ಅಂಗವೈಕಲ್ಯಕ್ಕೆ ಬೆದರದೆ, ಸೋಲೊಪ್ಪದೇ ಉದ್ಯಮಿಯಾದ ಫಿರೋಜ್

ಕೆಲವೊಮ್ಮೆ ದೇಹಕ್ಕೆ ಆಗುವ ಊನಗಳು ಮನಸ್ಸನ್ನೇ ಕುಗ್ಗಿಸಿಬಿಡುತ್ತವೆ. ಬದುಕನ್ನೇ ಮುಗಿಸಿಬಿಡುತ್ತವೆ. ಆದ್ರೆ ಮಡಿಕೇರಿಯಲ್ಲಿ ದಿವ್ಯಾಂಗರೊಬ್ಬರ ಸ್ವಾಲಂಬಿ ಬದುಕು ಹೀಗೆ ಕುಸಿದು ಹೋದವರ ಬಾಳಿಗೆ ಬೆಳಕಾಗುವಂತಿದೆ.  

Share this Video
  • FB
  • Linkdin
  • Whatsapp

ಇವರು ಫಿರೋಜ್... ಮಡಿಕೇರಿ(Madikeri) ನಗರದ ಚಾಮುಂಡೇಶ್ವರಿ ನಗರ ನಿವಾಸಿ. ಸಣ್ಣ ವಯಸ್ಸಿನಲ್ಲಿ ಆದ ಆರೋಗ್ಯ ಸಮಸ್ಯೆಯಿಂದಾಗಿ ಸೊಂಟದ ಕೆಳಗಿನ ಭಾಗವೇ ಸ್ವಾಧೀನ ತಪ್ಪಿ ಹೋಗುತ್ತದೆ.. ಲಕ್ಷಾಂತರ ರೂ ಖರ್ಚು ಮಾಡಿ ಚಿಕಿತ್ಸೆ ಮಾಡಿದ್ರೂ ಕಾಲು ಮೊದಲಿನಂತಾಗುವುದಿಲ್ಲ. ವ್ಹೀಲ್ ಚೇರ್(wheel chair) ಶಾಶ್ವತವಾಗುತ್ತದೆ. ಇದರಿಂದ ಕುಗ್ಗಿಹೋದ ಇವರು ಬಹಳಷ್ಟು ವೇದನೆ ಪಡುತ್ತಾರೆ. ಆದ್ರೆ ಒಂದಿನ ತಾನು ಯಾಕಾಗಿ ಕೊರಗಬೇಕು? ತನ್ನನ್ನು ದೇವರು ಇನ್ನೂ ಉಳಿಸಿದ್ದಾನೆ ಎಂದರೆ ತಾನು ಇನ್ನೂ ಏನೋ ಮಾಡಬಹುದು ಎಂದೇ ಅರ್ಥ. ಹಾಗಾಗಿ ಇನ್ನುಕೊರಗುವುದಿಲ್ಲ... ಜೀವನದಲ್ಲಿ ಏನಾದ್ರು ಮಾಡಿಯೇ ಮಾಡುತ್ತೇನೆ ಅಂತ ಪಣ ತೊಟ್ಟು ವ್ಹೀಲ್ ಚೇರ್ನಲ್ಲೇ ಕುಳಿತು ಹತ್ತು ಹಲವು ಕ್ಷೇತ್ರಗಳಲ್ಲಿ ಕೈಯಾಡಿಸ್ತಾರೆ. ಮೊಬೈಲ್ ಕರೆನ್ಸಿ ಶಾಪ್ ಓಪನ್ ಮಾಡ್ತಾರೆ. ಆದ್ರೆ ಅದು ಕೈಗೂಡುವುದಿಲ್ಲ. ಜನರಿಗೆ ವಿವಿಧ ಡಾಕ್ಯುಮೆಂಟ್ಗಳನ್ನ ಮಾಡಿಕೊಡುವುದು, ಜೆರಾಕ್ಸ್ ಮಾಡುವ ಶಾಪ್ ತೆರೆಯುತ್ತಾರೆ. ಅದೂ ಕೈಗೂಡುವುದಿಲ್ಲ

ಇಂತಹ ಸಂದರ್ಭದಲ್ಲೇ ಅವರಿಗೆ ಹೊಳೆದದ್ದು ಎಲ್ಇಡಿ ಬಲ್ಬ್(LED bulb) ತಯಾರಿಕೆ. ಹೌದು ಪಂಜಾಬ್ನಿಂದ ಕಚ್ಚಾ ವಸ್ತುಗಳನ್ನ ತರಿಸಿದ ಅವರು ತಮ್ಮದೇ ಬ್ರ್ಯಾಂಡ್‌ನ ಎಲ್ಇಡಿ ಬಲ್ಬ್ ಗಳನ್ನ ತಯಾರಿಸಲಾರಭಿಸುತ್ತಾರೆ. ಇದೀಗ ಆ ಕ್ಷೇತ್ರದಲ್ಲಿ ಯಶಸ್ವಿಯೂ ಆಗಿದ್ದಾರೆ.

2018 ಮತ್ತು 19ರಲ್ಲಿ ಜಲಪ್ರಳಯ ಸಂಭವಿಸಿದಾಗ ಬಹಳಷ್ಟು ಕಷ್ಟಪಡುತ್ತಾರೆ. ಆ ಸಂದರ್ಭ ಇವರ ಜೆರಾಕ್ಸ್ ಅಂಗಡಿ ವ್ಯಾಪಾರವಿಲ್ಲದೆ ಸಂಪೂರ್ಣ ನಷ್ಟ ಅನುಭವಿಸುತ್ತದೆ. ಆದ್ರೆ ಇದೀಗ ಎಲ್ಇಡಿ ಬಲ್ಬ್ ತಯಾರಿಕೆಯಿಂದ ಸಾಕಷ್ಟು ಪ್ರಗತಿ ಕಂಡಿದ್ದಾರೆ. ಇವರ ಬ್ರ್ಯಾಂಡ್ ಇತರೆ ಬ್ರ್ಯಾಂಡೆಡ್ ಬಲ್ಬ್‌ಗಳಿಂತ ಅಗ್ಗದ ಬೆಲೆಯಲ್ಲಿ ದೊರಕುತ್ತವೆ, ಕ್ವಾಲಿಟಿಯೂ ಅಷ್ಟೇ ಉತ್ತಮವಾಗಿದೆ. ಹಾಗಾಗಿ ಇವರ ಬಲ್ಬ್‌ಗಳಿಗೆ ಉತ್ತಮ ಬೇಡಿಕೆಯೂ ಇದೆ.

Investment Plans : ಕೋಟ್ಯಧಿಪತಿಯಾಗಲು ಇಲ್ಲಿದೆ ಫಾರ್ಮುಲಾ

ದೇಹ ಊನವಾಯಿತು, ಕೈ ಹಾಕಿದ ವ್ಯಾಪಾರಗಳೆಲ್ಲವೂ ನಷ್ಟವಾದವು ಅಂತ ಅವರು ಅಂದು ಜೀವನದಲ್ಲಿ ಚಿಂತೆ ಮಾಡುತ್ತಾ ಕುಳಿತಿದ್ದರೆ ಇಂದು ಅವರ ಜೀವನವೇ ಮುಗಿದು ಹೋಗುತ್ತಿತ್ತು. ಆದ್ರೆ ಜೀವನದಲ್ಲಿ ನನ್ನ ಪಾತ್ರ ಇನ್ನೂ ಬಹಳಷ್ಟಿದೆ ಎಂಬುದನ್ನ ಅರಿತು ಅದರಂತೆ ಮುನ್ನಡೆದ್ರು. ಹಾಗಾಗಿ ಇಂದು ಫಿರೋಜ್ ಸ್ವಾವಲಂಬಿ ಬದುಕಿನ ಸರದಾರನಾಗಿದ್ದಾರೆ. ಈ ಮೂಲಕ ಉಳಿದ ವಿಶೇಷ ಚೇತನರಿಗೂ ಮಾದರಿಯಾಗಿದ್ದಾರೆ.

Related Video