ಕೊರೊನಾ ಟೈಮ್‌ನಲ್ಲಿ ಕೈಕೊಟ್ಟ ಚಿಕ್ಕ ಕಿರಾಣಿ ಅಂಗಡಿ: ಯ್ಯೂಟೂಬ್ ವಿಡಿಯೋ ನೋಡಿ ರೊಟ್ಟಿ ಮಷಿನ್ ಖರೀದಿ !

ಆ ಕುಟುಂಬ ಚಿಕ್ಕ ಕಿರಾಣಿ ಅಂಗಡಿ ಇಟ್ಟಿಕೊಂಡು ಜೀವನ ನಡೆಸಿದ್ರು. ಕೊರೊನಾ ಹೊಡೆತಕ್ಕೆ ಆ ಕಿರಾಣಿ ಅಂಗಡಿ ವ್ಯಾಪಾರಕ್ಕೆ ಭಾರೀ ಹೊಡೆತಬಿದಿತ್ತು. ಮುಂದೆ ಏನು ಎಂಬ ಚಿಂತೆಯಲ್ಲಿ ಇದ್ದ ಕುಟುಂಬಕ್ಕೆ ವರವಾಗಿ ಬಂದಿದೆ ರೊಟ್ಟಿ ಮಷಿನ್. 
 

First Published Aug 19, 2023, 2:33 PM IST | Last Updated Aug 19, 2023, 2:34 PM IST

ಕೊರೊನಾ ವೈರಸ್ ಇಡೀ ಮಾನವ ಕುಲಕ್ಕೆ ಕಂಟಕವಾಗಿ ಕಾಡಿತ್ತು. ಅದರಲ್ಲೂ ಚಿಕ್ಕ-ಪುಟ್ಟ ವ್ಯಾಪಾರ ನಂಬಿದ ಅಂಗಡಿಯವರ ಬದುಕು ಮೂರಾಬಟ್ಟೆ ಆಗಿತ್ತು. ಅದೇ ರೀತಿಯಾಗಿ ರಾಯಚೂರು(Raichur) ನಗರದ ಜ್ಯೋತಿ ಕಾಲೋನಿಯಲ್ಲಿ ಚಿಕ್ಕ ಕಿರಾಣಿ ಶಾಪ್ ಇಟ್ಟಿಕೊಂಡು ಜೀವನ ನಡೆಸಿದ್ದ ವಿಶ್ವನಾಥ ಮತ್ತು ರೂಪಾ ದಂಪತಿ ಬದುಕು ಕೂಡ ಮುಂದೆ ಏನು ಎಂಬುವಂತೆ ಆಗಿತ್ತು. ವಿಶ್ವನಾಥ ಮತ್ತು ರೂಪಾ ದಂಪತಿ ಮೂರು ಜನ ಹೆಣ್ಣು ಮಗಳು ಹಾಗೂ ವಯಸ್ಸಾದ ತಾಯಿ ಮನೆಯಲ್ಲಿ ಇದ್ದು, ಕುಟುಂಬ ನಿರ್ವಹಣೆ ಹೇಗೆ ಎಂಬ ಚಿಂತೆ ಆಗಿತ್ತು. ಮನೆಯಿಂದ ಹೊರಗಡೆ ಹೋಗಿದ್ರೆ ಲಾಕ್‌ಡೌನ್‌, ಚಿಕ್ಕ ಕಿರಾಣಿ ಅಂಗಡಿ ತೆಗೆದು ವ್ಯಾಪಾರ ಮಾಡದಂತೆ ನಿರ್ಬಂಧವಿತ್ತು. ಹೀಗಾಗಿ ದಿಕ್ಕೂ ಕಾಣದಂತೆ ಆಗಿದ್ದ ರೂಪಾ ದಂಪತಿಗೆ ವರವಾಗಿ ಬಂದಿದ್ದೇ ಆ ಒಂದು ಯ್ಯೂಟೂಬ್ ವಿಡಿಯೋ(YouTube video). ಮೊಬೈಲ್‌ನನಲ್ಲಿ ವಿಡಿಯೋ ನೋಡಿದ ರೂಪಾ ದಂಪತಿ ಸ್ನೇಹಿತರ ಜೊತೆಗೆ ಚರ್ಚೆ ಮಾಡಿ ರೊಟ್ಟಿ ಮಷಿನ್(roti machine) ಖರೀದಿ ಮಾಡಬೇಕೆಂದು ತೀರ್ಮಾನಿಸಿದ್ರು.

