
ಹೃತಿಕ್ ರೋಶನ್ & ಜ್ಯೂನಿಯರ್ ಎನ್‌ಟಿಆರ್ ನಡುವೆ ಮಹಾಕದನ! ಇದು ಬರೀ ವಾರ್ 2 ಅಲ್ಲ.. ವರ್ಲ್ಡ್ ವಾರ್ 2!
ಹೃತಿಕ್ ರೋಷನ್- ಜ್ಯೂನಿಯರ್ ಡೆಡ್ಲಿ ಕಾಂಬಿನೇಷನ್ ಇರುವ ವಾರ್-2 ಇನ್ನೇನು ರಿಲೀಸ್ಗೆ ಸಜ್ಜಾಗಿದೆ. ರಿಲೀಸ್ ಹೊಸ್ತಿಲಲ್ಲಿ ಬಂದಿರೋ ಟ್ರೈಲರ್ , ಮತ್ತದಲ್ಲಿರೋ ಆಕ್ಷನ್ ಧಮಾಕಾ ನೋಡಿದವರು ಇದು ಮಹಾಕದನ ಅಂತಾ ಇದ್ದಾರೆ.
ವಾರ್-2 ಸಿನಿಮಾದ ಹೈವೋಲ್ಟೇಜ್ ಆಕ್ಷನ್ ಭರಿತ ಟ್ರೈಲರ್ ನೋಡಿದವರು ಇದು ಬರೀ ವಾರ್-2 ಅಲ್ಲ ವರ್ಲ್ಡ್ ವಾರ್ -2 ಅಂತಾ ಇದ್ದಾರೆ. ಹಾಲಿವುಡ್ ಆಕ್ಷನ್ ಸಿನಿಮಾಗಳನ್ನೂ ಮೀರಿಸುವಂಥಾ ರೋಚಕ ಸಾಹಸಮಯ ದೃಶ್ಯಗಳು ವಾರ್-2 ಟ್ರೈಲರ್ನಲ್ಲಿವೆ. ಅಸಲಿಗೆ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸೌತ್ ನ ಯಂಗ್ ಟೈಗರ್ ಎನ್.ಟಿ.ಆರ್ ಒಟ್ಟಾಗಿ ಸಿನಿಮಾ ಮಾಡ್ತಾರೆ ಅಂದಾಗಲೇ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಗರಿಗೆದರಿತ್ತು. ಸೌತ್ ಮತ್ತು ನಾರ್ತ್ನ ಇಬ್ಬರೂ ಮೆಗಾಸ್ಟಾರ್ಗಳಿರುವ ಈ ಸಿನಿಮಾ ದೇಶಾದ್ಯಂತ ಬಾಕ್ಸಾಫೀಸ್ ಕೊಳ್ಳೆ ಹೊಡೆಯೋ ತಯಾರಿಯಲ್ಲಿದೆ.