ಲಾಕ್‌ಡೌನ್ ಮಧ್ಯೆ ಗಗನಕ್ಕೇರಿದ ತೈಲ ಬೆಲೆ: ಶತಕದತ್ತ ಪೆಟ್ರೋಲ್, ಡೀಸೆಲ್ ದರ!
ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಶತಕದತ್ತ ಪ್ರಯಾಣ ಬೆಳೆಸಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೈಲ ಬೆಲೆ ನೂರು ರೂಪಾಯಿಯತ್ತ ಧಾವಿಸುತ್ತಿದೆ.
ಬೆಂಗಳೂರು(ಜೂ.05): ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಶತಕದತ್ತ ಪ್ರಯಾಣ ಬೆಳೆಸಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೈಲ ಬೆಲೆ ನೂರು ರೂಪಾಯಿಯತ್ತ ಧಾವಿಸುತ್ತಿದೆ.
ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಶಿವಮೊಗ್ಗದಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 99 ರೂ. ತಲುಪಿದೆ.
ರಾಜ್ಯದಲ್ಲಿ ಕೊರೋನಾ ನಿಮಿತ್ತ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಿದ್ದರೂ ತೈಲ ಬೆಲೆ ಏರಿಕೆ ವಾಹನ ಸವಾರರಿಗೆ ತಲೆನೋವು ನೀಡಿದೆ.