ಅಯ್ಯೋ ಶಿವನೇ..!: ಚಿನ್ನದ ಬೆಲೆ ಕೇಳಿರಿ ಸುಮ್ಮನೆ!

ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ| ಒಂದೇ ದಿನದಲ್ಲಿ ಚಿನ್ನದ ಬೆಲೆ 850 ರೂ. ಜಿಗಿತ| ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 41, 130 ರೂ.|  ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಚಿನ್ನದ ಬೆಲೆ| ಮುಂಬೈನಲ್ಲಿ 10 ಗ್ರಾಂ ಚಿನ್ನಕ್ಕೆ 41, 070 ರೂ.| ಹೊಸ ವರ್ಷದ ಆರಂಭದಿಂದ ಏರುತ್ತಲ್ಲೇ ಇರುವ ಚಿನ್ನದ ಬೆಲೆ| ಒಂದು ಕೆಜಿ ಬೆಳ್ಳಿ ಬೆಲೆಯಲ್ಲೂ 800 ರೂ. ಏರಿಕೆ|

First Published Jan 3, 2020, 5:20 PM IST | Last Updated Jan 3, 2020, 5:20 PM IST

ಬೆಂಗಳೂರು(ಜ.03): ಚಿನ್ನದ ಬೆಲೆ ಇಳಿಕೆಯನ್ನು ಆಶಿಸುತ್ತಿದ್ದ ಆಭರಣ ಪ್ರಿಯರಿಗೆ ಕಹಿ ಸುದ್ದಿಯೊಂದು ಬರಸಿಡಿಲಿನಂತೆ ಬಂದೆರಗಿದೆ. ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದ್ದು, ಒಂದೇ ದಿನದಲ್ಲಿ 850 ರೂ. ಜಿಗಿತ ಕಂಡಿದೆ. ಬೆಂಗಳೂರಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 41, 130 ರೂ. ಆಗಿದ್ದು, ಸಾರ್ವಕಾಲಿಕ ದಾಖಲೆ ಕಂಡಿದೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

ಅದರಂತೆ ಮುಂಬೈ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 41, 070 ರೂ. ಆಗಿದೆ. ಹೊಸ ವರ್ಷದ ಆರಂಭದಿಂದ ಚಿನ್ನದ ಬೆಲೆ ಏರುತ್ತಲ್ಲೇ ಇದ್ದು, ಆಭರಣ ಪ್ರಿಯರಿಗೆ ತೀವ್ರ ನಿರಾಸೆ ಮೂಡಿಸಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ 814 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿ ಬೆಲೆ 47,836 ರೂ. ಆಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...