Union Budget 2023: ದೇಶದ ಚಿತ್ತ ಕೇಂದ್ರ ಬಜೆಟ್‌ನತ್ತ: ಎಲೆಕ್ಷನ್ ರಾಜ್ಯಗಳಿಗೆ ಜಾಕ್ ಪಾಟ್?
2023-24 ಕೇಂದ್ರ ಸರ್ಕಾರ ಬಜೆಟ್ ಮಂಡನೆಗೆ ಸಿದ್ಧವಾಗಿದೆ. ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್ ಮೇಲೆ ಎಲ್ಲರಿಗೂ ಭಾರೀ ನಿರೀಕ್ಷೆ ಇದೆ.
ಕೇಂದ್ರ ಬಜೆಟ್ ಮೇಲೆ ಬೆಟ್ಟದಷ್ಟು ನೀರಿಕ್ಷೆಗಳಿದ್ದು, ಅವುಗಳನ್ನು ಮೋದಿ ಸರ್ಕಾರ ಸತ್ಯ ಮಾಡುತ್ತಾ ಎಂಬ ಕುತೂಹಲ ಎಲ್ಲರಿಗೂ ಇದೆ. ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿದ್ದು, ಕರ್ನಾಟಕ್ಕೆ ಏನು ಸಿಗುತ್ತೆ ಎಂಬ ಕುತೂಹಲ ಮೂಡಿದೆ. ಚುನಾವಣಾ ರಾಜ್ಯಗಳಿಗೆ ಎಲೆಕ್ಷನ್ ಪ್ಯಾಕೇಜ್ ಸಿಗುವ ಸಾಧ್ಯತೆ ಇದ್ದು, ಚುನಾವಣಾ ರಾಜ್ಯ ಕರ್ನಾಟಕದಲ್ಲೂ ಬಜೆಟ್ ಮೇಲೆ ನೀರಿಕ್ಷೆ ಇದೆ. ಕರ್ನಾಟಕ ಸೇರಿ ಎಲೆಕ್ಷನ್ ರಾಜ್ಯಗಳಿಗೆ ಜಾಕ್ ಪಾಟ್ ನಿರೀಕ್ಷೆ ಇದೆ. ಕರ್ನಾಟಕ ಪ್ರತಿನಿಧಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ತವರು ರಾಜ್ಯಕ್ಕೆ ತಮ್ಮ ಬಜೆಟ್'ನಲ್ಲಿ ಉಡುಗೊರೆ ನೀಡುವ ನಿರೀಕ್ಷೆ ಇದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ನೆರವಿನ ನೀರಿಕ್ಷೆಯಲ್ಲಿ ಜನರು ಇದ್ದಾರೆ.