Oil Import From Russia: ಭಾರತಕ್ಕೆ ತೈಲ ರಫ್ತು ಮಾಡೋದ್ರಲ್ಲಿ ರಷ್ಯಾನೇ ನಂ.1!

ಸೌದಿ ಅರೇಬಿಯಾನೂ ಇಲ್ಲ, ಇರಾಕ್‌ ಕೂಡ ಇಲ್ಲ. ಭಾರತಕ್ಕೆ ತೈಲ ರಫ್ತು ಮಾಡುವ ದೇಶದಲ್ಲಿ ನಂ.1 ಸ್ಥಾನದಲ್ಲಿರೋದು ರಷ್ಯಾ. ಅದರೊಂದಿಗೆ ಭಾರತ ಹಾಗೂ ರಷ್ಯಾ ನಡುವಿನ ಸಂಬಂಧ ಕೂಡ ಇನ್ನಷ್ಟು ಗಟ್ಟಿಯಾಗಿದೆ. ಇಂಥದ್ದೊಂದು ಬೆಸ್ಟ್‌ ಡೀಲ್‌ ಕುದುರಿಸಿದ್ದು ಎಸ್‌.ಜೈಶಂಕರ್‌.
 

First Published Nov 4, 2022, 4:48 PM IST | Last Updated Nov 4, 2022, 4:49 PM IST

ನವದೆಹಲಿ (ನ. 4): ಭಾರತಕ್ಕೆ ತೈಲ ರಫ್ತು ಮಾಡೋದ್ರಲ್ಲಿ ಸೌದಿಯನ್ನು ಹಿಂದಿಕ್ಕಿತು ರಷ್ಯಾ. ಭಾರತದಿಂದ ತೈಲ ತರಿಸಿಕೊಳ್ಳಲೇಬಾರದು ಅಂತ ಧಮ್ಕಿ ಹಾಕಿದ್ದ ಯುರೋಪ್, ಚೀನಾನೇ ರಷ್ಯಾ ಗಿರಾಕಿಗಳಾಗಿದಾರೆ. ಆದರೆ, ಅವರು ಭಾರತದ ವಿರುದ್ಧ ಮಾತಾಡಿದ್ದೇಕೆ..? ಈಗೇನಂತಾರೆ..? ಪಾಶ್ಚಾತ್ಯ ದೇಶಗಳ ನಿಗೂಢ ರಣವ್ಯೂಹಾನಾ ಭಾರತ ಬೇಧಿಸಿದ್ದು ಹೇಗೆ?

ರಷ್ಯಾ ಮತ್ತು ಭಾರತದ ನಡುವೆ ನಡೀತಿರೋ ವ್ಯಾಪಾರ ವ್ಯವಹಾರಗಳು, ಹಣಕಾಸಿನ ಕೊಡುಕೊಳುವಿಕೆ ಅಲ್ಲ.. ಅದನ್ನೂ ಮೀರಿದ ಮಹತ್ವ ಈ ವ್ಯವಹಾರಕ್ಕಿದೆ. ಭಾರತ ರಷ್ಯಾ ಜೊತೆಗಿನ ತನ್ನ ಸಂಬಂಧನಾ ಈಗ ಪವರ್ ಫ್ಯಾಕ್ಟರ್ ಮೂಲಕ ಹೆಚ್ಚಿಸಿಕೊಳ್ತಾ ಇದೆ.. ಇದರಿಂದ ದೇಶಕ್ಕೆ ಹೇಗೋ ಲಾಭವಾಗುತ್ತೆ.. ಅದೇ ಲಾಭ ನಮಗೂ ಆಗುತ್ತೆ.

Fuel Price: ಶೀಘ್ರದಲ್ಲೇ 2 ರೂ. ಇಳಿಕೆಯಾಗಲಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ..!

ಒಂದ್ ಕಡೆ ತನ್ನನ್ನ ತಾನು ದೊಡ್ಡಣ್ಣ ಅಂತ ಕರ್ಕೊಳೋ ಅಮೆರಿಕಾ, ಇನ್ನೊಂದ್ ಕಡೆ ವೇಗವಾಗಿ  ಬೆಳಿತಿದೀವಿ ಅಂತ ಹೇಳ್ಕೊಳ್ತಿರೋ ಯುರೋಪಿಯನ್ ರಾಷ್ಟ್ರಗಳು, ಇವರ ಕಿರಿಕಿರಿಗೆ, ಭಾರತ ಹೇಗೆ ಉತ್ತರ ನೀಡಿದ್ದೇ ಮಹಾ ಸಾಧನೆ ಎಂದರೂ ತಪ್ಪಲ್ಲ.
 

Video Top Stories