Koppal: ಕಚ್ಚಾ ಕೂದಲು ರಫ್ತು ನಿಷೇಧ: ಕೇಂದ್ರದ ನಿರ್ಧಾರಕ್ಕೆ ಉದ್ಯಮಿಗಳು ಖುಷ್
* ಕೂದಲು ಸಂಸ್ಕರಿಸಿ ವಿಗ್ ತಯಾರಿಸಿ ಮಾರಾಟ ಮಾಡುವ ಉದ್ಯಮ
* ಭಾರತದಿಂದ ಕೂದಲು ಆಮದು ಮಾಡಿ ಕಳ್ಳಾಟವಾಡುತ್ತಿದ್ದ ಚೀನಾ
* ನಿರಂತರ ಹೋರಾಟ ನಡೆಸುತ್ತಾ ಬಂದಿದ್ದ ಕೂದಲು ಉದ್ಯಮಿಗಳು
ಕೊಪ್ಪಳ(ಫೆ.02): ಕೇಂದ್ರ ಸರಕಾರ ಕಚ್ಚಾ ಕೂದಲನ್ನು ರಫ್ತು ಮಾಡುವುದುಕ್ಕೆ ನಿಷೇಧ ಹೇರಿದೆ. ಇದರಿಂದಾಗಿ ಭಾರತದ ಕೂದಲು ಉದ್ಯಮಕ್ಕೆ ಅನುಕೂಲವಾಗಲಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಸಿಗಲಿದೆ. ಕೊಪ್ಪಳ ಜಿಲ್ಲೆಯ ಭಾಗ್ಯನಗರ ಸೇರಿ ದೇಶದ ಪಶ್ಚಿಮ ಬಂಗಾಲ, ಆಂಧ್ರ, ಹರಿಯಾಣದಿಂದ ಕೂದಲ ಸಂಸ್ಕರಿಸಿ ರಫ್ತು ಮಾಡಲಾಗುತ್ತಿದೆ. ವಾರ್ಷಿಕವಾಗಿ ಸುಮಾರು 5-6 ಸಾವಿರ ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿತ್ತು. ಆದರೆ ಇಷ್ಟು ದಿನಗಳ ಕಾಲ ಇವರ ವ್ಯವಹಾರಕ್ಕೆ ತೊಂದರೆ ಆಗುತ್ತಿತ್ತು. ಆದರೆ ಸರಕಾರದ ಹೊಸ ನಿಯಮದಿಂದಾಗಿ ಕೂದಲು ಉದ್ಯಮ ಚೇತರಿಕೆಯತ್ತ ಸಾಗುವುದರಲ್ಲಿ ಸಂದೇಹವಿಲ್ಲ.
ಇನ್ನು ಮಾನವ ತಲೆಯಿಂದ ತ್ಯಾಜ್ಯವಾಗಿ ಬರುವ ಕೂದಲನ್ನು ಸಂಸ್ಕರಿಸಿ ವಿಗ್ ತಯಾರಿಸಿ ಅವುಗಳನ್ನು ಮಾರಾಟ ಮಾಡುವ ಬೃಹತ್ ಉದ್ಯಮ ದೇಶದಲ್ಲಿ ಇತ್ತು. ಇದರಲ್ಲಿ ಕಳೆದ ಹತ್ತು ವರ್ಷಗಳಿಂದ ಚೀನಾ ದೇಶವು ಪಕ್ಕದ ಬರ್ಮಾ ದೇಶದಲ್ಲಿ ಕೂದಲ ಸಂಸ್ಕರಿಸುವ ಘಟಕಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಲ್ಲಿ ಉದ್ಯಮ ಬೆಳೆಸಲು ಪ್ರೋತ್ಸಾಹ ನೀಡಲಾಗಿತ್ತು. ಈ ಸಂದರ್ಭದಲ್ಲಿ ಕಚ್ಚಾ ಕೂದಲನ್ನು ಭಾರತದಿಂದ ರಫ್ತು ಮಾಡಿಸಿಕೊಳ್ಳುತ್ತಿತ್ತು. ಆದರೆ ಇಲ್ಲಿ ಚೀನಾ ಹಾಗು ಬರ್ಮಾ ದೇಶಗಳು ಕಳ್ಳಾಟ ನಡೆಸುತ್ತಿದ್ದವು. ವಾಸ್ತವ ದರಕ್ಕಿಂತ ಅತ್ಯಂತ ಕಡಿಮೆ ದರಕ್ಕೆ ಕೂದಲನ್ನು ಖರೀದಿಸುವುದಾಗಿ ಲೆಕ್ಕ ತೋರಿಸುತ್ತಿದ್ದರು. ಅಲ್ಲದೆ ಅಕ್ರಮವಾಗಿ ಕಚ್ಷಾ ಕೂದಲನ್ನು ಸಹ ರಫ್ತು ಮಾಡಲಾಗುತ್ತಿತ್ತು.
Karnataka Congress Politics: ಸಿದ್ದರಾಮಯ್ಯ ಆಪ್ತ ಆಶೋಕ ಪಟ್ಟಣ್‌ಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್!
ಈ ಬಗ್ಗೆ ಕಳೆದ ದಶಕದಿಂದ ಕೂದಲು ಉದ್ಯಮಿಗಳು ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಇದೀಗ ಕಚ್ಚಾ ಕೂದಲು ರಫ್ತು ನಿಷೇಧ ಮಾಡಿರುವುದರಿಂದ ಇನ್ನು ಮುಂದೆ ಕಚ್ಚಾ ಕೂದಲನ್ನು ರಫ್ತು ಮಾಡಲು ಅವಕಾಶ ಇಲ್ಲ. ಹೀಗಾಗಿ ಸಹಜವಾಗಿಯೇ ಕೇಂದ್ರ ಸಕರಾರದ ಈ ನಿರ್ಧಾರದಿಂದ ಕೂದಲು ಉದ್ಯಮಿಗಳು ಸಖತ್ ಖುಷಿಯಾಗಿದ್ದಾರೆ.