Asianet Suvarna News Asianet Suvarna News

ಮಂಗಳೂರು ಗಲಭೆಗೆ ಟ್ವಿಸ್ಟ್, ಅಮಿರ್ ಪುತ್ರಿ ಪೋಟೋಗೆ ಭರ್ಜರಿ ರೆಸ್ಪಾನ್ಸ್; ಡಿ.24ರ ಟಾಪ್ 10 ಸುದ್ದಿ!

ಕೇಂದ್ರದ ಪೌರತ್ವ ಕಾಯ್ದಿ ವಿರೋಧಿಸಿ ನಡೆದ ಪ್ರತಿಭಟನೆ ಮಂಗಳೂರಿನಲ್ಲಿ ಗೋಲಿಬಾರ್‌ನಲ್ಲಿ ಅಂತ್ಯವಾಗಿತ್ತು. ಪೊಲೀಸರ ನಡೆಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿತ್ತು. ಆದರೆ ಈ ಗಲಭೆ ಹಿಂದಿನ ಅಸಲಿ ಕಾರಣ ಬಹಿರಂಗವಾಗಿದೆ. ಗಲಭೆಕೋರರ ವಿಡಿಯೋ ಇದೀಗ ಪ್ರಕರಣಕ್ಕೆ ಹೊಸ ಟ್ವಿಸ್ಟ್. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಮೇಲೆರಿದ ರಾಕಿಂಗ್ ಸ್ಟಾರ್ ಯಶ್‌ಗೆ ಭಾರತದ ಇತರ ಚಿತ್ರರಂಗದ ಗಣ್ಯರು ಎದ್ದು ನಿಂತು ಗೌರವ ಸೂಚಿಸಿದ್ದಾರೆ. ಡಿಸೆಂಬರ್ 24ರ ಟಾಪ್ 10 ಸುದ್ದಿ ಇಲ್ಲಿವೆ.

Mangalore violence to Amir khan top 10 news of December 24
Author
Bengaluru, First Published Dec 24, 2019, 5:44 PM IST

ಮಂಗಳೂರು ಗಲಭೆ: ಪೊಲೀಸ್ರು ಆಸ್ಪತ್ರೆಗೆ ನುಗ್ಗಿದ ಹಿಂದಿನ ಅಸಲಿ ಕಾರಣ ಬಟಾಬಯಲು

Mangalore violence to Amir khan top 10 news of December 24

ಪೌರತ್ವ ತಿದ್ದುಪಡಿ ಕಾಯ್ದೆ ಹೆಸರಲ್ಲಿ ಮಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣ ಕ್ಷಣ-ಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅದರಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯ ಸಂದರ್ಭ ಪೊಲೀಸರು ಆಸ್ಪತ್ರೆಗೆ ಪ್ರವೇಶಿಸಿರುವ  ಬಗ್ಗೆ ಸಾಕಷ್ಟು ಪರ-ವಿರೋಧಕ್ಕೆ ಕಾರಣವಾಗಿದೆ.

ಗನ್ ಅಂಗಡಿ ಲೂಟಿಗೆ ಯತ್ನಿಸಿದ್ದ ದುಷ್ಕರ್ಮಿಗಳು! ಮಂಗಳೂರು ಕಾಪಾಡಿದ ಪೊಲೀಸರು

Mangalore violence to Amir khan top 10 news of December 24

ಮಂಗಳೂರು ಪ್ರತಿಭಟನೆಯಲ್ಲಿ ಮದ್ದು-ಗುಂಡುಗಳ ಅಂಗಡಿಯನ್ನು ಒಡೆಯಲು ದುಷ್ಕರ್ಮಿಗಳು ಪ್ರಯತ್ನ ಪಟ್ಟಿದ್ದರು.  40 ರೈಫಲ್  ಮತ್ತು 3 ಸಾವಿರ ಗುಂಡುಗಳು ಈ ಅಂಗಡಿಯ ಒಳಗೆ ಇದ್ದವು. ಕಟ್ಟಿಗೆಯ ಬಾಗಿಲನ್ನು ಒಡೆದರೂ ಒಳಗಡೆ ಇದ್ದ ಕಬ್ಬಿಣದ ಗೇಟ್ ಒಡೆಯಲು ಸಾಧ್ಯವಾಗಿಲ್ಲ. ಒಂದು ವೇಳೆ ಕಬ್ಬಿಣದ ಗೇಟ್ ಒಡೆದಿದ್ದರೆ ನಡೆಯುತ್ತಿದ್ದ ಅನಾಹುತ ಊಹಿಸಿಕೊಳ್ಳಲು ಅಸಾಧ್ಯ.

