ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ

ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದಿಂದ ಭಾರತೀಯ ಉದ್ಯಮಗಳಿಗೆ ಹೆಚ್ಚಿನ ಲಾಭಗಳು ದೊರೆಯಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು.25): ಭಾರತ ಹಾಗೂ ಬ್ರಿಟನ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್‌ ಅಂಕಿತ ಹಾಕಿದ್ದಾರೆ. ಉಭಯ ದೇಶಗಳ ವಾಣಿಜ್ಯ ಸಚಿವರು ಒಪ್ಪಂದಗಳಿಗೆ ಪ್ರಧಾನಿ ಸಮ್ಮುಖದಲ್ಲಿ ಸಹಿ ಮಾಡಿದರು.

ಕೇಂದ್ರ ಸರ್ಕಾರ vs ಉಪರಾಷ್ಟ್ರಪತಿ ಬೆಂಕಿ ಹೊತ್ತಿಕೊಂಡಿದ್ದೇಗೆ? ರಾಜೀನಾಮೆ ನೀಡಲು ಹಿಂದಿರುವ ಕಾರಣವೇನ
ಒಪ್ಪಂದದಿಂದ ಭಾರತದ ಉದ್ಯಮಗಳಿಗೆ ಹೆಚ್ಚು ಅನುಕೂಲ ಆಗಲಿದೆ. ದಶಕಗಳಿಂದ ಈ ಮುಕ್ತ ವ್ಯಾಪಾರ ಒಪ್ಪಂದ ನೆನೆಗುದಿಗೆ ಬಿದ್ದಿತ್ತು. ಟ್ರಂಪ್ ತೆರಿಗೆ ಯುದ್ಧದ ಸಂದರ್ಭದಲ್ಲಿ ಮಹತ್ವದ ಒಪ್ಪಂದ ಇದಾಗಿದೆ.

ಇದರಿಂದಾಗಿ ಬ್ರಿಟನ್‌ನ ಸ್ಕಾಚ್, ವಿಸ್ಕಿ ಬೆಲೆ ಇನ್ಮುಂದೆ ಭಾರತದಲ್ಲಿ ಕಡಿಮೆ ಬೆಲೆಗೆ ಸಿಗಲಿದ್ದರೆ, ಬ್ರಿಟನ್‌ನ ಐಷಾರಾಮಿ ​ಕಾರ್‌ಗಳ ಮೇಲೆ ತೆರಿಗೆ ಇಳಿಕೆ ಆಗಲಿದೆ. ಭಾರತದ ಬಹುತೇಕ ವಸ್ತುಗಳಿಗೆ ಬ್ರಿಟನ್‌ನಲ್ಲಿ ಶೂನ್ಯ ತೆರಿಗೆ ಇರಲಿದೆ.

Related Video