ವಿಶ್ವ ಆರ್ಥಿಕತೆಯಲ್ಲಿ ಭಾರತ ಸೃಷ್ಟಿಸಿದೆ ಹೊಸ ಮೈಲಿಗಲ್ಲು, 4 ಟ್ರಿಲಿಯನ್ ಡಾಲರ್ ಆರ್ಥಿಕತೆ!
ಜಾಗತಿಕ ಆರ್ಥಿಕ ಕುಸಿತದ ನಡುವೆಯೂ ಭಾರತದ ಆರ್ಥಿಕ ಪ್ರಗತಿ ಸಾಧಿಸುತ್ತಿದೆ. 10 ವರ್ಷಗಳ ಹಿಂದೆ ಕನಸು ಕಾಣಲು ಸಾಧ್ಯವಿಲ್ಲದಿದ್ದನ್ನು ಭಾರತವು ನನಸಾಗಿಸುತ್ತಿದೆ.
ಬೆಂಗಳೂರು (ಮಾ.27): ಯಾವುದು ಭಾರತದಂಥಾ ದೇಶಕ್ಕೆ 10 ವರ್ಷಗಳ ಹಿಂದೆ, ಕನಸು ಕಾಣೊಕೂ ಸಾಧ್ಯ ಇರ್ಲಿಲ್ವೋ, ಅದನ್ನ ಈಗ ಭಾರತ ನಿಜವಾಗಿಸ್ತಾ ಇದೆ.
ಇಡೀ ಜಗತ್ತಿನ ಆರ್ಥಿಕತೆಯೇ ಕೋಲಾಹಲದಲ್ಲಿ ಮುಳುಗಿದ್ದರೆ, ಭಾರತ ಮಾತ್ರ, ಬಲಿಷ್ಠವಾಗಿ ಮುನ್ನುಗ್ಗುತ್ತಿದೆ. ಅಮೆರಿಕಾದಂಥ ಅಮೆರಿಕಾದಲ್ಲೇ ಆರ್ಥಿಕ ರಕ್ತಪಾತದ ಭೀತಿ ಕಾಡ್ತಾ ಇರುವಾಗ, ಭಾರತ ಮಾತ್ರ ಸಾಧನೆ ಮಾಡ್ತಲೇ ಇದ್ಯಲ್ಲಾ, ಅದರ ಗುಟ್ಟೇನು? ಭಾರತದ ಶಕ್ತಿ ಅಡಗಿರೋದೂ ಎಲ್ಲಿ?
ಅನಿಶ್ಚಿತತೆಗಳ ನಡುವೆಯೂ ಭಾರತದ ಆರ್ಥಿಕತೆ: ಬೆಳವಣಿಗೆ ಮತ್ತು ಸವಾಲುಗಳು
ಆರ್ಥಿಕತೆ ವಿಚಾರದಲ್ಲಿ ಭಾರತ ಭೀಮಬಲ ಹೊಂದಿದೆ.. ಘಟಾನುಘಟಿ ದೇಶಗಳು, 2020ರ ಕೊರೊನಾ ಆಘಾತದಿಂದ, ನಾಲ್ಕೈದು ವರ್ಷ ಕಳೆದ ಮೇಲೂ ಸುಧಾರಿಸಿಕೊಳ್ಳೋಕೆ ಸಾಧ್ಯವಾಗದೆ, ಹೆಣಗಾಡ್ತಾ ಇದಾವೆ.. ಅಮೆರಿಕಾದಂಥಾ ಅಮೆರಿಕಾನೇ ತಲೆ ಮೇಲೆ ಕೈ ಹೊತ್ತು ಕೂತಿದೆ.. ಜಪಾನ್ ಟೆನ್ಷನ್ ಒಂದು ಕ್ಷಣಕ್ಕೂ ಕಡಿಮೆಯಾಗ್ತಾ ಇಲ್ಲ.. ಯುರೋಪಿಯನ್ ರಾಷ್ಟ್ರಗಳಂತೂ, ತಮ್ಮ ಮನೆಯಂಗಳದಲ್ಲಿ ಬಂದು ನಿಂತಿರೋ ರಿಸೆಷನ್ ಭೂತಕ್ಕೆ ಹೆದರಿ ಕೂತಿವೆ.. ಹೀಗಿರುವಾಗ, ಭಾರತ ಮಾತ್ರ, 5 ಟ್ರಿಲಿಯನ್ ಡಾಲರ್ ಅನ್ನೋ ಅಗ್ನಿಶಿಖರವನ್ನ ಇಷ್ಟು ಸಲೀಸಾಗಿ ಏರೋಕೆ ಹೊರಟಿದೆ.