
Price List: 100 ರ ಗಡಿ ದಾಟಿದ ಪೆಟ್ರೋಲ್, ಇಳಿಯದ ಚಿನ್ನ, ಗ್ರಾಹಕರ ಜೇಬು ಬಿಸಿ ಬಿಸಿ..!
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ ಏರಿಕೆ ಕಂಡು ಬರುತ್ತಿದೆ, ದೆಹಲಿ ಹಾಗೂ ಹಲವಾರು ರಾಜ್ಯಗಳ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 100ರ ಗಡಿಯನ್ನು ದಾಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 106.46 ರೂ, ಡೀಸೆಲ್ ಲೀಟರ್‌ಗೆ 90.49 ರೂ ಇದೆ.
ಬೆಂಗಳೂರು (ಮಾ. 30): ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ ಏರಿಕೆ ಕಂಡು ಬರುತ್ತಿದೆ, ದೆಹಲಿ ಹಾಗೂ ಹಲವಾರು ರಾಜ್ಯಗಳ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 100ರ ಗಡಿಯನ್ನು ದಾಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 106.46 ರೂ, ಡೀಸೆಲ್ ಲೀಟರ್‌ಗೆ 90.49 ರೂ ಇದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಲೀಟರ್‌ಗೆ 106.21 ರೂ ಇದ್ದರೆ, ಡೀಸೆಲ್ 90.28 ರೂ ಇದೆ. ಇನ್ನು ಚಿನ್ನದ ದರ ನೋಡುವುದಾದರೆ, ಬೆಂಗಳೂರಿನಲ್ಲಿ ಚಿನ್ನ 10 ಗ್ರಾಂಗೆ 47,650 ರೂ ಇದೆ. ಬೆಳ್ಳಿ ಕೆಜಿಗೆ 72,100 ರೂ ಇದೆ. ದೆಹಲಿ ಹಾಗೂ ಮುಂಬೈನಲ್ಲಿಯೂ ಚಿನ್ನ 47,650 ರೂ ಇದೆ. ಚೆನ್ನೈನಲ್ಲಿ 47,920 ರೂ ಇದೆ.