Invest Karnataka 2022: ಚಿಕ್ಕ ಬಜೆಟ್, ದೊಡ್ಡ ಆದಾಯ, 'ಕಾಂತಾರ' ಚಿತ್ರವೇ ಉದಾಹರಣೆ: ಪೀಯುಷ್ ಗೋಯೆಲ್
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕೇಂದ್ರ ಸಚಿವ ಪೀಯುಷ್ ಗೋಯಲ್ ಕನ್ನಡ ಚಿತ್ರ ಕಾಂತಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿಕ್ಕ ಬಜೆಟ್, ದೊಡ್ಡ ಆದಾಯಕ್ಕೆ ಈ ಚಿತ್ರವೇ ಉದಾಹರಣೆ ಎಂದು ಹೇಳಿದರು. ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಗರುಡಾ ಮಾಲ್‌ನಲ್ಲಿ ಈ ಚಿತ್ರವನ್ನು ವೀಕ್ಷಣೆ ಮಾಡಲಿದ್ದಾರೆ.
ಬೆಂಗಳೂರು (ನ.2): ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯುಷ್ ಗೋಯೆಲ್ ಕನ್ನಡದಲ್ಲಿಯೇ ನಮಸ್ಕಾರ ಹೇಳಿ ಭಾಷಣವನ್ನು ಆರಂಭ ಮಾಡಿದರು. ಕಾಂತಾರ ಚಿತ್ರದ ಬಗ್ಗೆ ಪೀಯುಷ್ ಗೋಯೆಲ್ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಹೂಡಿಕೆಯನ್ನ ಕಾಂತಾರ ಸಿನಿಮಾ ಗೆ ಹೋಲಿಕೆ ಮಾಡಿ ಪೀಯುಷ್ ಗೋಯೆಲ್ ಭಾಷಣ ಮಾಡಿದರು.
ನಾನು ಆ ಸಿನಿಮಾ ನೋಡಿದ್ದೇನೆ. ಬಹಳ ಚಿಕ್ಕ ಬಜೆಟ್ ಸಿನಿಮಾ ಇದು. ಇದರಲ್ಲಿ ಕರ್ನಾಟಕ ಸಂಸ್ಕೃತಿಯನ್ನ ಎಷ್ಟು ಚಂದವಾಗಿ ತೋರಿಸಿದ್ದಾರೆ. ನಾನು ಈ ಸಿನಿಮಾದ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿದೆ. ಎರಡಂಕಿ ಬಜೆಟ್ ಇಂದು 300 ಕೋಟಿಗೂ ಹೆಚ್ಚು ಅದಾಯ ಗಳಿಸಿದೆ. ಹೂಡಿಕೆ ಸಹ ಸಣ್ಣಾದಾಗಿ ಮಾಡಿದ್ದರೂ, ದೊಡ್ಡ ಮಟ್ಟದಲ್ಲಿ ಆದಾಯ ಪಡೆಯುವಲ್ಲಿ ಶ್ರಮ ಮಾಡಬಹುದು ಎಂದು ಹೂಡಿಕೆ ಸಮಾವೇಶದಲ್ಲಿ ಪೀಯುಷ್ ಗೋಯೆಲ್ ಮಾತನಾಡಿದ್ದಾರೆ.
ದೈವ ನರ್ತಕರ ಜತೆ 'ಕಾಂತಾರ' ವೀಕ್ಷಿಸಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ
ಇಂದು ನಿರ್ಮಲಾ ಸೀತಾರಾಮನ್ ವೀಕ್ಷಣೆ: ದೇಶದಲ್ಲಿಯೇ ಮೆಚ್ಚುಗೆ ಗಳಿಸಿದ ಕಾಂತಾರ ಚಿತ್ರವನ್ನು ಇಂದು ನಿರ್ಮಲಾ ಸೀತಾರಾಮನ್ ಎಂಜಿ ರಸ್ತೆಯ ಗರುಡಾ ಮಾಲ್‌ನಲ್ಲಿ ವೀಕ್ಷಣೆ ಮಾಡಲಿದ್ದಾರೆ. ಸಂಜೆ 4.15ಕ್ಕೆ ಅವರು ಚಿತ್ರವನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.