ಕಿರಾಣಿ ಅಂಗಡಿಯಲ್ಲಿ ಇದ್ದ ಹಣವನ್ನ ಕೂಡಿಸಿ 30 ಸಾವಿರಕ್ಕೆ ಚಿಕ್ಕ ರೊಟ್ಟಿ ಮಷಿನ್ ಸಹ ಖರೀದಿ ಮಾಡಿ ರೊಟ್ಟಿ ತಯಾರಿಕೆ ಶುರು ಮಾಡಿದ್ರು. ಮೊದಲ್ಲೇ ಕೊರೊನಾ ಸಮಯ ಆಗ ರೊಟ್ಟಿ ವ್ಯಾಪಾರ ಜೋರಾಗಿ ನಡೆಯಿತು. ದಿನೇ ದಿನೇ ರೂಪಾ ಅವರು ಮಾಡುವ ರೊಟ್ಟಿಗೆ ಬೇಡಿಕೆಯೂ ಹೆಚ್ಚಾಗುತ್ತಾ ಹೋಯ್ತು. ಹೀಗಾಗಿ ರೂಪಾ ದಂಪತಿ ಮತ್ತೆ ದೊಡ್ಡ ರೊಟ್ಟಿ ಮಷಿನ್ ಖರೀದಿಗೆ ಪ್ಲಾನ್ ಮಾಡಿದ್ರು. ಅದಕ್ಕಾಗಿ ಕೊರೊನಾ ಮುಂದಿದ ಬಳಿಕ ಹತ್ತಾರು ಸರ್ಕಾರಿ ಕಚೇರಿಗಳಿಗೆ ಅಲೆದು ಹೆಣ್ಣು ಮಕ್ಕಳಿಗಾಗಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಆ ಬಳಿಕ ಕೌಶಲ್ಯ ಅಭಿವೃದ್ಧಿ ಮತ್ತು ಸಿಡಾಕ್ ಸಂಸ್ಥೆಯಿಂದ 10 ದಿನಗಳ ಕಾಲ ತರಬೇತಿ ಪಡೆದು ಬ್ಯಾಂಕ್‌ನಿಂದ ಸಾಲ ಮಾಡಿ 3 ಲಕ್ಷ 8 ಸಾವಿರ ರೂ. ಖರ್ಚು ಮಾಡಿ ರೊಟ್ಟಿ ಮಷಿನ್ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಈಗ ಈ ದಂಪತಿ  ದಿನಕ್ಕೆ 800 ರಿಂದ 1000 ರೊಟ್ಟಿವರೆಗೆ ಮಾರಾಟ ಮಾಡುತ್ತಾ ಇದ್ದಾರೆ. ಆರಂಭದಲ್ಲಿ ಮಾರುಕಟ್ಟೆಯಲ್ಲಿ ಮಷಿನ್ ರೊಟ್ಟಿಗೆ ಬೇಡಿಕೆ ಇರಲಿಲ್ಲ. ಆದ್ರೆ ರೂಪಾ ಮತ್ತು ವಿಶ್ವನಾಥ ದಂಪತಿಗಳ ರುಚಿಕರ ರೊಟ್ಟಿಗೆ ಬಿಸಿಲುನಾಡಿನ ಜನರು ಫಿದಾ ಆಗಿದ್ದಾರೆ.

ಇದನ್ನೂ ವೀಕ್ಷಿಸಿ:  ಅಕೌಂಟ್‌ನಲ್ಲಿದ್ದ ಕೋಟಿ ಕೋಟಿ ಹಣ ಲೂಟಿ..! ನಿಮ್ಮ ದುಡ್ಡು ಖಾಲಿ ಮಾಡ್ತಾಳೆ ಸುಂದರಿ ಮ್ಯಾನೇಜರ್..!

Video Top Stories