
220 ಕೋಟಿ ರೂ ಗಳಿಸಿದ್ರೂ, ನಿರ್ಮಾಪಕರ ಕೈ ಸುಡುವಂತೆ ಮಾಡಿದ Rajinikanth Coolie Movie!
ಸೂಪರ್ ಸ್ಟಾರ್ ರಜನಿಕಾಂತ್-ಲೊಕೇಶ್ ಕನಗರಾಜ್ ಕಾಂಬಿನೇಷನ್ನ ಕೂಲಿ ಸಿನಿಮಾ ಬಾಕ್ಸಾಫೀಸ್ ಲೂಟಿ ಮಾಡುತ್ತೆ ಅಂತಲೇ ನಿರೀಕ್ಷೆ ಮಾಡಲಾಗಿತ್ತು. ಅದ್ರಲ್ಲೂ ಎಲ್ಲಾ ಭಾಷೆಯ ಸ್ಟಾರ್ಗಳಿದ್ದ ಈ ಮಲ್ಟಿಸ್ಟಾರರ್ ಮೂವಿ 1000 ಕೋಟಿ ಕ್ಲಬ್ ಸೇರುವ ಮೊದಲ ತಮಿಳು ಚಿತ್ರವಾಗುತ್ತೆ ಎನ್ನಲಾಗಿತ್ತು.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ಕಳೆದ ಗುರವಾರ ವರ್ಲ್ಡ್ ವೈಡ್ ದಾಖಲೆ ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿತ್ತು. ಚಿತ್ರದ ಓಪನಿಂಗ್ ಅಬ್ಬರ ನೋಡಿದವರು ಸಿನಿಮಾ ಈ ವರ್ಷದ ಬಿಗ್ಗೆಸ್ಟ್ ಹಿಟ್ ಆಗುತ್ತೆ ಅಂದುಕೊಂಡಿದ್ರು. ಅಂತೆಯೇ ಮೊದಲ ದಿನವೇ ಕೂಲಿ ಸಿನಿಮಾ 65 ಕೋಟಿ ಗಳಿಕೆ ಮಾಡಿತ್ತು.ಸೂಪರ್ ಸ್ಟಾರ್ ರಜನಿಕಾಂತ್ ನಟನೆ- ಲೊಕೇಶ್ ಕನಗರಾಜ್ ನಿರ್ದೇಶನ ಈ ಎರಡು ಆಕರ್ಷಣೆಗಳ ಜೊತೆಗೆ ಬೇರೆ ಬೇರೆ ಭಾಷೆಯ ಸ್ಟಾರ್ ಗಳು ಈ ಸಿನಿಮಾದಲ್ಲಿದ್ರು. ಕಿಂಗ್ ನಾಗಾರ್ಜುನ್, ರಿಯಲ್ ಸ್ಟಾರ್ ಉಪೇಂದ್ರ, ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್, ಶೌಬಿನ್ ಸಾಹೀರ್, ಶೃತಿ ಹಾಸನ್, ರಚಿತಾ ರಾಮ್.. ಇಷ್ಟು ದೊಡ್ಡ ತಾರಾಬಳಗವನ್ನ ಸೇರಿಸಿದ್ದ ನಿರ್ದೇಶಕ ಲೊಕೇಶ್, ಕಾಲಿವುಡ್ನ ಮೊದಲ ಸಾವಿರ ಕೋಟಿ ಸಿನಿಮಾ ಇದಾಗಲಿದೆ ಅನ್ನೋ ನಿರೀಕ್ಷೆಯಲ್ಲಿದ್ರು. ಆದ್ರೆ ಆ ನಿರೀಕ್ಷೆ ಹುಸಿಯಾಗಿದೆ.