ಒಂಟಿ ಎತ್ತಿಗೆ 8 ಲಕ್ಷ ರೂ ಕೊಟ್ಟು ಖರೀದಿಸಿದ ರೈತ

 
  • ಎತ್ತಿನಗಾಡಿ ಸ್ಪರ್ಧೆಯ ಎತ್ತು ಖರೀದಿ ಮಾಡಿರುವ ರೈತ 
  • 8 ಲಕ್ಷ ರೂ. ಕೊಟ್ಟು ಹಳ್ಳಿಕಾರ್ ತಳಿ ಖರೀದಿಸಿದ ರೈತ
  • ದುಡಿಯೋಕ್ ನಿಂತ್ರೆ ಆನೆ. ಓಡೋಕ್ ನಿಂತ್ರೆ ಕುದುರೆ!

Share this Video
  • FB
  • Linkdin
  • Whatsapp

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದ ರೈತರೊಬ್ಬರು 8 ಲಕ್ಷ ಕೊಟ್ಟು ಎತ್ತೊಂದನ್ನು ಖರೀದಿಸಿದ್ದು, ಇದೀಗ ಈ ಎತ್ತು ಎಲ್ಲರ ಗಮನ ಸೆಳೆಯುತ್ತಿದೆ. ಹಳ್ಳಿಕಾರ್‌ ತಳಿಯ ಎತ್ತು ಇದಾಗಿದ್ದು ಗಗನ್‌ ಎಂದು ಹೆಸರಿಡಲಾಗಿದೆ. ಈ ಎತ್ತು ದುಡಿಯಲು ನಿಂತರೆ ಆನೆಯಂತೆ ಶ್ರಮ ವಹಿಸುವುದು ಹಾಗೆಯೇ ಓಡಲು ನಿಂತರೆ ಕುದುರೆಯೇ ಸರಿ. ಇನ್ನು ಈ ಎತ್ತು ಖರೀದಿಸಿದ ಮಂಜುನಾಥ್‌ಗೆ ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸುವುದರಲ್ಲಿ ಭಾರಿ ಉತ್ಸಾಹವಿದೆ. ಹೀಗಾಗಿ ಹೊಲಗದ್ದೆಗಳಲ್ಲಿ ವರ್ಷಪೂರ್ತಿ ದುಡಿಯುವ ರಾಸುಗಳಿಗೆ ಮನುಷ್ಯರಿಗೂ ಮಾಡದ ಆರೈಕೆಯನ್ನು ಇವರು ಮಾಡುತ್ತಾರೆ. ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಖುಷಿ ಪಡ್ತಾರೆ. ಇವನನ್ನು ಕೂಡ ಸ್ಪರ್ಧೆಗಾಗಿಯೇ ಖರೀದಿಸಿ ತಂದಿದ್ದು, ಮನೆಯವರಿಗಿಂತಲೂ ಹೆಚ್ಚು ಪ್ರೀತಿಯಿಂದ ಸಲಹುತ್ತಿದ್ದಾರೆ. 

Related Video