ಕುಸಿದ ಆರ್ಥಿಕತೆ ಮೇಲೆತ್ತಲು ಮೋದಿ ಮಾಸ್ಟರ್ ಪ್ಲಾನ್, ವರ್ಕೌಟ್ ಆದ್ರೆ ಭಾರತ ನಂಬರ್ 1..!
ಕೊರೊನಾ ಸಂಕಷ್ಟದಿಂದ ದೇಶದ ಆರ್ಥಿಕತೆ ಕುಸಿದು ಹೋಗಿದೆ. ಆರ್ಥಿಕ ಚಟುವಟಿಕೆಗಳು ಸಹ ಮಂದಗತಿಯಲ್ಲಿ ಸಾಗುತ್ತಿದೆ. ಎಲ್ಲಾ ಕಡೆಯೂ ಬ್ಯುಸಿನೆಸ್ ಇಲ್ಲ, ಬ್ಯುಸಿನೆಸ್ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಜನಸಾಮಾನ್ಯರ ಬಳಿಯೂ ಹಣದ ಚಲಾವಣೆ ಆಗುತ್ತಿಲ್ಲ. ಕಳೆದ 6 ತಿಂಗಳಲ್ಲಿ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ನೆಲಕಚ್ಚಿದೆ.
ಬೆಂಗಳೂರು (ಸೆ. 08): ಕೊರೊನಾ ಸಂಕಷ್ಟದಿಂದ ದೇಶದ ಆರ್ಥಿಕತೆ ಕುಸಿದು ಹೋಗಿದೆ. ಆರ್ಥಿಕ ಚಟುವಟಿಕೆಗಳು ಸಹ ಮಂದಗತಿಯಲ್ಲಿ ಸಾಗುತ್ತಿದೆ. ಎಲ್ಲಾ ಕಡೆಯೂ ಬ್ಯುಸಿನೆಸ್ ಇಲ್ಲ, ಬ್ಯುಸಿನೆಸ್ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಜನಸಾಮಾನ್ಯರ ಬಳಿಯೂ ಹಣದ ಚಲಾವಣೆ ಆಗುತ್ತಿಲ್ಲ. ಕಳೆದ 6 ತಿಂಗಳಲ್ಲಿ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ನೆಲಕಚ್ಚಿದೆ. ಲಾಕ್‌ಡೌನ್‌ನಿಂದಾದ ನಷ್ಟವನ್ನು ತುಂಬಿಕೊಳ್ಳಲು ಸರ್ಕಾರಕ್ಕೂ, ಜನಸಾಮಾನ್ಯರಿಗೂ ಬಹಳ ಸಮಯ ಬೇಕಾಗುತ್ತದೆ.
ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐನಿಂದ 30000 ನೌಕರರಿಗೆ ವಿಆರ್‌ಎಸ್?
ಈಗ ನಿಧಾನಕ್ಕೆ ಜನಜೀವನ ಮರಳುತ್ತಿದೆ. ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರವೂ ಪ್ರಯತ್ನಪಡುತ್ತಿದೆ. ಮೊದಲ ತ್ರೈ ಮಾಸಿಕ ಅವಧಿಯಲ್ಲಿ ಜಿಡಿಪಿಯಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಅತೀ ಹೆಚ್ಚು ಹಿನ್ನಡೆ ಸಾಧಿಸಿದೆ ಭಾರತ. ಹಾಗಾದರೆ ಆರ್ಥಿಕತೆಯನ್ನು, ಜಿಡಿಪಿಯನ್ನು ಮೇಲೆತ್ತಲು ಪ್ರಧಾನಿ ಮೋದಿ ಮುಂದಿನ ದಾರಿಗಳೇನು? ಏನೇನು ಮಾಡುತ್ತಾರೆ? ಇಲ್ಲಿದೆ ದತ್ತಾಂಶಗಳು..!