Asianet Suvarna News Asianet Suvarna News

News Hour: ಕನಸು ಕಾಣೋಕೆ ಮಿತಿ ಇರಬಾರದು ಎಂದು ತೋರಿಸಿಕೊಟ್ಟವರು ಟಾಟಾ!

ಉದ್ಯಮಿ ರತನ್ ಟಾಟಾ ಬಾರದ ಲೋಕಕ್ಕೆ ತೆರಳಿದ್ದಾರೆ. ದೇಶದ ಗೌರವಾನ್ವಿತ ಉದ್ಯಮಿ ಇನ್ನು ನೆನಪು ಮಾತ್ರ. ಗಣ್ಯಾತಿ ಗಣ್ಯರಿಂದ ಉದ್ಯಮ ದಿಗ್ಗಜನಿಗೆ ಇಡೀ ದೇಶ ಅಂತಿಮ ನಮನ ಸಲ್ಲಿಸಿದೆ.

First Published Oct 10, 2024, 11:08 PM IST | Last Updated Oct 10, 2024, 11:08 PM IST

ಬೆಂಗಳೂರು (ಅ.10): 1991ರಲ್ಲಿ 4 ಬಿಲಿಯನ್‌ ಡಾಲರ್‌ ಮೌಲ್ಯದ ಕಂಪನಿಯಾಗಿದ್ದ ಟಾಟಾ ಗ್ರೂಪ್‌, ಪ್ರಸ್ತುತ ಈ ಕಂಪನಿಯ ಮೌಲ್ಯ 400 ಬಿಲಿಯನ್‌ ಯುಎಸ್‌ ಡಾಲರ್‌. ಇಷ್ಟೆಲ್ಲಾ ಇದ್ದರೂ ರತನ್‌ ಟಾಟಾ ಅವರ ಹೆಸರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿಲ್ಲ. 34 ಲಕ್ಷ ಕೋಟಿ ಮೌಲ್ಯದ ಕಂಪನಿಯಲ್ಲಿ ರತನ್‌ ಟಾಟಾ ಅವರ ವೈಯಕ್ತಿಕ ಸಂಪತ್ತು ಇದ್ದಿದ್ದು ಮಾತ್ರ 3800 ಕೋಟಿ.

ಟಾಟಾ ಗ್ರೂಪ್‌ ಸಂಪಾದನೆ ಮಾಡಿವ ಸಂಪತ್ತಿನಲ್ಲಿ ಶೇ. 60ರಷ್ಟು ಸಮಾಜ ಸೇವೆಗಾಗಿ ಟ್ರಸ್ಟ್‌ಗೆ ಹೋಗಬೇಕು ಅನ್ನೋದು ರತನ್‌ ಟಾಟಾ ಅವರ ಮುತ್ತಜ್ಜ ಜೆಮ್‌ಶೇಟ್‌ಜೀ ಟಾಟಾ ಅವರ ಇಂಗಿತಿವಾಗಿತ್ತು. ಅದನ್ನೂ ಇಂದಿಗೂ ಟಾಟಾ ಗ್ರೂಪ್‌ ಪಾಲಿಸಿಕೊಂಡು ಬರುತ್ತಿದೆ.

Explainer: ಟಾಟಾ ಸನ್ಸ್‌-ಟಾಟಾ ಟ್ರಸ್ಟ್‌ ಏನಿದು ಟಾಟಾ ಸಮೂಹದ ಅಂತರಾಳ, ಅಗಲಿದ ದಿಗ್ಗಜನ ಸ್ಥಾನ ತುಂಬುವವರು ಯಾರು?

ಮೇಡ್‌ ಇನ್‌ ಇಂಡಿಯಾ ಕಾರ್‌ ಬೇಕು ಎಂದು ಕನಸು ಕಂಡಿದ್ದ ರತನ್‌ ಟಾಟಾ, 'ಟಾಟಾ ಇಂಡಿಕಾ' ಕಾರ್‌ಅನ್ನು ಅನಾವರಣ ಮಾಡಿದ್ದರು. 1998ರಲ್ಲಿ ಟಾಟಾ ಇಂಡಿಕಾ ಕಾರ್‌ಅನ್ನು ಲಾಂಚ್‌ ಮಾಡಿದಾಗ ನಷ್ಟವೇ ಹೆಚ್ಚಾಗಿತ್ತು. ಇಡೀ ಟಾಟಾ ಮೋಟಾರ್ಸ್‌ ಕಂಪನಿಯನ್ನೇ ಮಾರಾಟ ಮಾಡಬೇಕು ಎಂದುಕೊಂಡು ಅಮೆರಿಕಕ್ಕೆ ಹೋಗಿದ್ದ ರತನ್‌ ಟಾಟಾಗೆ ಅಲ್ಲಿ ಆಗಿದ್ದು ಅವಮಾನ. ಇದರ ಬೆನ್ನಲ್ಲಿಯೇ ಟಾಟಾ ಮೋಟಾರ್ಸ್‌ ಕಂಪನಿಯನ್ನು ದಿಟ್ಟವಾಗಿ ರತನ್‌ ಟಾಟಾ ನಿಲ್ಲಿಸಿ, ಲಾಭದಾಯಕ ಕಂಪನಿಯನ್ನಾಗಿ ಮಾಡಿದ್ದರು.