ಲಖನೌ ಗಲಭೆ ರೂವಾರಿ PFI ಮುಖಂಡ ಅರೆಸ್ಟ್

Mangalore violence to Amir khan top 10 news of December 24

ಲಖನೌ ಹಿಂಸಾಚಾರದ ಮಾಸ್ಟರ್‌ಮೈಂಡ್, ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರಾಜ್ಯಾಧ್ಯಕ್ಷ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

CAA ಪ್ರತಿಭಟನೆಯಲ್ಲಿ ಮಹಿಳೆ; ಫೇಸ್ಬುಕ್‌ನಲ್ಲಿ ಬಿಚ್ಚಿಟ್ಳು ಒಳಗಿನ ಘಟನೆ!

Mangalore violence to Amir khan top 10 news of December 24

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಮುಸ್ಲಿಮ್ ಸಂಘಟನೆಗಳು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು. ಬಹುತೇಕ ಪುರುಷರೇ ತುಂಬಿಕೊಂಡಿದ್ದ ಈ ಪ್ರತಿಭಟನೆಯಲ್ಲಿ, ಸಪೋರ್ಟ್ ಮಾಡಲು ಮುಸ್ಲಿಮೇತರ ಮಹಿಳೆಯೊಬ್ಬರು ಭಾಗವಹಿಸಿದ್ದರು. ಈ ಮಹಿಳೆ ಪ್ರತಿಭಟನೆ ಒಳಗಿನ ಘಟನೆ ಬಿಚ್ಚಿಟ್ಟಿದ್ದಾರೆ. 

ಮಂಗಳೂರು ಹಿಂಸಾಚಾರದ ಹಿಂದಿನ Exclusive ದೃಶ್ಯಾವಳಿಗಳು!

Mangalore violence to Amir khan top 10 news of December 24

ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ತೀವ್ರ ್ರತಿಭಟನೆ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರ ವೇಳೆ ಗೋಲಿಬಾರ್ ನಡೆದಿದ್ದು ಈ ವೇಳೆ ಇಬ್ಬರು ವ್ಯಕ್ತಿಗಳು ಮೃತರಾಗಿದ್ದರು. ಪೂರ್ವ ನಿಯೋಜಿತವಾಗಿ ಇಲ್ಲಿ ಹಿಂಸಾಚಾರ ನಡೆಸಲಾಗಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳು ಹೇಳುತ್ತಿವೆ.  ಸಿಸಿಟಿಯ ದೃಶ್ಯಾವಳಿಗಳು ಇಲ್ಲಿವೆ. 

ಮಂಗಳೂರು: ಗಲಭೆಗೂ ಮುನ್ನ SDPI ಮಖಂಡ ಹಾಕಿದ್ದ ಪ್ರಚೋದನಾತ್ಮಕ ಸಂದೇಶ ವೈರಲ್..!

Mangalore violence to Amir khan top 10 news of December 24

ದೇಶವನ್ನೇ ಬೆಚ್ಚಿಬೀಳಿಸಿದ ಮಂಗಳೂರು ಗಲಭೆಗೂ ಮುನ್ನ ಎಸ್‌ಡಿಪಿಐ ಸಂಘಟನೆಯ ಮುಖಂಡನೊಬ್ಬ ಹಾಕಿದ್ದ ಸಂದೇಶ ಸದ್ಯ ವೈರಲ್ ಆಗುತ್ತಿದೆ. ಪ್ರಚೋದನಾತ್ಮಕ ಸಂದೇಶ ಕಳುಹಿಸಿದ ಎಸ್‌ಡಿಪಿಐ ಮುಖಂಡನಿಗಾಗಿ ಮಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.

ದಶಕದ ಏಕದಿನ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಧೋನಿಗೆ ನಾಯಕ ಪಟ್ಟ !

