25 ಸಾವಿರ ಹಣಕ್ಕಾಗಿ ಅಚ್ಯುತ್‌ ಕುಮಾರ್‌ರನ್ನ ಪೀಡಿಸಿದ್ರ ಸತೀಶ್ ನೀನಾಸಮ್!

ಸತೀಶ್‌ ನೀನಾಸಂ ನಾಯಕರಾಗಿ ನಟಿಸಿರುವ ‘ಪೆಟ್ರೋಮ್ಯಾಕ್ಸ್‌’ ಸಿನಿಮಾ ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.  ವಿಜಯ್‌ ಪ್ರಸಾದ್‌ ನಿರ್ದೇಶನದ ಈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

First Published Jul 4, 2022, 10:15 PM IST | Last Updated Jul 4, 2022, 10:19 PM IST

ಸತೀಶ್‌ ನೀನಾಸಂ ನಾಯಕರಾಗಿ ನಟಿಸಿರುವ ‘ಪೆಟ್ರೋಮ್ಯಾಕ್ಸ್‌’ ಸಿನಿಮಾ ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.  ವಿಜಯ್‌ ಪ್ರಸಾದ್‌ ನಿರ್ದೇಶನದ ಈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಮಧ್ಯೆ ಸತೀಶ್ ನೀನಾಸಮ್ ಅವರು ಕನ್ನಡದ ಹಿರಿಯ ಪೋಷಕ ನಟ ಅಚ್ಯುತ್‌ಕುಮಾರ್ ಅವರೊಂದಿಗೆ ಹಣಕ್ಕಾಗಿ ಪೀಡಿಸಿದ ಆಡಿಯೋವೊಂದು ವೈರಲ್ ಆಗಿದೆ. ಇದೇನು ಸತೀಶ್ ನೀನಾಸಮ್ ಹಣಕ್ಕಾಗಿ ಪೀಡಿಸಿದರಾ ಎಂದು ಹುಬ್ಬೇರಿಸ್ತಿದ್ದೀರಾ? ಸತೀಶ್ ಅವರು ತಮ್ಮ ಸ್ವರವನ್ನು ಬದಲಾಯಿಸಿ ನಿಮ್ಮ ಜೊತೆ ನಾನು ಕೆಲಸ ಮಾಡಿದ್ದೇನೆ. ನನ್ನ ಮಗಲ ಮದುವೆ ಇದೇ ಸ್ವಲ್ಪ ನೆರವು ನೀಡಿ ಎಂದು ಕೇಳುತ್ತಾರೆ. ಇದಕ್ಕೆ ಅಚ್ಯುತ್ ಅವರು ನೀವು ಯಾರು ಎಂದು ಕೇಳಿದರೆ ತಾನು ವೆಂಕಟೇಶ್ ನಿಮ್ಮ ಜೊತೆ ಕೆಲಸ ಮಾಡಿದ್ದೇನೆ ಎಂದು ಹೇಳುವುದರ ಜೊತೆಗೆ ಅಷ್ಟೊಂದು ದುಡ್ಡು ಪಡೆಯುತ್ತಿರಿ ನನಗೆ ಸ್ವಲ್ಪ ನೆರವು ನೀಡಿ ಎನ್ನುತ್ತಾರೆ. ಇದರಿಂದ ಸಿಟ್ಟಾದ ಅಚ್ಯುತ್ ಆ ರೀತಿ ಎಲ್ಲಾ ಮಾತನಾಡದಂತೆ ತಾಕೀತು ಮಾಡುತ್ತಾರೆ. ಆದರೂ ಹೆಸರು ಹೇಳದೇ ಸತೀಶ್ ಪೀಡಿಸಲು ಶುರು ಮಾಡಿದಾಗ ಅಚ್ಯುತ್ ತಮ್ಮ ಕರೆಯನ್ನು ಕಡಿತಗೊಳಿಸುತ್ತಾರೆ. 

ಸ್ಯಾಂಡಲ್‌ವುಡ್‌ನಲ್ಲಿ'ನೀರ್‌ ದೋಸೆ' ಸಿನಿಮಾ ಖ್ಯಾತಿಯ ನಿರ್ದೇಶಕ ವಿಜಯ್‌ ಪ್ರಸಾದ್‌ ಬಹಳ ದಿನಗಳ ನಂತರ ಮಾಡಿರುವ 'ಪೆಟ್ರೋಮ್ಯಾಕ್ಸ್‌' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಸತೀಶ್‌ ನೀನಾಸಂ ನಾಯಕ ಮತ್ತು ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಇವರ ಜತೆಗೆ ಕಾರುಣ್ಯ ರಾಮ್‌, ಗೊಂಬೆಗಳ ಲವ್‌ ಅರುಣ್‌, ಇಕ್ಕಟ್‌, ಮೇಡ್‌ ಇನ್‌ ಚೈನಾ ಸಿನಿಮಾ ಖ್ಯಾತಿಯ ನಾಗಭೂಷಣ್‌ ಸಹ ಪ್ರಮುಖ ಪಾತ್ರಗಳಲ್ಲಿದ್ದಾರೆ.