Asianet Suvarna News Asianet Suvarna News

ಮಂಡ್ಯದ ಮರಿ ಗೌಡನ ಮದುವೆಗೆ ಸ್ಯಾಂಡಲ್‌ವುಡ್‌ ರೆಡಿ,ಅಂಬಿ ಪುತ್ರನ ವಿವಾಹದ ಸಿದ್ಧತೆ ಹೇಗಿದೆ ಗೊತ್ತಾ.?

ಸ್ಯಾಂಡಲ್‌ವುಡ್‌ನಲ್ಲಿ ಈಗ ಮದುವೆ ಸಂಭ್ರಮ. ಸಕ್ಕರೆ ನಾಡಿನ ಅಕ್ಕರೆ ರೆಬೆಲ್ ಸ್ಟಾರ್ ಅಂಬರೀಶ್ ಸುಪುತ್ರ, ಮಂಡ್ಯದ ಮರಿ ಗೌಡ ಅಭಿಷೇಕ್ ಅಂಬರೀಶ್ ವಿವಾಹ ನಡೆಯುತ್ತಿದೆ. ಪ್ರೀತಿಸಿದ ಹುಡುಗಿ ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಕೈ ಹಿಡಿದು ಗೃಹಸ್ತಾಶ್ರಮಕ್ಕೆ ಕಾಲಿಡುತ್ತಿದ್ದಾರೆ ಅಭಿಷೇಕ್. 

ಸ್ಯಾಂಡಲ್‌ವುಡ್‌ನಲ್ಲಿ ಈಗ ಮದುವೆ ಸಂಭ್ರಮ. ಸಕ್ಕರೆ ನಾಡಿನ ಅಕ್ಕರೆ ರೆಬೆಲ್ ಸ್ಟಾರ್ ಅಂಬರೀಶ್ ಸುಪುತ್ರ, ಮಂಡ್ಯದ ಮರಿ ಗೌಡ ಅಭಿಷೇಕ್ ಅಂಬರೀಶ್ ವಿವಾಹ ನಡೆಯುತ್ತಿದೆ. ಪ್ರೀತಿಸಿದ ಹುಡುಗಿ ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಕೈ ಹಿಡಿದು ಗೃಹಸ್ತಾಶ್ರಮಕ್ಕೆ ಕಾಲಿಡುತ್ತಿದ್ದಾರೆ ಅಭಿಷೇಕ್. ಜೂನ್ 5ರಿಂದ ಈ ಜೋಡಿಯ ಮದುವೆ ಸಂಭ್ರಮ ಶುರುವಾಗ್ತಿದೆ. ಇದೀಗ ಅಭಿಷೇಕ್ ಅವಿವಾ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.  ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಸೂಪರ್ ಸ್ಟಾರ್ಗಳಾದ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ಗಣ್ಯರಿಗೆ ಇದೇ ವಿವಾಹ ಪತ್ರಿಕೆಯನ್ನ ಸುಮಲತಾ ಹಾಗೂ ಅಭಿಷೇಕ್ ತಲುಪಿಸಿದ್ದಾರೆ. ಅಭಿಷೇಕ್ ಹಾಗೂ ಅವಿವಾ ಮದುವೆ ಆಮಂತ್ರಣ ಪತ್ರಿಕೆ ಅದ್ಧೂರಿಯಾಗಿದ್ದು, ವಿಶೇಷವಾಗಿ ಸಿದ್ಧಪಡಿಸಲಾಗಿದೆ. ದ್ರಾಕ್ಷಿ, ಗೋಡಂಬಿ ಸೇರಿದಂತೆ ಡ್ರೈ ಫ್ರೂಟ್ಸ್ ನಿಂದ ಈ ಲಗ್ನಪತ್ರಿಕೆ ರೆಡಿ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಮದುವೆಗೆ ತಯಾರಿ ಹೇಗೆ ನಡೆಯುತ್ತಿದೆ? ಯಾವ್ಯಾವ ದಿನ ಯಾವ್ಯಾವ ಕಾರ್ಯಕ್ರಮ? ಮದುವೆ ಸಮಾರಂಭಕ್ಕೆ ಬರುವ ಅತಿಥಿಗಳು ಯಾರು ಗೊತ್ತಾ.? ಈ ವಿಡಿಯೋ ನೋಡಿ