Asianet Suvarna News Asianet Suvarna News

ಸಾಮಾನ್ಯ ಬಟ್ಟೆ ವ್ಯಾಪಾರಿ ಮಗ ಏಷ್ಯಾದ ನಂ. 2 ಕುಬೇರ: ಹೀಗೆ ಹೋದ್ರೆ ಅಂಬಾನಿಯೂ ಹಿಂದಕ್ಕೆ!

Oct 2, 2021, 6:59 PM IST

ಮುಂಬೈ(ಸೆ.02) ಅದಾನಿ ಕುಬೇರನ ಒಂದು ದಿನ ಸಂಪಾದನೆ 1,000 ಕೋಟಿ. ಒಂದು ಗಂಟೆಗೆ 42 ಕೋಟಿ. ಪ್ರತಿ ನಿಮಿಷಕ್ಕೆ ಅದಾನಿ ಆದಾಯ ಎಷ್ಟು ಗೊತ್ತಾ? ಇದೇ ವೇಗದಲ್ಲಿ ಹೋದ್ರೆ ಒಂದೇ ವರ್ಷದಲ್ಲಿ ನಂಬರ್ 1 ಕುಬೇರ ಅಂಬಾನಿಯನ್ನೇ ಮೀರಿಸಲಿದ್ದಾರೆ ಗೌತಮ್ ಅದಾನಿ. ಇದು ಸಾಮಾನ್ಯ ಬಟ್ಟೆ ವ್ಯಾಪಾರಿಯ ಮಗ ಏಷ್ಯಾದ ನಂಬರ್ 2 ಕುಬೇರನಾದ ರೋಚಕ ಕತೆ.

ಆಸೆಗೆ ತೆರಿಗೆ ಇಲ್ಲ, ಆಸೆಗೆ ದಂಡವಿಲ್ಲ. ಅಂದುಕೊಂಡದನ್ನು ಸಾಧಿಸಬೇಕೆಂದು ಹೊರಟವನಿಗೆ ಯಾವ ಭಯವೂ ಇಲ್ಲ. ಇದಕ್ಕೊಂದು ಉದಾಹರಣೆ ಅದಾನಿ ಗ್ರೂಪ್ ಆಫ್‌ ಕಂಪನಿ ಒಡೆಯ ಗೌತಮ್ ಅದಾನಿ. ಸಾಮಾನ್ಯ ಬಟ್ಟೆ ವ್ಯಾಪಾರಿ ಮಗ ಬಿ. ಕಾಂ ಪಾಸ್‌ ಮಾಡದೆ ಓಡಿ ಹೋಗಿದ್ದ ಯುವಕ ಇಂದು ಆಗರ್ಭ ಶ್ರೀಮಂತ