ಜಗಮಲ್ಲ ಜುಂಜನ್ವಾಲಾ: ಅಸಾಮಾನ್ಯ ವ್ಯಕ್ತಿತ್ವದ ರಾಕೇಶ್ ಜೀವನಗಾಥೆ

ಮುಂಬೈ ಷೇರು ಮಾರುಕಟ್ಟೆಯ ಉದ್ಯಮಿ ನಿನ್ನೆ ನಿಧನರಾದ ರಾಕೇಶ್ ಜುಂಜುನ್‌ವಾಲಾ ಅವರ ವ್ಯಕ್ತಿತ್ವ ಹಾಗೂ ಜೀವನಗಾಥೆ ಇಲ್ಲಿದೆ. 

First Published Aug 15, 2022, 3:25 PM IST | Last Updated Aug 15, 2022, 3:25 PM IST

ನಿನ್ನೆ ಆಗಸ್ಟ್ 14 ಭಾರತದ ಷೇರು ಮಾರುಕಟ್ಟೆಗೆ ಕರಾಳ ದಿನವಾಗಿತ್ತು. ಇದಕ್ಕೆ ಕಾರಣವಾಗಿದ್ದು, ಕಿಂಗ್ ಅಫ್ ದಲ್ಲಾಲ್ ಸ್ಟ್ರೀಟ್, ಮುಂಬೈ ಷೇರು ಮಾರುಕಟ್ಟೆಯ ಸುಲ್ತಾನ್‌, ಬಿಗ್‌ ಬುಲ್ ಎಂದೆಲ್ಲಾ ಖ್ಯಾತಿಗಳಿಸಿದ್ದ ಷೇರು ಮಾರುಕಟ್ಟೆಯ ಉದ್ಯಮಿ ರಾಕೇಶ್‌ ಜುಂಜನ್‌ವಾಲಾ ಅವರು ಹಠಾತ್ ಆಗಿ ನಿಧನರಾಗಿದ್ದು, ಹಲವು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಜುಂಜನ್‌ವಾಲಾ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಿದ್ದರಾದರೂ 62ನೇ ವರ್ಷಕ್ಕೆಲ್ಲಾ ಇಹಲೋಕ ತ್ಯಜಿಸಿದ್ದಾರೆ. ಆದರೆ ಷೇರು ಮಾರುಕಟ್ಟೆ ಮತ್ತು ಅವರ ಬದುಕು ಬಹಳ ವರ್ಣ ರಂಜಿತವಾದುದು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಕೇವಲ 5 ಸಾವಿರ ರೂಪಾಯಿಯನ್ನು ಇರಿಸಿಕೊಂಡು ಭಾರತದ ಷೇರು ಮಾರುಕಟ್ಟೆಯನ್ನು ಆಳಿದ ಅವರ ಬದುಕಿನ ಸಾಹಸಗಾಥೆಯ ಸಂಪೂರ್ಣ ಡಿಟೇಲ್‌ ಈ  ವಿಡಿಯೋದಲ್ಲಿದೆ ವೀಕ್ಷಿಸಿ.