Price List: ಪೆಟ್ರೋಲ್, ಡಿಸೇಲ್ ದರ ಸತತ ಏರಿಕೆ, ಚಿನ್ನ, ಬೆಳ್ಳಿ ಬಲು ದುಬಾರಿ..!

ಉಕ್ರೇನ್‌-ರಷ್ಯಾ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದ್ದರೂ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳು ತೈಲ ಬೆಲೆ ಪರಿಷ್ಕರಣೆಯಾಗಿರಲಿಲ್ಲ. 

Share this Video
  • FB
  • Linkdin
  • Whatsapp

ಉಕ್ರೇನ್‌-ರಷ್ಯಾ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದ್ದರೂ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳು ತೈಲ ಬೆಲೆ ಪರಿಷ್ಕರಣೆಯಾಗಿರಲಿಲ್ಲ. ಆದರೆ ಚುನಾವಣೆ ಮುಗಿಯುತ್ತಿದ್ದಂತೆಯೇ ನಿತ್ಯ ತೈಲ ಬೆಲೆ ಪರಿಷ್ಕರಣೆಯಾಗುತ್ತಿದ್ದು ಕಳೆದ 16 ದಿನದಲ್ಲಿ ಶೇ.10.5ರಷ್ಟುಬೆಲೆ ಹೆಚ್ಚಳವಾಗಿದೆ. 

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 111.09 ರೂ ಇದ್ದರೆ, ಡೀಸೆಲ್ ಲೀಟರ್‌ಗೆ 94.79 ರೂ ಇದೆ. ಇನ್ನು ಚಿನ್ನ ಬೆಳ್ಳಿ ನೋಡುವುದಾದರೆ ಚಿನ್ನ 10 ಗ್ರಾಂಗೆ 48,000 ರೂ ಇದೆ. ದೆಹಲಿ ಹಾಗೂ ಮುಂಬೈನಲ್ಲೂ ಇದೇ ಬೆಲೆ ಇದೆ. ಚೆನ್ನೈನಲ್ಲಿ 48,590 ರೂ ಇದೆ. ಬೆಳ್ಳಿ ಕೆಜಿಗೆ 71 ಸಾವಿರಕ್ಕೇರಿದೆ. 

Related Video