Union Budget 2023: ಕೇಂದ್ರ ಬಜೆಟ್‌ಗೆ ಕ್ಷಣಗಣನೆ: ಮಧ್ಯಮ ವರ್ಗದ ಭಾರ ಕಡಿಮೆ ಮಾಡ್ತಾರಾ ನಿರ್ಮಲಾ ಸೀತಾರಾಮನ್?
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನ್ನು ಮಂಡಿಸಲಿದ್ದು, ಬಜೆಟ್ ಭಾರೀ ನಿರೀಕ್ಷೆ ಮೂಡಿಸಿದೆ.
ಇಂದು ಕೇಂದ್ರ ಬಜೆಟ್ ಮಂಡಿಸಲಿದ್ದು, ಬೆಲೆ ಏರಿಕೆ ಜಮಾನದಲ್ಲಿ ಬೆಲೆ ಇಳಿಕೆಯಾಗುತ್ತಾ ಎಂಬ ಕುತೂಹಲ ಮೂಡಿದೆ. ಅದರಲ್ಲೂ ಪ್ರಮುಖವಾಗಿ ಅಡುಗೆ ಅನಿಲ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಬೆಲೆ ಏರಿಕೆಯಿಂದ ಮಧ್ಯಮ ವರ್ಗ ಕಂಗೆಟ್ಟಿದ್ದು, ಸಾವಿರ ಗಡಿದಾಡಿರುವ LPG ಸಿಲೆಂಡರ್‌ಗೆ ನೀಡುತ್ತಿರುವ ಸಬ್ಸಿಡಿ ಹೆಚ್ಚಳಕ್ಕೆ ಜನರ ಆಗ್ರಹವಿದೆ. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವೆ, ಮಧ್ಯಮ ವರ್ಗದ ಒತ್ತಡಗಳನ್ನು ಅರಿತುಕೊಳ್ಳಬಲ್ಲೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು, ಹಾಗಾಗಿ ಈ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ರಿಲೀಫ್ ಸಿಗುತ್ತಾ ಎಂಬ ಕುತೂಹಲ ಮೂಡಿದೆ. ಕೃಷಿ ರಾಸಾಯನಿಕಗಳ ಮೇಲಿನ ಆಮದು ಸುಂಕ ಕಡಿತ ಸಾಧ್ಯತೆ ಇದೆ. ಪ್ರಸ್ತುತ ರಾಸಾಯನಿಕಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ಇದ್ದು, ರಸಗೊಬ್ಬರ ರಾಸಾಯನಿಕಗಳಿಗೆ ಹೆಚ್ಚಿನ ಸಬ್ಸಿಡಿ ನಿರೀಕ್ಷೆ ಇದೆ. ಪಶು ಸಂಗೋಪನನಾ ವಲಯಕ್ಕೆ ಕಡಿಮೆ ಬಡ್ಡಿದರದ ಸಾಲ ಸಿಗುವ ಸಾಧ್ಯತೆ ಇದ್ದು, ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ.