Siddaramaiah Budget: “ಆಗದು ಎಂದು ಕೈ ಕಟ್ಟಿ ಕುಳಿತರೆ..” ಸಿದ್ದು ಬಜೆಟ್‌ಗೆ ಅಣ್ಣಾವ್ರ ಹಾಡೇ ಸ್ಫೂರ್ತಿ..!

₹3.71 ಲಕ್ಷ ಕೋಟಿಯ ಬ್ಯಾಲೆನ್ಸ್ ಬಜೆಟ್ ಲೆಕ್ಕ.. ಗೆದ್ದರಾ ಸಿದ್ದು..?
ಲೆಕ್ಕರಾಮಯ್ಯನ ದಾಖಲೆಯ ಬ್ಯಾಲೆನ್ಸ್  ಬಜೆಟ್‌ನಲ್ಲಿ  ಏನೇನಿದೆ..?
ಬಜೆಟ್‌ನಲ್ಲಿ "ಬ್ಯಾಲೆನ್ಸ್ ಮಂತ್ರ" ಜಪಿಸಿದ ಸಿಎಂ ಸಿದ್ದರಾಮಯ್ಯ..!

First Published Feb 17, 2024, 6:26 PM IST | Last Updated Feb 17, 2024, 6:26 PM IST

ಇದು ಸಿದ್ದರಾಮಯ್ಯನವರ ಅರ್ಥಶಾಸ್ತ್ರ.. ಬಜೆಟ್'ರಾಮಯ್ಯನ ಅರ್ಥನೀತಿ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮಂಡಿಸಿರೋ ದಾಖಲೆಯ 15ನೇ ಬಜೆಟ್. ಸಿದ್ದರಾಮಯ್ಯನವರು ದಕ್ಷ ಆಡಳಿತಗಾರನಷ್ಟೇ ಅಲ್ಲ, ಒಳ್ಳೆ ಆರ್ಥಿಕ ತಜ್ಞನೂ ಹೌದು. ಲೆಕ್ಕ ಅಂದ್ರೆ ಲೆಕ್ಕ, ಸಿದ್ದರಾಮಯ್ಯನವರ ಲೆಕ್ಕ ಅನ್ನೋ ಮಾತೇ ಇದೆ. ಅಂಕಿ ಅಂಶಗಳನ್ನೆಲ್ಲಾ ಸಿದ್ದರಾಮಯ್ಯ ಅತ್ಯಂತ ಸಲೀಸಾಗಿ ಹೇಳ್ತಾರೆ. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಯ್ತು ಅಂತ ಸಿಡಿದೆದ್ದು ಶಾಸಕರ ದಂಡು ಕಟ್ಟಿ ದೆಹಲಿಗೆ (Delhi) ಹೋಗಿ ಪ್ರತಿಭಟನೆ ನಡೆಸಿದ್ದ ಸಿದ್ದರಾಮಯ್ಯನವರು, ಈಗ ತಮ್ಮ ಸರ್ಕಾರದ ಪೂರ್ಣಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಇಡೀ ಬಿಜೆಪಿ(BJP) ಪಕ್ಷ ಸಿದ್ದರಾಮಯ್ಯನವರು ಮಂಡಿಸಿದ ಬಜೆಟನ್ನು ಬೋಗಸ್ ಬಜೆಟ್, ಗೊತ್ತುಗುರಿಯಿಲ್ಲದ ಬಜೆಟ್ ಅಂತ ಟೀಕಿಸ್ತಾ ಇದ್ರೆ, ಇಲ್ಲೊಬ್ರು ಬಿಜೆಪಿ ಶಾಸಕರು ಸಿದ್ದು ಬಜೆಟ್'ಗೆ ಶಹಬ್ಬಾಸ್'ಗಿರಿ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ಮಂಡಿಸಿರೋ ಬಜೆಟನ್ನು ಬ್ಯಾಲೆನ್ಸ್ ಬಜೆಟ್(Budget) ಅಥವಾ ಸಮತೋಲಿನ ಬಜೆಟ್ ಅಂತ ಹೇಳಲಾಗ್ತಿದೆ. ಕಾರಣ, ಲೆಕ್ಕರಾಮಯ್ಯನ ಲೆಕ್ಕ. ಬಜೆಟ್'ನಲ್ಲಿ ಸಿದ್ದು ಎಲ್ಲಾ ಬಹುತೇಕ ಎಲ್ಲಾ ವಲಯಗಳನ್ನು ಟಚ್ ಮಾಡಿದ್ದಾರೆ. ಕೃಷಿಯಿಂದ ನೀರಾವರಿವರೆಗೆ, ಆರೋಗ್ಯದಿಂದ ಶಿಕ್ಷಣದವರೆಗೆ, ಗ್ರಾಮೀಣಾಭಿವೃದ್ಧಿಯಿಂದ ಕೈಗಾರಿಕೆಯವರೆಗೆ.. ಹೀಗೆ ಪ್ರಮುಖ ಇಲಾಖೆಗಳಿಗೆ ಅನುದಾನ ಕೊಡೋ ಮೂಲಕ ಸಿದ್ದು ಜಾಣತನ ಮೆರೆದಿದ್ದಾರೆ. 

ಇದನ್ನೂ ವೀಕ್ಷಿಸಿ:  ಈಗ ಕಣಿವೆ ರಾಜ್ಯದಲ್ಲೂ ಮೈತ್ರಿ ಬಿರುಕು..! I.N.D.I.A ಕ್ಕೆ ಫಾರೂಕ್ ವಿದಾಯ..!

Video Top Stories