ಆ್ಯಕ್ಷನ್ ಪ್ರಿನ್ಸ್ ಧ್ರುವ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್..!

ಜೋಗಿ ಪ್ರೇಮ್ ಜೊತೆಗಿನ ಹೊಸ ಸಿನಿಮಾದ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ. ಈ ಬಗ್ಗೆ ಬಿಗ್ ಅಪ್ ಡೇಟ್ ನೀಡಿರುವ ಧ್ರುವ ಸಿನಿಮಾದ ಫಸ್ಟ್ ಲುಕ್ ಟೈಟಲ್ ಲಾಂಚ್ ಇದೇ ತಿಂಗಳು ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. ಜೂನ್ ನಿಂದ ಸಿನಿಮಾ ಶೂಟಿಂಗ್ ಪ್ರಾರಂಭವಾಗಲಿದೆಯಂತೆ.

Share this Video
  • FB
  • Linkdin
  • Whatsapp

ಆ್ಯಕ್ಷನ್ ಪ್ರಿನ್ಸ್ ದೃವ ಸರ್ಜಾ ಮಾರ್ಟಿನ್ ಸಿನಿಮಾ ಸೆಟ್ ನಿಂದ ಬ್ರೇಕ್ ಪಡೆದಿದ್ದಾರೆ. ಹಾಗಂತ ಧ್ರುವ ಸುಮ್ಮನೆ ಕೂತಿಲ್ಲ. ತಮ್ಮ ಸಿನಿ ಇಂಡಸ್ಟ್ರಿಯ ಯಂಗ್ ಸ್ಟರ್ಸ್ ಗೆ ಗ್ರ್ಯಾಂಡ್ ವೆಲ್ ಕಮ್ ಮಾಡೋಕೆಂದು ಹೊಸ ಸಿನಿಮಾ ಮುಹೂರ್ತಕ್ಕೆ ಬಂದಿದ್ದರು. ಬ್ಯಾಂಗಲ್ ಸ್ಟೋರ್, ಪ್ರೀಮಿಯರ್ ಪದ್ಮಿನಿ, ರತ್ನನ್ ಪ್ರಪಂಚ ಸಿನಿಮಾ ಖ್ಯಾತಿಯ ಪ್ರಮೋದ್ ನಾಯಕ ನಟನಾಗಿ ನಟಿಸುತ್ತಿರೋ ಬಾಂಡ್ ರವಿ ಸಿನಿಮಾದ ಮುಹೂರ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ನಟ ಧ್ರುವ ಸರ್ಜಾ ಹಾಗು ಮರಿ ಟೈಗರ್ ವಿನೋದ್ ಪ್ರಭಾಕರ್ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದ್ದರು. ಬಾಂಡ್ ರವಿ ಚಿತ್ರಕ್ಕೆ ಪ್ರಜ್ವಲ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಫಸ್ಟ್ ಲುಕ್ ಧ್ರುವ ಲಾಂಚ್ ಮಾಡಿದ್ರು.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಎ.ಪಿ ಅರ್ಜುನ್ ಜೊತೆ ಮಾರ್ಟಿನ್ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ಜೋಗಿ ಪ್ರೇಮ್ ಜೊತೆಯೂ ಸಿನಿಮಾ ಮಾಡುತ್ತಿದೆ. ಈ ಬಗ್ಗೆ ಬಿಗ್ ಅಪ್ ಡೇಟ್ ನೀಡಿದ್ದು ಸಿನಿಮಾದ ಫಸ್ಟ್ ಲುಕ್ ಟೈಟಲ್ ಲಾಂಚ್ ಇದೇ ತಿಂಗಳು ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. ಜೂನ್ ನಿಂದ ಸಿನಿಮಾ ಶೂಟಿಂಗ್ ಪ್ರಾರಂಭವಾಗಲಿದೆಯಂತೆ.

Related Video