ಮೋದಿ ಸರ್ಕಾರಕ್ಕೆ ಅಂಬಾನಿ ಅಪಸ್ವರ: ಈ ನಿರ್ಧಾರವಂತೆ ಘನಘೋರ!
ಪನ್ನ ಮುಕ್ತ & ತಪ್ತಿ ಕಂಪನಿ ಒಪ್ಪಂದಕ್ಕೆ ಸಂಬಂಧಿಸಿದಂತೆ 4.5 ಬಿಲಿಯನ್ ಡಾಲರ್ ಹಣ ಪಾವತಿಸುವಂತೆ ಭಾರತ ಸರ್ಕಾರದ ಒತ್ತಾಯವನ್ನು ರಿಲಯನ್ಸ್ ಇಂಡಸ್ಟ್ರೀಸ್ ಅವಸರದ ಕ್ರಮ ಎಂದು ಬಣ್ಣಿಸಿದೆ.
ಮುಂಬೈ(ಡಿ.24): ಪನ್ನ ಮುಕ್ತ & ತಪ್ತಿ ಕಂಪನಿ ಒಪ್ಪಂದಕ್ಕೆ ಸಂಬಂಧಿಸಿದಂತೆ 4.5 ಬಿಲಿಯನ್ ಡಾಲರ್ ಹಣ ಪಾವತಿಸುವಂತೆ ಭಾರತ ಸರ್ಕಾರದ ಒತ್ತಾಯವನ್ನು ರಿಲಯನ್ಸ್ ಇಂಡಸ್ಟ್ರೀಸ್ ಅವಸರದ ಕ್ರಮ ಎಂದು ಬಣ್ಣಿಸಿದೆ. ಶುಕ್ರವಾರದಂದು ದೆಹಲಿ ಹೈಕೋರ್ಟ್ ಶೆಲ್ ಇಂಡಿಯಾದ ಘಟಕವಾಗಿರುವ ವಿಭಾ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಬ್ರಿಟಿಷ್ ಗ್ಯಾಸ್ ಎಕ್ಸ್ ಪ್ಲೋರೇಷನ್ ಹಾಗೂ ಪ್ರೊಡಕ್ಷನ್ ಇಂಡಿಯಾ ಲಿಮಿಟೆಡ್ ಗೆ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸುವಂತೆ ಸೂಚಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಇತ್ತೀಚೆಗಷ್ಟೇ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ವ್ಯವಹಾರದ ತನ್ನ ಶೇ. 20ರಷ್ಟು ಪಾಲನ್ನು ಸೌದಿ ಆರಮ್ಕೋಗೆ ಮಾರಾಟ ಮಾಡುವುದಾಗಿ ಘೋಷಿಸಿತ್ತು.
PMT ಆಯ್ಲ್ ಹಾಗೂ ಗ್ಯಾಸ್ ಫೀಲ್ಡ್ ಸಂಬಂಧ ರಿಲಯನ್ಸ್ ಇಂಡಸ್ಟರೀಸ್ ಹಾಗೂ ಅವರ ಸಹವರ್ತಿಗಳ ನಡುವಿನ ಒಪ್ಪಂದ ಹಾಗೂ ಹಣದ ವಿಚಾರವಾಗಿ ಶುರುವಾದ ವಿವಾದವನ್ನು ಬಗೆಹರಿಸಲು, ಸರ್ಕಾರವು 2010ರಿಂದ ಪ್ರಯತ್ನಿಸುತ್ತಲೇ ಇದೆ. ರಿಲಯನ್ಸ್ ಇಂಡಸ್ಟ್ರೀಸ್ 4.5 ಬಿಲಿಯನ್ ಡಾಲರ್ ಬಡ್ಡಿ ಪಾವತಿಸಬೇಕು ಎಂಬುವುದು ಸರ್ಕಾರದ ವಾದವಾಗಿದೆ. ಸರ್ಕಾರದ ಅಫಿಡವಿಟ್‌ನಲ್ಲಿ ಹೇಳುವಂತೆ ರಿಲಯನ್ಸ್ 2.88 ಟ್ರಿಲಿಯನ್ ರೂಪಾಯಿ ಅಂದರೆ 5 40.5 ಬಿಲಿಯನ್ ಸಾಲ ಹೊಂದಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...