Asianet Suvarna News Asianet Suvarna News

Fuel Price: ಶೀಘ್ರದಲ್ಲೇ 2 ರೂ. ಇಳಿಕೆಯಾಗಲಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ..!

ಕಚ್ಚಾತೈಲ ಬೆಲೆ ಸುಮಾರು 95 ಡಾಲರ್‌ಗೆ ಇಳಿಕೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲ ಸೋಮವಾರ ಬ್ಯಾರಲ್‌ಗೆ 95 ಡಾಲರ್‌ಗೆ ಬಿಕರಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂಧನ ದರವನ್ನು ಕಡಿಮೆ ಮಾಡಲಾಗಿದೆ. ರಷ್ಯಾ ಉಕ್ರೇನ್‌ ಯುದ್ಧದ ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 139 ಡಾಲರ್‌ಗೆ ಏರಿಕೆಯಾಗಿತ್ತು. ಒಟ್ಟಾರೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ 2 ರು.ವರೆಗೆ ಇಳಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. 

petrol and diesel prices likely to be cut by rs 2 per litre 40 paise reduced today ash
Author
First Published Nov 1, 2022, 7:33 AM IST

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ (Crude Oil Price) ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಪೆಟ್ರೋಲ್‌ (Petrol) ಮತ್ತು ಡೀಸೆಲ್‌ (Diesel) ಬೆಲೆಯನ್ನು 40 ಪೈಸೆ ಕಡಿಮೆ ಮಾಡಲಾಗುತ್ತದೆ ಎಂದು ವರದಿಯಾಗಿತ್ತು. ಆದರೆ, ಇಮದು ಬೆಲೆ ಇಳಿಕೆಯಾಗಿಲ್ಲ. ಅಂತರಾಷ್ಟ್ರೀಯ (Global) ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಮತ್ತು ಸ್ವಲ್ಪ ಸಮಯದವರೆಗೆ ಸ್ಥಿರವಾಗಿರುವ ಕಾರಣ ಬೆಲೆಯಲ್ಲಿ ಇಳಿಕೆ ನಿರೀಕ್ಷಿಸಲಾಗಿತ್ತು. ಕಚ್ಚಾತೈಲ ಬೆಲೆ ಸುಮಾರು 95 ಡಾಲರ್‌ಗೆ ಇಳಿಕೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲ ಸೋಮವಾರ ಬ್ಯಾರಲ್‌ಗೆ 95 ಡಾಲರ್‌ಗೆ ಬಿಕರಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂಧನ ದರವನ್ನು ಕಡಿಮೆ ಮಾಡಲಾಗುತ್ತದೆ ಎಮದು ಹೇಳಲಾಗಿದೆ.

ರಷ್ಯಾ ಉಕ್ರೇನ್‌ ಯುದ್ಧದ (Russia - Ukraine War) ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 139 ಡಾಲರ್‌ಗೆ ಏರಿಕೆಯಾಗಿತ್ತು. ಒಟ್ಟಾರೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ 2 ರೂ. ವರೆಗೆ ಇಳಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಏಪ್ರಿಲ್‌ 7ರಂದು ಮೊದಲ ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಲಾಗಿತ್ತು.

ಸಾಮಾನ್ಯ ಜನರಿಗೆ ಪರಿಹಾರ ನೀಡುವ ಉದ್ದೇಶದಿಂದ, ಭಾರತದಾದ್ಯಂತ ಇಂಧನ ಬೆಲೆಗಳು (Fuel Price) ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಬ್ಬದ ಋತುವಿನಿಂದಾಗಿ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುವ ಹಿನ್ನೆಲೆಯಲ್ಲಿ ಅಕ್ಟೋಬರ್ ಮೊದಲಾರ್ಧದಲ್ಲಿ ಭಾರತದ ಇಂಧನ ಮಾರಾಟ ಹೆಚ್ಚಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಅಕ್ಟೋಬರ್ 2022 ರ ಮೊದಲಾರ್ಧದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ವರ್ಷದಿಂದ ವರ್ಷಕ್ಕೆ (YoY) ಶೇಕಡಾ 22-26 ರಷ್ಟು ಜಿಗಿದಿದೆ ಮತ್ತು ತಿಂಗಳಿನಿಂದ ತಿಂಗಳಿಗೆ ಏರುತ್ತಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಅಕ್ಟೋಬರ್ 1 ರಿಂದ 15, 2022 ರ ಅವಧಿಯಲ್ಲಿ ಪೆಟ್ರೋಲ್ ಮಾರಾಟವು ಶೇಕಡಾ 22.7 ರಿಂದ 1.28 ಮಿಲಿಯನ್ ಟನ್‌ಗಳಿಗೆ ಏರಿದೆ. 2021 ರಲ್ಲಿ 1.05 ಮಿಲಿಯನ್ ಟನ್ ಬಳಕೆಗೆ ಹೋಲಿಸಿದರೆ ಈ ಏರಿಕೆಯಾಗಿದೆ. ಇಂಧನ ಮಾರಾಟವು ಅಕ್ಟೋಬರ್ 2020ರ ಮೊದಲಾರ್ಧಕ್ಕಿಂತ ಶೇಕಡಾ 31ರಷ್ಟು ಹೆಚ್ಚಾಗಿದೆ ಮತ್ತು ಸಾಂಕ್ರಾಮಿಕ ಪೂರ್ವ ಅಕ್ಟೋಬರ್ 1 ರಿಂದ 15, 2019 ಕ್ಕಿಂತ ಶೇಕಡಾ 33.4 ಹೆಚ್ಚಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಮಾರಾಟದ ಜೊತೆಗೆ, ಬೇಡಿಕೆಯು ಸೆಪ್ಟೆಂಬರ್ 2022 ರ ಮೊದಲಾರ್ಧಕ್ಕಿಂತ ಶೇಕಡಾ 1.3 ಹೆಚ್ಚಾಗಿದೆ.
ವರದಿಯ ಪ್ರಕಾರ, ಮುಂದಿನ ಐದು ದಿನಗಳವರೆಗೆ ತೈಲ ಬೆಲೆಯಲ್ಲಿ ಪ್ರತಿದಿನ 40 ಪೈಸೆ ಇಳಿಕೆಯಾಗುವ ಸಾಧ್ಯತೆಯಿದೆ. ಆ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಒಟ್ಟು 2 ರೂಪಾಯಿ ಇಳಿಕೆಯಾಗಲಿದೆ.

ಈ ಮಧ್ಯೆ, ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್‌ನಂತಹ ಒಎಂಸಿಗಳು ಮಂಗಳವಾರದಿಂದ 5 ದಿನಗಳ ಕಾಲ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. 

Follow Us:
Download App:
  • android
  • ios