s: ಝೀರೋ ಟು ಹಿರೋ: ಅದಾನಿ ಸಾಮ್ರಾಜ್ಯದ ಅಸಲಿ ಕಹಾನಿ

ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಅದಾನಿ ಈಗ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿ ಮತ್ತು ಕುಟುಂಬದ ನಿವ್ವಳ ಮೌಲ್ಯ 123.2 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. 

First Published Apr 27, 2022, 5:09 PM IST | Last Updated Apr 27, 2022, 5:09 PM IST

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತು ಏರುತ್ತಲೇ ಇದೆ. ಅವರು ಸಂಪತ್ತಿನ ವಿಷಯದಲ್ಲಿ ವಿಶ್ವದ ಲೆಜೆಂಡರಿ ಬಿಲಿಯನೇರ್ ಮತ್ತು ಹೂಡಿಕೆದಾರರಾದ ವಾರೆನ್ ಬಫೆಟ್ ಅವರನ್ನು ಹಿಂದಕ್ಕೆ ಹಾಕಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಅದಾನಿ ಈಗ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿ ಮತ್ತು ಕುಟುಂಬದ ನಿವ್ವಳ ಮೌಲ್ಯ 123.2 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. 

ಈಗ ಜಗತ್ತಿನಲ್ಲಿ ಅದಾನಿಗಿಂತ ಶ್ರೀಮಂತರು ಉಳಿದಿರುವುದು ನಾಲ್ಕು ಜನ ಮಾತ್ರ. ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ $ 269.7 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅಮೆಜಾನ್‌ನ ಜೆಫ್ ಬೆಜೋಸ್ $170.2 ಶತಕೋಟಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. LVMH ನ ಬರ್ನಾರ್ಡ್ ಅರ್ನಾಲ್ಟ್ & ಫ್ಯಾಮಿಲಿ $166.8 ಶತಕೋಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದೇ ವೇಳೆ ಸಮಯದಲ್ಲಿ, ಮೈಕ್ರೋಸಾಫ್ಟ್ನ ಬಿಲ್ ಗೇಟ್ಸ್ $ 130.2 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ

ಅಷ್ಟಕ್ಕೂ ಅದಾನಿ ಮುಕೇಶ್ ಅಂಬಾನಿ ಸೇರಿ ಜಗತ್ತಿನ ಕುಬೇರರನ್ನು ಹಿಂದಿಕ್ಕಿದ್ದು ಹೇಗೆ? ಅವರ ಯಶಸ್ಸಿನ ಗುಟ್ಟೇನು? ಇಲ್ಲಿದೆ ಇಂಟರರೆಸ್ಟಿಂಗ್ ಕಹಾನಿ

Video Top Stories