Mangalore violence to Amir khan top 10 news of December 24

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಾರಣ ಡಿ.23ರಂದು ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟಿಸಲಾಗಿದ್ದು, ಇದರಲ್ಲೂ ಧೋನಿಗೆ ಸ್ಥಾನ ಸಿಕ್ಕಿಲ್ಲ. ಇದೀಗ ಧೋನಿ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತರರಾಗಿರುವ ಫ್ಯಾನ್ಸ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಿಹಿ ಸುದ್ದಿ ನೀಡಿದೆ 

ಪರಭಾಷೆ ಸ್ಟಾರ್‌ಗಳೇ ಎದ್ದು ನಿಂತ್ರು ನಮ್ ಯಶ್‌ ನೋಡಿ!

Mangalore violence to Amir khan top 10 news of December 24

 ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಬಿಗ್ ಸಕ್ಸಸ್ ನಂತರ ಅವರ ಸ್ಟಾರೇ ಬದಲಾಗಿ ಹೋಯ್ತು. ಬ್ಯಾಕ್ ಟು ಬ್ಯಾಕ್ ಅವಾರ್ಡ್‌ಗಳನ್ನು ತೆಗೆದುಕೊಳ್ಳುತ್ತಲೇ ಇದ್ದಾರೆ.  ಇತ್ತೀಚಿಗೆ ರಾಕಿಭಾಯ್ ಸೌತ್ ಸೆನ್ಸೇಷನ್ ಸ್ಟಾರ್ ಅವಾರ್ಡ್ ಸಿಕ್ಕಿದೆ.  ಕೆಜಿಎಫ್‌ ನಲ್ಲಿ ಯಶ್ ಅಭಿನಯ ಮೆಚ್ಚಿ ಅವರಿಗೆ ಪ್ರಶಸ್ತಿ ಕೊಟ್ಟಿದ್ದಾರೆ.  ಪ್ರಶಸ್ತಿ ಸ್ವೀಕರಿಸುವಾಗ ವೇದಿಕೆ ಮೇಲೆ ತಮಿಳು ಡೈಲಾಗ್ ಹೇಳಿ ಎಲ್ಲರನ್ನು ರಂಜಿಸಿದ್ರು. ಯಶ್‌ ಡೈಲಾಗ್‌ಗೆ ಅಲ್ಲಿದ್ದವರೆಲ್ರೂ ಫಿದಾ ಆಗಿದ್ದಾರೆ. ಜೊತೆಗೆ ಸಖತ್ ಸ್ಟೆಪ್‌ನ್ನೂ ಹಾಕಿದ್ದಾರೆ. 

ಅಮಿರ್ ಖಾನ್ ಪುತ್ರಿ ಇರಾ ಕಾಡಿನ ಮಧ್ಯೆ ಅರಬೆತ್ತಲಾಗಿ ಮಲಗಿದ್ಯಾಕೆ?

Mangalore violence to Amir khan top 10 news of December 24

ಅಮೀರ್‌ಖಾನ್‌ ಮೊದಲ ಪತ್ನಿ ಮಗಳು ಇರಾ ಖಾನ್‌ ಈಗೀಗ ತುಂಬಾನೆ ಸುದ್ದಿಯಲ್ಲಿರ್ತಾಳೆ. ಮೊದಲೆಲ್ಲ ತಾನಾಯ್ತು ತನ್ನ ನಾಟಕ ಆಯ್ತು ಅಂತ ಆರಾಮವಾಗಿದ್ದ ಹುಡುಗಿ ಈಗ ಮರ ಹತ್ತಿ ದಂಗು ಬಡಿಸಿದ್ದಾಳೆ.

ಮೋದಿ ಸರ್ಕಾರಕ್ಕೆ ಅಂಬಾನಿ ಅಪಸ್ವರ: ಈ ನಿರ್ಧಾರವಂತೆ ಘನಘೋರ!

Mangalore violence to Amir khan top 10 news of December 24

ಪನ್ನ ಮುಕ್ತ & ತಪ್ತಿ ಕಂಪನಿ ಒಪ್ಪಂದಕ್ಕೆ ಸಂಬಂಧಿಸಿದಂತೆ 4.5 ಬಿಲಿಯನ್ ಡಾಲರ್ ಹಣ ಪಾವತಿಸುವಂತೆ ಭಾರತ ಸರ್ಕಾರದ ಒತ್ತಾಯವನ್ನು ರಿಲಯನ್ಸ್ ಇಂಡಸ್ಟ್ರೀಸ್ ಅವಸರದ ಕ್ರಮ ಎಂದು ಬಣ್ಣಿಸಿದೆ.

ಡಿಸೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios