅರಬ್ಬಿ ಸಮುದ್ರದ ಹುಲಿಯಂತೆ ಘರ್ಜಿಸಿ, ಜನಮನ್ನಣೆ ಗಳಿಸಿದ್ದರು. ಕೇರಳದ ಕ್ಯಾಲಿಕಟ್‌ನಲ್ಲಿ 16ನೇ ಶತಮಾನದಲ್ಲಿ ನಡೆಯುವ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment