Investment Plans : ಕೋಟ್ಯಧಿಪತಿಯಾಗಲು ಇಲ್ಲಿದೆ ಫಾರ್ಮುಲಾ

ರಾತ್ರಿ ಬೆಳಗಾಗೋದ್ರಲ್ಲಿ ಕೋಟ್ಯಾಧಿಪತಿಯಾಗ್ಬೇಕು ಎಂದು ಅನೇಕರು ಕನಸು ಕಾಣ್ತಾರೆ. ಆದ್ರೆ ಬುದ್ಧಿವಂತರು ಭವಿಷ್ಯದ ಬಗ್ಗೆ ಆಲೋಚನೆ ಮಾಡ್ತಾರೆ. ಆರಂಭದಿಂದಲೇ ಉಳಿತಾಯ ಶುರು ಮಾಡಿ, ವಿಶ್ರಾಂತಿ ವಯಸ್ಸಲ್ಲಿ ರಿಲ್ಯಾಕ್ಸ್ ಆಗ್ತಾರೆ.
 

Investment Plans  How To Become Crorepati

ಸಂಬಳ (Salary ) ಕಡಿಮೆ ಇದೆ, ಹಾಗಾಗಿ ಉಳಿತಾಯ (Savings) ಕಷ್ಟ ಆಗ್ತಿದೆ. ಸಂಬಳ ಸ್ವಲ್ಪ ಜಾಸ್ತಿ ಇದ್ದಿದ್ರೆ ಸ್ವಲ್ಪ ಉಳಿತಾಯ ಮಾಡ್ಬಹುದಿತ್ತು. ಭವಿಷ್ಯಕ್ಕೆ ಸೇವಿಂಗ್ ಮುಖ್ಯ ಅಲ್ವಾ ಅಂತಾ ಬಹುತೇಕ ಮಂದಿ ಹೇಳೋದನ್ನು ನೀವು ಕೇಳಿರ್ಬಹುದು. ಆದ್ರೆ ಇದು ಸಂಪೂರ್ಣ ಸತ್ಯವಲ್ಲ. ಉಳಿತಾಯಕ್ಕೆ ಸಂಬಳಕ್ಕಿಂತ ಇಚ್ಛಾಶಕ್ತಿ ಬಹಳ ಮುಖ್ಯ. ದೊಡ್ಡ ಮಟ್ಟದಲ್ಲಿ ನೀವು ಉಳಿತಾಯ ಮಾಡ್ಬೇಕೆಂಬ ನಿಯಮ ಏನಿಲ್ಲ. ನೀವು ಸಣ್ಣ ಮೊತ್ತವನ್ನು ದಿನ ಅಥವಾ ತಿಂಗಳ ಲೆಕ್ಕದಲ್ಲೂ ಉಳಿತಾಯ ಮಾಡ್ಬಹುದು. ಇನ್ನೊಂದು ಕಠು ಸತ್ಯ ಏನೆಂದ್ರೆ, ಎಲ್ಲರೂ ಕೋಟ್ಯಾಧಿಪತಿ (millionaire) ಯಾಗಲು ಬಯಸ್ತಾರೆ. ಆದ್ರೆ ಯಾರೂ ಉಳಿತಾಯ ಮಾಡಲು ಮನಸ್ಸು ಮಾಡೋದಿಲ್ಲ. ಶಾರ್ಟ್ ಕಟ್  (Short cut ) ನಲ್ಲಿ ಕೋಟ್ಯಾಧಿಪತಿಯಾಗೋದು ಸಾಧ್ಯವಿಲ್ಲ. 

ಕೋಟ್ಯಾಧಿಪತಿಯಾಗಲು ಫಾರ್ಮುಲಾ (Formula) ಏನು ?: ಮೊದಲು ಉಳಿತಾಯ ಮಾಡುವ ಮನಸ್ಸು ಮಾಡಿ. ಯಾವುದೇ ಕಾರಣಕ್ಕೂ ಉಳಿತಾಯದಿಂದ ತಪ್ಪಿಸಿಕೊಳ್ಳಬೇಡಿ. ಸಣ್ಣ ಸಂಬಳವಾಗಿರಲಿ, ದೊಡ್ಡ ಸಂಬಳವಾಗಿರಲಿ, ಆರಂಭದಿಂದಲೇ ಸೇವಿಂಗ್ ಶುರು ಮಾಡ್ಬೇಕು. ನೀವು ಎಷ್ಟು ಬೇಗ ಉಳಿತಾಯ ಶುರು ಮಾಡ್ತಿರೋ ಅಷ್ಟು ಬೇಗ ನಿಮ್ಮ ಗುರಿ ಹತ್ತಿರಕ್ಕೆ ಬರುತ್ತದೆ. ಹತ್ತೋ ಇಪ್ಪತ್ತೋ ರೂಪಾಯಿ ಉಳಿತಾಯ ಮಾಡಿ, ಕೋಟ್ಯಾಧಿಪತಿಯಾಗಲು ಸಾಧ್ಯವಿಲ್ಲವೆಂದು ಜನರು ಹೇಳ್ತಾರೆ. ಆದ್ರೆ ಇದು ಸತ್ಯವಲ್ಲ. ಪ್ರತಿ ದಿನ 20 ರೂಪಾಯಿ ಸೇವ್ ಮಾಡಿ ಕೂಡ ನೀವು ನಿಮ್ಮ ಕನಸು ಈಡೇರಿಸಿಕೊಳ್ಳಬಹುದು.

ಒಂದು ದಿನವೂ ತಪ್ಪದೆ 20 ರೂಪಾಯಿ ಉಳಿತಾಯ ಮಾಡುವ ಮೂಲಕ ನೀವು 10 ಕೋಟಿಯವರೆಗೆ ಸೇವಿಂಗ್ ಮಾಡ್ಬಹುದು. ಮ್ಯೂಚುವಲ್ ಫಂಡ್ (Mutual Fund ) ಬಗ್ಗೆ ಎಲ್ಲರಿಗೂ ತಿಳಿದಿದೆ. ಅಲ್ಲಿ ಪ್ರತಿ ತಿಂಗಳು ನೀವು ಹೂಡಿಕೆ ಮಾಡ್ಬಹುದು. ನೀವು ಎಸ್ ಐಪಿ ಮೂಲಕ ಪ್ರತಿ ತಿಂಗಳು ಮ್ಯೂಚುವಲ್ ಫಂಡ್ ನಲ್ಲಿ ಕಡಿಮೆ ಎಂದ್ರೂ 500 ರೂಪಾಯಿ ಹೂಡಿಕೆ ಮಾಡ್ಬಹುದು. ದೀರ್ಘಾವಧಿಯ ಮ್ಯೂಚುವಲ್ ಫಂಡ್ ನಲ್ಲಿ ನಿಮಗೆ ಹೆಚ್ಚಿನ ರಿಟರ್ನ್ ಸಿಗುತ್ತದೆ. ಕೆಲವು ಫಂಡ್ಸ್ ನಲ್ಲಿ ಶೇಕಡಾ 20ರಷ್ಟು ರಿಟರ್ನ್ ನಿಮಗೆ ಸಿಗುತ್ತದೆ.

ಅಣಬೆಯಿಂದ ಅರಳಿದ ಬದುಕು: 1 ಪ್ಯಾಕೆಟ್‌ನಿಂದ ಆರಂಭವಾದ ಉದ್ಯಮ, ಈಗ ಪ್ರತಿದಿನ 40 ಸಾವಿರ ರೂ. ಆದಾಯ!

ಮೊದಲ ಸಂಬಳದಿಂದಲೇ ಸೇವಿಂಗ್ ಶುರು ಮಾಡಿ : ಕೆಲಸಕ್ಕೆ ಸೇರಿ, ಮೊದಲ ಸಂಬಳ ಸಿಗ್ತಿದ್ದಂತೆ ನೀವು ಉಳಿತಾಯ ಶುರು ಮಾಡಿದ್ರೆ ಆರಾಮವಾಗಿ ಕೋಟ್ಯಾಧಿಪತಿಯಾಗ್ಬಹುದು. ಆದ್ರೆ ಇದಕ್ಕೆ ತಾಳ್ಮೆ ಬಹಳ ಮುಖ್ಯ. ಪ್ರತಿ ದಿನ 20 ರೂಪಾಯಿ ಅಂದ್ರೆ ತಿಂಗಳಿಗೆ 600 ರೂಪಾಯಿ ಉಳಿತಾಯ ಮಾಡಿದಂತಾಯ್ತು. ಅದನ್ನು ಎಸ್ ಐಪಿಯಲ್ಲಿ ಹೂಡಿಕೆ ಮಾಡ್ಬೇಕು. 40 ವರ್ಷಕ್ಕೆ ಶೇಕಡಾ 15ರಷ್ಟು ವಾರ್ಷಿಕ ಬಡ್ಡಿ ಹಿಡಿದ್ರೆ ನಿಮಗೆ 10 ಕೋಟಿ ರೂಪಾಯಿ ಸಿಗುತ್ತೆ. ಅದೇ ಶೇಕಡಾ 20ರಷ್ಟು ಬಡ್ಡಿಯಿದ್ರೆ ನಿಮಗೆ 10.21 ಕೋಟಿ ಹಣ ಸಿಗುತ್ತದೆ. 

Personal Finance : ರೋಗಿಗಳ ಜೇಬಿಗೆ ಕತ್ತರಿ, ಮತ್ತಷ್ಟು ದುಬಾರಿ ಔಷಧಿ

ನಿಯಮಿತ ಉಳಿತಾಯ ಬಹಳ ಮುಖ್ಯ : ಮೊದಲೇ ಹೇಳಿದಂತೆ ಉಳಿತಾಯ ಮಾಡುವ ಗುರಿ ಇರಬೇಕು. ಪ್ರತಿ ದಿನ ತಪ್ಪದೆ ಉಳಿತಾಯ ಮಾಡಬೇಕು. 20 ವರ್ಷದ ಯುವಕ ಸಂಬಳಕ್ಕೆ ತಕ್ಕಂತೆ ಪ್ರತಿ ದಿನ 30 ರೂಪಾಯಿ ಉಳಿತಾಯ ಮಾಡಿದ್ದಾನೆ ಅಂದುಕೊಂಡ್ರೆ ಆತ ತಿಂಗಳಿಗೆ 900 ರೂಪಾಯಿ ಉಳಿತಾಯ ಮಾಡಬೇಕು. 40 ವರ್ಷಗಳ ಕಾಲ ಹೂಡಿಕೆ ಮಾಡಲು ಬಯಸುವುದಿಲ್ಲ, ಬೇಗ ರಿಟರ್ನ್ ಬೇಕು ಎನ್ನುವವರು ಹೂಡಿಕೆ ಮೊತ್ತವನ್ನು ಹೆಚ್ಚು ಮಾಡ್ಬೇಕು. ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಸಂಪೂರ್ಣ ಸುರಕ್ಷಿತವಲ್ಲ. ಅದರಲ್ಲೂ ಅಪಾಯವಿದೆ. ಹಾಗಾಗಿ ಹೂಡಿಕೆಗೆ ಮುನ್ನ ತಜ್ಞರನ್ನು ಸಂಪರ್ಕಿಸಿ, ಸಲಹೆ ಪಡೆಯುವುದು ಸೂಕ್ತ.  

Latest Videos
Follow Us:
Download App:
  • android
  • ios